ಹೈದರಾಬಾದ್​:ಒಂದೇ ಕುಟುಂಬದ ಮೂವರು ಆತ್ಮಹತ್ಯೆಗೆ ಶರಣಾಗಿರುವ ದುರಂತ ಘಟನೆ ತೆಲಂಗಾಣದ ಕರೀಮ್​ನಗರದಲ್ಲಿ ಸೋಮವಾರ (ಫೆ.7) ನಡೆದಿದೆ.
ಬೈರಿ ಶಂಕರಯ್ಯ (55) ಮತ್ತು ಜಮುನಾ (50) ದಂಪತಿ ಕರೀಮ್​ನಗರದ ಕಂಟಪಲ್ಲಿಯ ನಿವಾಸಿಗಳು. ಕೈಮಗ್ಗ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ದಂಪತಿಗೆ ಇಬ್ಬರು ಹೆಣ್ಣು ಮಕ್ಕಳು ಮತ್ತು ಓರ್ವ ಗಂಡು ಮಗನಿದ್ದಾನೆ. ಇದೀಗ ಶಂಕರಯ್ಯ ಮತ್ತು ಜಮುನಾ ದಂಪತಿ ಮಗ ಶ್ರೀಧರ್ (25)​ ಜತೆಗೂಡಿ ತಮ್ಮ ಮನೆಯಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಇಬ್ಬರು ಹೆಣ್ಣು ಮಕ್ಕಳಿಗೂ ಈಗಾಗಲೇ ಮದುವೆ ಮಾಡಿಕೊಡಲಾಗಿದೆ. ಕಿರಿಯ ಮಗಳಿಗೆ ಮೂರು ತಿಂಗಳ ಹಿಂದಷ್ಟೇ ಅದ್ಧೂರಿಯಾಗಿ ಮದುವೆ ಆಗಿತ್ತು. ಇದೀಗ ಮೂವರು ಸಾವಿಗೀಡಾಗಿದ್ದು, ಹೆಣ್ಣು ಮಕ್ಕಳಿಗೆ ತವರು ಮನೆ ಶಾಶ್ವತವಾಗಿ ಇಲ್ಲದಂತಾಗಿದೆ. ಸಾಲದ ಸುಳಿಯಲ್ಲೇ ಸಿಲುಕಿದ್ದೇ ಸಾವಿಗೆ ಕಾರಣ ಎಂದು ತಿಳಿದುಬಂದಿದೆ. ಪ್ರಕರಣ ದಾಖಲಾಗಿದ್ದು, ತನಿಖೆ ಆರಂಭವಾಗಿದೆ.(ಏಜೆನ್ಸೀಸ್​)
ಕರೊನಾಗೆ ಗಂಡ ಬಲಿ: ಕಂಗಾಲಾದ ಪತ್ನಿ-ಮಗ: ವಿಧವೆಗೆ ಬಾಳು ಕೊಟ್ಟು ಮಾದರಿಯಾದ ಮೃತನ ಸ್ನೇಹಿತ!

ಕೈ-ಕಾಲು ತೊಳೆಯಲು ಕಾಳಿ ನದಿ ದಡಕ್ಕೆ ಹೋದವನನ್ನು ಎಳೆದೊಯ್ದ ಮೊಸಳೆ: ದಾಂಡೇಲಿ ಯುವಕನ ದುರಂತ ಸಾವು

ಫ್ರೀ ಇದ್ದಾಗ ಕರೆ ಮಾಡಲು ಹೇಳಿ ನಟಿಗೆ ಫೋನ್​ ನಂಬರ್​ ಕೊಟ್ಟ ನೆಟ್ಟಿಗನಿಗೆ ಕಾದಿತ್ತು ಬಿಗ್​ ಶಾಕ್​..!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:six + three =
Remember me
