ಛೆರ್ಪ್ಪು:ಕಳೆದ 12 ವರ್ಷಗಳಿಂದ ಹಾಸಿಗೆ ಹಿಡಿದಿದ್ದ ಮಾಜಿ ಯುವ ಕಾಂಗ್ರೆಸ್​ ಜಿಲ್ಲಾಧ್ಯಕ್ಷ ಶಿಬು ಜಾರ್ಜ್​ ಕೊನೆಗೂ ತಮ್ಮ ಜೀವನ ಸಂಗಾತಿಯನ್ನು ಕಂಡುಕೊಂಡಿದ್ದಾರೆ. ಅಲುವಾ ಮೂಲದ ಸೋನಿಯಾ ಎಂಬಾಕೆಯನ್ನು ಜಾರ್ಜ್​ ವರಿಸಿದ್ದಾರೆ. ಈಕೆ ಯುವ ಕಾಂಗ್ರೆಸ್​ ಪಕ್ಷದ ಕಾರ್ಯಕರ್ತೆ ಹಾಗೂ ಸದಸ್ಯೆಯಾಗಿದ್ದಾರೆ. ಇಬ್ಬರು ರಿಜಿಸ್ಟರ್​ ಮದುವೆ ಆಗಿದ್ದಾರೆ.
ಕಾಂಗ್ರೆಸ್​ ನಾಯಕರಾದ ಒಮೆನ್​ ಚಾಂಡಿ ಮತ್ತು ರಮೇಶ್​ ಚೆನ್ನಿಥಲ ಅವರು ನವದಂಪತಿಗೆ ದೂರವಾಣಿ ಮೂಲಕ ಶುಭ ಹಾರೈಸಿದ್ದಾರೆ. ಜಾರ್ಜ್​ ಕುಟುಂಬಸ್ಥರು ಮತ್ತು ಆಪ್ತರ ಸಮ್ಮುಖದಲ್ಲಿ ವಿವಾಹ ನೆರವೇರಿದೆ. ಜಾರ್ಜ್​ ಮತ್ತು ಸೋನಿಯಾ ಆರು ತಿಂಗಳ ಹಿಂದೆ ಮಾಟ್ರಿಮೊನಿಯಲ್​ ವೆಬ್​ಸೈಟ್​ ಮೂಲಕ ಭೇಟಿಯಾಗಿದ್ದರು. ಜಾರ್ಜ್​ ಮನೆಗೆ ಭೇಟಿ ನೀಡಿದ್ದ ಸೋನಿಯಾ ಮದುವೆ ಆಗುವ ಬಯಕೆಯನ್ನು ವ್ಯಕ್ತಪಡಿಸಿದ್ದರು.
ಬೆಂಗಳೂರಿನಲ್ಲಿ ಕಾಸ್ಮೆಟಾಲಜಿ ಕೋರ್ಸ್ ಮುಗಿಸಿರುವ ಸೋನಿಯಾ, ಮೂರು ವರ್ಷಗಳ ಕಾಲ ಇರಾಕ್‌ನಲ್ಲಿರುವ ಅಮೇರಿಕನ್ ಕ್ಯಾಂಪ್‌ನಲ್ಲಿ ಕೆಲಸ ಮಾಡಿದ್ದಾರೆ. ಈಗ ಕೇರಳದಲ್ಲಿ ಕಾಸ್ಮೆಟಾಲಜಿಸ್ಟ್ ಆಗಿ ಕೆಲಸ ಮಾಡುತ್ತಿದ್ದಾರೆ. ಸೋನಿಯಾ ಚುನಂಗನವೇಲಿ ಮನೆಯ ತಂಕಚನ್ ಮತ್ತು ಅಣ್ಣಾ ದಂಪತಿಯ ಪುತ್ರಿ. 2009ರ ಜನವರಿ 30ರಲ್ಲಿ ಕಟ್ಟಡವೊಂದರ ಮೂರನೇ ಮಹಡಿಯಿಂದ ಕೆಳಗೆ ಬಿದ್ದು ಜಾರ್ಜ್​ ಗಾಯಗೊಂಡಿದ್ದ. ಅಡೂರಿನಲ್ಲಿ ನಡೆದ ರಾಜ್ಯ ಯುವ ಕಾಂಗ್ರೆಸ್ ಶಿಬಿರದಲ್ಲಿ ಪಾಲ್ಗೊಂಡು ಹೊರಡುವ ಮುನ್ನವೇ ಅಪಘಾತ ಸಂಭವಿಸಿತ್ತು. ಅಪಘಾತ ನಡೆದ 5 ದಿನಗಳ ಬಳಿಕ ಪ್ರಜ್ಞೆ ಬಂದಿತ್ತು. 6 ತಿಂಗಳ ನಂತರ ಗಾಲಿಕುರ್ಚಿಯಲ್ಲಿ ಕುಳಿತುಕೊಳ್ಳಲು ಸಾಧ್ಯವಾಗಿದ್ದರೂ, ಕಳೆದ 12 ವರ್ಷಗಳಿಂದ ಅವರು ಅದೇ ಸ್ಥಿತಿಯಲ್ಲಿದ್ದಾರೆ. ಇದೀಗ ಜಾರ್ಜ್​ರನ್ನು ಮದುವೆಯಾಗುವ ಮೂಲಕ ಮೂಲಕ ಹೊಸ ಜೀವನ ಕೊಟ್ಟ ಸೋನಿಯಾ ಅವರಿಗೆ ಮೆಚ್ಚುಗೆ ಮಹಾಪೂರ ಹರಿದು ಬರುತ್ತಿದೆ.
ಜಾರ್ಜ್​ ಇರಿಂಜಲಕುಡದ ಕ್ರೈಸ್ಟ್ ಕಾಲೇಜಿನ ಹಳೆ ವಿದ್ಯಾರ್ಥಿ. ಅವರ ಸ್ನೇಹಿತರು ವಧು-ವರರಿಗೆ ಉಂಗುರಗಳನ್ನು ಉಡುಗೊರೆಯಾಗಿ ನೀಡಿದರು.(ಏಜೆನ್ಸೀಸ್​)
ಮಾಡೆಲ್​ಗಳಿಬ್ಬರ ದುರಂತ ಸಾವು: ಭೀಕರ ಕಾರು ಅಪಘಾತಕ್ಕೆ ಕಾರಣ ಬಿಚ್ಚಿಟ್ಟ ಪೊಲೀಸ್​ ಆಯುಕ್ತ
ಇದೆಂಥಾ ಹುಚ್ಚಾಟ? ಜೀವಂತ ನಾಗರಹಾವನ್ನ ಕೈಯಲ್ಲಿಡಿದು ಊರೆಲ್ಲಾ ಸುತ್ತಾಡಿದ! ವಿಡಿಯೋ ವೈರಲ್​
ಆಕೆ ನನಗೆ ಹುಟ್ಟಿದ ಮಗಳಲ್ಲ: ವಿವಾದದ ಬಳಿಕ ಸಿನಿಮಾದಿಂದ ಬ್ರೇಕ್​ ಪಡೆದುಕೊಂಡ ನಟಿ ಶ್ರೀಲೀಲಾ!
ಒಂದೇ ದಿನ ಒಟ್ಟಿಗೆ ಮದ್ವೆಯಾದ 6 ಸಹೋದರಿಯರು: ಈ ವಿಶೇಷ ವಿವಾಹದ ಹಿನ್ನೆಲೆ ಕೇಳಿದ್ರೆ ಮೆಚ್ಚಿಕೊಳ್ತೀರಾ!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:1 × five =
Remember me
