ಪಟನಾ:ಪ್ರಾಣಿಗೆ ಆರೋಗ್ಯ ಸರಿಯಿಲ್ಲ ಎಂದು ಹೇಳಿ ಪಶುವೈದ್ಯರೊಬ್ಬರನ್ನು ಊರಿಗೆ ಕರೆಸಿಕೊಂಡು, ಕಿಡ್ನಾಪ್​ ಮಾಡಿ ಬಲವಂತದಿಂದ ಮದುವೆ ಮಾಡಿರುವ ಘಟನೆ ಬಿಹಾರದ ಬೆಗುಸರಾಯ್​ ಜಿಲ್ಲೆಯಲ್ಲಿ ಮಂಗಳವಾರ ನಡೆದಿದೆ.
ಈ ಘಟನೆಯ ಬಗ್ಗೆ ಸಂತ್ರಸ್ತ ಪಶುವೈದ್ಯನ ಸಂಬಂಧಿಯೊಬ್ಬರು ಮಾತನಾಡಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿರುವ ಪ್ರಾಣಿಯನ್ನು ಪರೀಕ್ಷಿಸಲು ಮಧ್ಯಾಹ್ನ 12 ಗಂಟೆಗೆ ಪಶುವೈದ್ಯನನ್ನು ಕರೆಸಿಕೊಂಡರು. ಬಳಿಕ 3 ಮಂದಿ ಸೇರಿ ಅವನನ್ನು ಅಪಹರಿಸಿದರು. ಇದರಿಂದ ಮನೆಯಲ್ಲಿದ್ದವರೆಲ್ಲರೂ ಆತಂಕಕ್ಕೊಳಗಾದರು. ಬಳಿಕ ಎಲ್ಲರು ಸೇರಿ ಪೊಲೀಸ್​ ಠಾಣೆಗೆ ತೆರಳಿ ದೂರು ದಾಖಲಿಸಿದೆವು ಎಂದಿದ್ದಾರೆ.
ಪಶುವೈದ್ಯನ ತಂದೆ ಲಿಖಿತ ರೂಪದಲ್ಲಿ ದೂರು ದಾಖಲಿಸಿದ್ದಾರೆ. ಘಟನೆಯ ಬಗ್ಗೆ ತನಿಖೆ ನಡೆಸಲು ಎಸ್​ಎಚ್​ಒ ಮತ್ತು ಇತರೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಆರೋಪ ಸಾಬೀತಾದಲ್ಲಿ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಬೆಗುಸರಯ್​ ಪೊಲೀಸ್​ ವರಿಷ್ಠಾಧಿಕಾರಿ ಯೋಗೇಂದ್ರ ಕುಮಾರ್​ ಅವರು ಮಾಹಿತಿ ನೀಡಿದ್ದಾರೆ.
ಅಂದಹಾಗೆ ವರನ ಅಪಹರಣ ಅಥವಾ ‘ಪಕದ್ವಾ ವಿವಾಹ’ ಎಂಬುದು ಬಿಹಾರ, ಜಾರ್ಖಂಡ್ ಮತ್ತು ಉತ್ತರ ಪ್ರದೇಶದ ಭಾಗಗಳಲ್ಲಿ ಸಾಕಷ್ಟು ಸಾಮಾನ್ಯವಾದ ವಿದ್ಯಮಾನವಾಗಿದೆ. ಬ್ರಹ್ಮಚಾರಿಗಳನ್ನು ಕಿಡ್ನಾಪ್​ ಮಾಡಿ ಬಂದೂಕಿನಿಂದ ಹೆದರಿಸಿ ಬಲವಂತವಾಗಿ ಮದುವೆ ಮಾಡಲಾಗುತ್ತದೆ.
ಆರ್ಥಿಕವಾಗಿ ಸದೃಢವಾದ ಮತ್ತು ಸಾಮಾಜಿಕ ಭದ್ರತೆ ಹೊಂದಿರುವ ಅಥವಾ ಸರ್ಕಾರಿ ನೌಕರಿಯಲ್ಲಿರುವ ಅವಿವಾಹಿತರನ್ನು ಗುರಿಯಾಗಿಸಿ, ವಧುವಿನ ಕುಟುಂಬದ ಸದಸ್ಯರು ಕಿಡ್ನಾಪ್​ ಮಾಡುತ್ತಾರೆ. ಬಳಿಕ ಅವರನ್ನು ಹೆದರಿಸುತ್ತಾರೆ ಮತ್ತು ಒಪ್ಪಿಕೊಳ್ಳುವವರೆಗೂ ಥಳಿಸಿ, ಬಲವಂತವಾಗಿ ಮದುವೆ ಮಾಡುತ್ತಾರೆ. ಈ ರೀತಿಯ ಸಾಕಷ್ಟು ಘಟನೆಗಳು ಈ ಹಿಂದೆಯೂ ನಡೆದಿದೆ.(ಏಜೆನ್ಸೀಸ್​)
PSI ನೇಮಕಾತಿ ಅಕ್ರಮ: ಮಧ್ಯವರ್ತಿಯಾಗಿದ್ದ ಆರೋಪದಡಿ ಬ್ಯಾಡರಹಳ್ಳಿ ಠಾಣೆಯ ಪಿಎಸ್​ಐ ಹರೀಶ್​ ಬಂಧನ

VIDEO: ತಾಳಿಯೂ ಇಲ್ಲ, ಹಾರವೂ ಇಲ್ಲ: ವಧು- ವರರಿಬ್ಬರಿಗೂ ಷಟ್​ಸ್ಥಲ ಮುದ್ರೆಯ ಸರ; ಗದಗದಲ್ಲಿ ಡಿಫರೆಂಟ್​ ಮದುವೆ

ರಾಷ್ಟ್ರಪತಿ ರೇಸ್​ನಲ್ಲಿ ಮಾಜಿ ಪ್ರಧಾನಿ ದೇವೇಗೌಡ! ಅಪ್ಪ-ಮಗನಿಗೆ ದೀದಿ ಬುಲಾವ್​: ಹೆಚ್ಚಿದೆ ಕುತೂಹಲ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:8 − six =
Remember me
