ಕೊಚ್ಚಿ:ಬೆಂಗಳೂರು ವಿದ್ಯಾರ್ಥಿನಿ ಗೋಪಿಕಾ ಸುರೇಶ್​ ಅವರು 2021ನೇ ಸಾಲಿನ ಮಿಸ್​ ಕೇರಳ ಕಿರೀಟಕ್ಕ ಭಾಜನರಾಗಿದ್ದಾರೆ. ಗುರುವಾರ ಸಂಜೆ ಕೊಚ್ಚಿಯಲ್ಲಿ ನಡೆದ ಸ್ಪರ್ಧೆಯಲ್ಲಿ ಗೆಲುವು ದಾಖಲಿಸುವ ಮೂಲಕ ಮಿಸ್​ ಕೇರಳ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ.
ಸ್ಪರ್ಧೆಯಲ್ಲಿ ಗೋಪಿಕಾ ಮೊದಲ ಸ್ಥಾನ ಪಡೆದರೆ, ಎರ್ನಾಕುಲಂ ನಿವಾಸಿ ಲಿವ್ಯಾ ಮತ್ತು ತ್ರಿಸ್ಸೂರ್​ ಮೂಲದ ಗಗನಾ ಗೋಪಾಲ್​ ಅವರು ಕ್ರಮವಾಗಿ ಮೊದಲು ಮತ್ತು ಎರಡನೇ ರನ್ನರ್​ ಅಪ್​ ಸ್ಥಾನ ಪಡೆದುಕೊಂಡರು.
ಒಟ್ಟು 25 ಸ್ಪರ್ಧಿಗಳನ್ನು ಹಿಂದಿಕ್ಕಿ ಗೋಪಿಕಾ ಮಿಸ್​ ಕೇರಳ ಪಟ್ಟಕ್ಕೇರಿದ್ದಾರೆ. ಕೇರಳದ ಕಣ್ಣೂರು ಮೂಲದ ಗೋಪಿಕಾ ಸುರೇಶ್​, ಬೆಂಗಳೂರಿನ ಶಿಕ್ಷಣ ಪಡೆಯುತ್ತಿದ್ದಾರೆ. ಎರಡನೇ ರನ್ನರ್​ ಅಪ್​ ಗಗನಾ ಕೂಡ ವಿದ್ಯಾರ್ಥಿನಿಯಾಗಿದ್ದು, ಆಸ್ಟ್ರೇಲಿಯಾ ಯೂನಿವರ್ಸಿಟಿಯಲ್ಲಿ ಅಧ್ಯಯನ ಮಾಡುತ್ತಿದ್ದಾರೆ.

ಸ್ಪರ್ಧೆ ತೀರ್ಪುಗಾರರ ವಿಭಾಗದಲ್ಲಿ ಚಲನಚಿತ್ರ ನಿರ್ಮಾಪಕ ಜಿತು ಜೋಸೆಫ್ ಮತ್ತು ಸಂಗೀತ ಸಂಯೋಜಕ ದೀಪಕ್ ದೇವ್ ಇದ್ದರು. ಕಳೆದ ಬಾರಿ ಎರ್ನಾಕುಲಂನ ಎಂಬಿಬಿಎಸ್​ ವಿದ್ಯಾರ್ಥಿನಿ ಎರಿನ್​ ಲಿಜ್​ ಜಾನ್​ ಮಿಸ್​ ಕೇರಳ 2020 ಪಟ್ಟವನ್ನು ಗಿಟ್ಟಿಸಿಕೊಂಡಿದ್ದರು. ಅಮೆರಿಕ ನಿವಾಸಿ ಅಥಿರಾ ರಾಜೀವ್​ ಮತ್ತು ಕಣ್ಣೂರ್​ ಮೂಲದ ಅಶ್ವಥಿ ನಂಬಿಯಾರ್​ ಕ್ರಮವಾಗಿ ಮೊದಲ ಮತ್ತು ಎರಡನೇ ರನ್ನರ್​ ಅಪ್​ ಆಗಿದ್ದರು. (ಏಜೆನ್ಸೀಸ್​)
ರಸ್ತೆ ಉದ್ಘಾಟನೆ ವೇಳೆ ಕಾಯಿ ಒಡೆದಾಗ ನಡೆಯಿತು ಅನಾಹುತ!ಮುಜುಗರಕ್ಕೊಳಗಾದ ಶಾಸಕಿ ಕೆಂಡಾಮಂಡಲ

‘ಇತರೆ ರೂಪಾಂತರಿ ವೈರಸ್​ಗಿಂತ ಒಮಿಕ್ರಾನ್​ ಅಪಾಯಕಾರಿ ಎನ್ನುವುದಕ್ಕೆ ಯಾವುದೇ ಸಾಕ್ಷಿಗಳಿಲ್ಲ’

ಮಟನ್​ ಅಥವಾ ನಾನು… ಮಾಂಸಾಹಾರಿ ಪತ್ನಿಗೆ ಆಯ್ಕೆ ನೀಡಿ ಪೇಚಿಗೆ ಸಿಲುಕಿದ ಸಸ್ಯಹಾರಿ ಗಂಡ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one + eleven =
Remember me
