ವಿಜಯವಾಡ:ಬ್ಯೂಟಿ ಪಾರ್ಲರ್​ ಸೋಗಿನಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಗ್ಯಾಂಗ್​ ಅನ್ನು ಪೂರ್ವ ಗೋದಾವರಿಯ ಕಾಕಿನಾಡ ಪೊಲೀಸರು ಬಂಧಿಸಿದ್ದಾರೆ.
ಎರಡು ತಿಂಗಳಿಂದ ಸರ್ವಪಾವರಂ ಪೊಲೀಸ್​ ಠಾಣೆ ವ್ಯಾಪ್ತಿಯಲ್ಲಿ ಬರುವ ಸಿದ್ಧಾರ್ಥ ನಗರ ಕೇಂದ್ರದಲ್ಲಿ ಬಾಡಿಗೆ ಮನೆಯಲ್ಲಿ ಸುಧಾರಾಣಿ ಎಂಬಾಕೆಯನ್ನು ಬ್ಯೂಟಿ ಪಾರ್ಲರ್​ ನಡೆಸುತ್ತಿದ್ದಳು. ಮೇಘನಾ ಫ್ಯಾಮಿಲಿ ಬ್ಯೂಟಿ ಸಲೂನ್​ ಹೆಸರಿನಲ್ಲಿ ಪಾರ್ಲರ್​ ನಡೆಯುತ್ತಿತ್ತು. ಇಬ್ಬರು ಮಹಿಳೆಯರನ್ನು ಕೆಲಸ ಮಾಡಲು ನೇಮಿಸಿಕೊಳ್ಳಲಾಗಿತ್ತು.
ಪಾರ್ಲರ್​ ನಡೆಸುತ್ತಾ ಸುಧಾರಾಣಿ ರಾತ್ರಿ ಉದ್ಯಮಕ್ಕೆ ಎಂಟ್ರಿಕೊಟ್ಟಿದ್ದಳು. ಸಾಮಾಜಿಕ ಜಾಲತಾಣದಲ್ಲಿ ಯುವಕರನ್ನು ಸೆಳೆದು ಇಬ್ಬರು ಮಹಿಳೆಯರೊಂದಿಗೆ ವೇಶ್ಯಾವಾಟಿಕೆಯಲ್ಲಿ ಸುಧಾರಾಣಿ ತೊಡಗಿದ್ದಳು. ಈ ಬಗ್ಗೆ ಸ್ಥಳೀಯ ಜನರಿಗೆ ಅನುಮಾನ ಮೂಡಿತ್ತು. ಅಲ್ಲದೆ, ಪೊಲೀಸರಿಗೆ ಮಾಹಿತಿಯನ್ನು ನೀಡಿದ್ದರು.
ಗುರುವಾರ ದಾಳಿ ಮಾಡಿದ ಪೊಲೀಸರು ಸುಧಾರಾಣಿಯ ಜತೆಯಲ್ಲಿ ವೇಶ್ಯಾವಾಟಿಕೆ ಆಯೋಜಿಸುತ್ತಿದ್ದವರನ್ನು ಬಂಧಿಸಿದ್ದಾರೆ. ಇದೇ ವೇಳೆ ಮೂವರು ವಿಧವೆಯರು ಮತ್ತು ಇಬ್ಬರು ಯುವತಿಯರನ್ನು ಪೊಲೀಸರು ರಕ್ಷಿಸಿದ್ದಾರೆ. ಇದೇ ವೇಳೆ 4 ಸೆಲ್​ಫೋನ್​ ಮತ್ತು 2,250 ರೂಪಾಯಿ ನಗದನ್ನು ವಶಕ್ಕೆ ಪಡೆಯಲಾಗಿದ್ದು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.(ಏಜೆನ್ಸೀಸ್​)
ರಸ್ತೆಯಲ್ಲೇ ಮಹಿಳೆಯ ಮೇಲೆರಗಿದ ಯುವಕ: ಸಿಸಿಟಿವಿಯಲ್ಲಿ ಕಾಮಾಂಧನ ಅಸಹ್ಯ ವರ್ತನೆ ಸೆರೆ!

ವರ್ಲ್ಡ್‌ ಕಪ್‌ ಆಟಕ್ಕೂ ಮುನ್ನ ಸೆಕ್ಸ್‌ನಲ್ಲಿ ತೊಡಗಿಸಿಕೊಳ್ಳಿ ಎಂದಿದ್ದೆ: ಸ್ಫೋಟಕ ರಹಸ್ಯ ಬಿಚ್ಚಿಟ್ಟ ತರಬೇತುದಾರ

ಮಗನಿಗೆ ಒಳ್ಳೆಯ ಹೆಣ್ಣೇ ಬೇಕು, ನಮಗೆ ಆಸೆಯೇ ಇರಲ್ವಾ? ಡೆತ್‌ನೋಟ್‌ ಬರೆದು ನವವಿವಾಹಿತೆ ಆತ್ಮಹತ್ಯೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 3 =
Remember me
