ಹೈದರಾಬಾದ್​:ಗಂಡನ ಹಿಂಸೆ ತಾಳಲಾರದೇ ಮಹಿಳೆಯೊಬ್ಬಳು ಪತಿಗೆ ಹೇಳದೇ ಮನೆಬಿಟ್ಟು ಹೋಗಿರುವ ಘಟನೆ ಹೈದರಾಬಾದ್​ನ ಜುಬಿಲಿ ಹಿಲ್ಸ್​ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಈ ಬಗ್ಗೆ ಮಾತನಾಡಿರುವ ಸಬ್​ ಇನ್ಸ್​ಪೆಕ್ಟರ್​ ಜಿ. ಶೇಖರ್​, ಜುಬಿಲಿ ಹಿಲ್ಸ್​ ರೋಡ್​ ನಂಬರ್​ 100 ಸಿ ಗಾಯಿತ್ರಿ ಹಿಲ್ಸ್​ ನಿವಾಸಿ ಸಿ.ಎಚ್​. ಪ್ರಸಾದ್​ ಅಡುಗೆ ಭಟ್ಟನ ಕೆಲಸ ಮಾಡಿಕೊಂಡಿದ್ದರು. 2018ರಲ್ಲಿ ದಿವ್ಯಾ (21) ಎಂಬಾಕೆಯ ಪ್ರೀತಿಯ ಬಲೆಯಲ್ಲಿ ಬಿದ್ದಿದ್ದ ಪ್ರಸಾದ್​, ಹಿರಿಯರ ಸಮ್ಮುಖದಲ್ಲಿ ಮದುವೆ ಸಹ ಆಗಿದ್ದ.
ಮೂರು ವರ್ಷಗಳ ಕಾಲ ಸುಂದರ ಸಂಸಾರ ಸಹ ನಡೆಸಿದ್ದ. ಆದರೆ, ಏಪ್ರಿಲ್​ 25ರಂದು ಸತಿ-ಪತಿಯ ನಡುವೆ ಜಗಳ ನಡೆದಿದೆ. ಇದಾದ ಬಳಿಕ ಅದೇ ತಿಂಗಳು 30ರಂದು ಬೆಳಗ್ಗೆ 11 ಗಂಟೆಗೆ ಯಾರಿಗೂ ಹೇಳದೆ ದಿವ್ಯಾ ಮನೆಬಿಟ್ಟು ಹೋಗಿದ್ದಾಳೆ. ಇತ್ತ ಪತಿ ಸಾಕಷ್ಟು ಹುಡುಕಾಡಿ ಕೊನೆಗೆ ಪತಿ ಸಿಗದಿದ್ದಾಗ ಠಾಣೆಗೆ ತೆರಳಿ ದೂರು ನೀಡಿದ್ದಾನೆ.
ಪ್ರಕರಣ ದಾಖಲಿಸಿರುವ ಪೊಲೀಸರು ದಿವ್ಯಾಳ ಪತ್ತೆಗೆ ಬಲೆ ಬೀಸಿದ್ದಾರೆ. ಆದರೆ, ಇದುವರೆಗೂ ಆಕೆಯ ಸುಳಿವು ಸಿಕ್ಕಿಲ್ಲ. ಆಕೆಯ ಬಳಿಯಿದ್ದ ಫೋನ್​ ಕೂಡ ಸ್ವಿಚ್​ ಆಫ್​ ಆಗಿದೆ. ಹೇಗಾದರೂ ಮಾಡಿ ನನ್ನ ಪತ್ನಿಯನ್ನು ಹುಡುಕಿ ಕೊಡಿ ಎಂದು ಪ್ರಸಾದ್​ ಪೊಲೀಸರ ಬಳಿ ಮನವಿ ಮಾಡಿಕೊಂಡಿದ್ದಾನೆ.(ಏಜೆನ್ಸೀಸ್​)
ಈ ನಾಣ್ಯಗಳು ನಿಮ್ಮಲ್ಲಿದ್ದರೆ 10 ಲಕ್ಷ ರೂ. ಗೆಲ್ಲಬಹುದು- ಅದೃಷ್ಟ ಪರೀಕ್ಷಿಸಿಕೊಳ್ಳುವ ಸಮಯವಿದು…

ಜಾಹೀರಾತಿನಲ್ಲಿ ನಟಿ ಸಂಯುಕ್ತಾ ಪ್ರಾಣಿಪ್ರೀತಿ

ತಡರಾತ್ರಿ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಆತ್ಮಹತ್ಯೆ! ಮುದ್ದಾದ ಯುವತಿ ಬಾಳಿಗೆ ಕೊಳ್ಳಿ ಇಟ್ಟಿದ್ಯಾರು?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × three =
Remember me
