ಶ್ರೀನಗರ:ಜಮ್ಮು ಮತ್ತು ಕಾಶ್ಮೀರದಲ್ಲಿ ಹಿಂದುಗಳನ್ನು ಗುರಿಯಾಗಿಸಿಕೊಂಡು ಭಯೋತ್ಪಾದಕರು ನಡೆಸುತ್ತಿರುವ ಗುಂಡಿನ ದಾಳಿ ಮುಂದುವರಿದಿದ್ದು, ಉಗ್ರರ ಗುಂಡೇಟಿಗೆ ರಾಜಸ್ಥಾನ ಮೂಲದ ಬ್ಯಾಂಕ್​ ಮ್ಯಾನೇಜರ್​ ಮೃತಪಟ್ಟಿರುವ ಘಟನೆ ಕಣಿವೆ ನಾಡಿನ ಕುಲ್ಗಾಮ್​ ಜಿಲ್ಲೆಯಲ್ಲಿ ಗುರುವಾರ (ಜೂನ್​. 2) ನಡೆದಿದೆ.
ಹತ್ಯೆಯಾದ ಬ್ಯಾಂಕ್​ ಮ್ಯಾನೇಜರ್​ನನ್ನು ವಿಜಯ್​ ಕುಮಾರ್​ ಎಂದು ಗುರುತಿಸಲಾಗಿದೆ. ದಕ್ಷಿಣ ಕಾಶ್ಮೀರದ ಕುಲ್ಗಾಮ್​ ಜಿಲ್ಲೆಯ ಮೊಹನ್​ ಪೊರಾ ಏರಿಯದಲ್ಲಿರುವ ಎಲ್ಲಕ್ವೈ ದೇಹತಿ ಬ್ಯಾಂಕ್​ನಲ್ಲಿ ಮ್ಯಾನೇಜರ್​ ಆಗಿ ಸೇವೆ ಸಲ್ಲಿಸುತ್ತಿದ್ದರು. ವಿಜಯ್​ ಕುಮಾರ್​ ರಾಜಸ್ಥಾನದ ಹನುಮಗಢ ಮೂಲದವರು. ಗುಂಡೇಟಿನಿಂದ ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ.
ಇಂದು ಬೆಳಗ್ಗೆ ಬಾಂಬ್​ ಸ್ಫೋಟದಿಂದ ಮೂವರು ಯೋಧರು ಹುತಾತ್ಮರಾದ ಶೋಪಿಯಾನ ಪ್ರದೇಶದಿಂದ ಕೇವಲ 13 ಕಿ.ಮೀ ದೂರದಲ್ಲೇ ಈ ಘಟನೆ ನಡೆದಿದೆ. ಕುಲ್ಗಾಮ್​ ಜಿಲ್ಲೆಯ ಗೋಪಾಲ್ಪೋರಾ ಪ್ರದೇಶದಲ್ಲಿ ಹಿಂದು ಮಹಿಳೆ ಹತ್ಯೆಯಾದ ಎರಡೇ ದಿನದಲ್ಲಿ ಇದೀಗ ಬ್ಯಾಂಕ್​ ಮ್ಯಾನೇಜರ್​ ಹತ್ಯೆಯಾಗಿದೆ. ಉಗ್ರರ ಗುಂಡೇಟಿಗೆ ಹತ್ಯೆಯಾದ ಮಹಿಳೆಯನ್ನು ರಜನಿ ಬಾಲಾ ಎಂದು ಗುರುತಿಸಲಾಗಿದೆ. ಈಕೆ ಶಾಲಾ ಶಿಕ್ಷಕಿಯಾಗಿದ್ದರು. ಗಂಡ ಮತ್ತು ಮಗಳ ಜತೆ ಜಮ್ಮು ವಿಭಾಗದ ಸಾಂಬಾದಲ್ಲಿ ವಾಸಿಸುತ್ತಿದ್ದರು.
ಶಿಕ್ಷಕಿ ಹತ್ಯೆಯಾದ ಕೇವಲ ಎರಡೇ ದಿನದಲ್ಲಿ ಬ್ಯಾಂಕ್​ ಮ್ಯಾನೇಜರ್​ ವಿಜಯ್​ ಕುಮಾರ್​ ಕೊಲೆಯಾಗಿದೆ. ಕಳೆದ ವಾರ ಟಿವಿ ಕಲಾವಿದೆ ಅಮ್ರೀನ್​ ಭಟ್​ ಅವರನ್ನು ಲಷ್ಕರ್​ ಇ ತೊಯ್ಬಾ ಸಂಘಟನೆಯ ಉಗ್ರರು ಬದ್ಗಾಮ್​ ಜಿಲ್ಲೆಯ ಛಡೂರಾ ಏರಿಯಾದಲ್ಲಿ ಗುಂಡಿಟ್ಟು ಹತ್ಯೆಗೈದಿದ್ದರು. ಮೇ 12ರಂದು ಕಂದಾಯ ಇಲಾಖೆ ಉದ್ಯೋಗಿ ರಾಹುಲ್​ ಭಟ್​ ಎಂಬುವರನ್ನು ಬದ್ಗಾಮ್​ ಜಿಲ್ಲೆಯಲ್ಲೇ ಉಗ್ರರು ಹತ್ಯೆ ಮಾಡಿದ್ದರು. ಹಿಂದುಗಳನ್ನೇ ಉಗ್ರರು ಟಾರ್ಗೆಟ್​ ಮಾಡಿದ್ದು, ಸದ್ಯ ಆತಂಕದ ವಾತಾವರಣದಲ್ಲಿ ಬದುಕುವಂತಾಗಿದೆ.(ಏಜೆನ್ಸೀಸ್​)
SSLC ಪರೀಕ್ಷೇಲಿ ಡಿಸ್ಟಿಂಕ್ಷನ್​ ಬಂದಾಕೆ ಪ್ರಥಮ ಪಿಯು ಎಕ್ಸಾಂ​ನಲ್ಲಿ ಫೇಲಾಗ್ತೀನಿ ಅಂತಾ ಹೆದರಿ ಆತ್ಮಹತ್ಯೆ

VIDEO: ಯುವತಿ ಜತೆ ಮಾಜಿ ಸಚಿವ ಲವ್ವಿಡವ್ವಿ: ಪತ್ನಿ ಕೈಲಿ ರೆಡ್​ಹ್ಯಾಂಡ್​ ಸಿಕ್ಕಿಬಿದ್ದು ಪೇಚಾಟ- ವಿಡಿಯೋ ವೈರಲ್

ತಮಿಳುನಾಡಿನಿಂದ ಉತ್ತರ ಭಾರತೀಯರಿಗೆ ಗೇಟ್​ ಪಾಸ್​! ಡಿಜಿಪಿ ಶೈಲೆಂದ್ರ ಬಾಬು ಕೊಟ್ಟ ಸ್ಪಷ್ಟನೆ ಹೀಗಿದೆ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × two =
Remember me
