ನವದೆಹಲಿ:ಭೋಜ್​ಪುರಿ ಸಿನಿಮಾ ನಟಿಯರಾದ ತ್ರಿಶಾಕರ್​ ಮಧು ಮತ್ತು ಪ್ರಿಯಾಂಕಾ ಪಂಡಿತ್​ ಬೆನ್ನಲ್ಲೇ ಖ್ಯಾತ ಗಾಯಕಿ ಶಿಲ್ಪಿ ರಾಜ್​ ಅವರ ಎಂಎಂಎಸ್​ ವಿಡಿಯೋ ಕೂಡ ಸೋರಿಕೆಯಾಗಿದ್ದು, ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡದಂತೆ ಗಾಯಕಿ ಜನರ ಬಳಿ ಮನವಿ ಮಾಡಿಕೊಂಡಿದ್ದಾರೆ.
ಶಿಲ್ಪಿ ರಾಜ್​ ಬಾಯ್​ಫ್ರೆಂಡ್​ ಜತೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದಾರೆನ್ನಲಾದ ಎಂಎಂಎಸ್​ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿದೆ.
ಎಂಎಂಎಸ್​ ವಿಡಿಯೋ ಸೋರಿಕೆಯಾಗುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ಲೈವ್​ ಬಂದು ಶಿಲ್ಪಿ ರಾಜ್​ ಕಣ್ಣೀರಾಕಿದ್ದಾರೆ. ಕೆಲವು ಏನೇನೋ ಬರೆದು ವಿಡಿಯೋವನ್ನು ಯೂಟ್ಯೂಬ್​ನಲ್ಲಿ ಅಪ್​ಲೋಡ್​ ಮಾಡುತ್ತಿದ್ದಾರೆ. ದಯವಿಟ್ಟು ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡಬೇಡಿ. ಏನಾದರೂ ಮಾಡಿ ಆದರೆ, ನನಗೆ ಸಹಾಯ ಮಾಡಿ. ಈವರೆಗೂ ನಾನು ಯಾರೊಬ್ಬರ ಜತೆಯಲ್ಲೂ ಜೋರು ಧ್ವನಿಯಲ್ಲಿ ಮಾತನಾಡಿದವಳಲ್ಲ. ಬಡ ಕುಟುಂಬದಿಂದ ಬಂದಿದ್ದೇ ನನ್ನ ತಪ್ಪಾಯಿತಾ? ಎಂದು ಶಿಲ್ಪಿ ರಾಜ್​ ಅಳಲು ತೋಡಿಕೊಂಡಿದ್ದಾರೆ.
ನಾನೊಬ್ಬಳೆ ಸ್ವಂತವಾಗಿ ಮುಂದೆ ಬಂದಿಲ್ಲ. ನೀವೆಲ್ಲರೂ ಸೇರಿಕೊಂಡು ನನ್ನನ್ನು ವೇಗವಾಗಿ ಈ ಕ್ಷೇತ್ರದಲ್ಲಿ ಬೆಳೆಸಿದ್ದೀರಿ. ನಿಮ್ಮ ಪ್ರೀತಿಯನ್ನು ನಾನು ಪಡೆದುಕೊಂಡಿದ್ದೇನೆ. ಶಾಲೆಯಲ್ಲಿ ಇರುವಾಗಲೇ ನಾನು ಹಾಡುತ್ತಿದ್ದೆ. ಕಷ್ಟಪಟ್ಟು ಬೆಳೆದು ಬಂದಿದ್ದೇನೆ. ಈ ಕ್ಷೇತ್ರದಲ್ಲಿ ಮನರಂಜನೆಯನ್ನು ಮುಂದುವರಿಸಲಿದ್ದೇನೆ. ಆದರೆ, ಯಾಕೆ ಅಶ್ಲೀಲ ವಿಡಿಯೋಗಳನ್ನು ಯೂಟ್ಯೂಬ್​ನಲ್ಲಿ ಅಪ್​ಲೋಡ್​ ಮಾಡುತ್ತಿದ್ದೀರಿ? ನನಗೆ ಏನೂ ಅರ್ಥವಾಗುತ್ತಿಲ್ಲ. ಕೆಲವರು ನನ್ನ ಬಗ್ಗೆ ತುಂಬಾ ಕೆಟ್ಟದಾಗಿ ಮಾತನಾಡುತ್ತಿದ್ದಾರೆ. ಅಲ್ಲದೆ, ನನ್ನ ಬಾಯ್​ಫ್ರೆಂಡ್​ ಯಾರೆಂಬುದು ನನಗೆ ಆಶ್ಚರ್ಯವಾಗಿದೆ ಎನ್ನುವ ಮೂಲಕ ವಿಡಿಯೋಗೂ ನನಗೂ ಸಂಬಂಧವಿಲ್ಲ ಎಂದಿದ್ದಾರೆ.
ಶಿಲ್ಪಿ ರಾಜ್​ ಅವರು ಭೋಜ್​ಪುರಿ ಸಿನಿಮಾದಲ್ಲಿ ತುಂಬಾ ಹೆಸರು ಮಾಡಿದ್ದಾರೆ. ಅಲ್ಲಿನ ಸ್ಟಾರ್​ ನಟರ ಚಿತ್ರದಲ್ಲೇ ಅನೇಕ ಹಾಡುಗಳನ್ನು ಹಾಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲೂ ಅವರ ಹಾಡುಗಳು ಪ್ರಸಿದ್ಧಿ ಪಡೆದಿವೆ.(ಏಜೆನ್ಸೀಸ್​)
ಚಲಿಸುವ ಬೈಕ್​ ಮೇಲೆಯೇ ರೊಮ್ಯಾನ್ಸ್​: ಚಾ.ನಗರದಲ್ಲಿ ಪ್ರೇಮಿಗಳಿಬ್ಬರ ಹುಚ್ಚಾಟದ ವಿಡಿಯೋ ವೈರಲ್!​

ಪ್ರಶಾಂತ್​ ನೀಲ್​ ತಪ್ಪು ಮಾಡಿದ್ರಾ? KGF-2 ಯಶಸ್ಸಿನ ನಡುವೆಯೇ ಚಿತ್ರತಂಡಕ್ಕೆ ಎದುರಾಯ್ತು ಹೊಸ ಸಂಕಷ್ಟ!

21ನೇ ವಯಸ್ಸಿಗೆ ಅಮೇಜಾನ್​ ಲಂಡನ್​ನಲ್ಲಿ ಕೆಲಸ ಗಿಟ್ಟಿಸಿದ ಕುವರಿ: ಸಂಬಳ ಕೇಳಿದ್ರೆ ಹುಬ್ಬೇರೋದು ಖಂಡಿತ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seven − three =
Remember me
