ನವದೆಹಲಿ:ಕರ್ನಾಟಕದಲ್ಲಿ ನಡೆಯುತ್ತಿರುವ ಹಿಜಾಬ್​ ವಿವಾದಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್​ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಪ್ರತಿಕ್ರಿಯಿಸಿದ್ದು, ಇಷ್ಟವಾದ ಬಟ್ಟೆ ಧರಿಸುವುದು ಹೆಣ್ಣು ಮಕ್ಕಳ ಹಕ್ಕು ಎಂದಿದ್ದಾರೆ.
ಉಡುಪಿಯ ಕುಂದಾಪುರದ ಸರ್ಕಾರಿ ಕಾಲೇಜಿನಲ್ಲಿ ಹಿಜಾಬ್​ ಧರಿಸಿದ್ದ ಹೆಣ್ಣು ಮಕ್ಕಳನ್ನು ಶಾಲೆಗೆ ಸೇರಿಸಲಿಲ್ಲ ಎಂಬ ಆರೋಪದ ನಂತರ ಆ ಆರು ವಿದ್ಯಾರ್ಥಿನಿಯರು ಕೋರ್ಟ್​ ಮೆಟ್ಟಿಲೇರಿದ ಬಳಿಕ ಆರಂಭವಾದ ಹಿಜಾಬ್​ ವಿವಾದವು ಇದೀಗ ರಾಜ್ಯಾದ್ಯಂತ ವ್ಯಾಪಿಸಿದೆ. ಅಲ್ಲದೆ, ಪುದಚೇರಿ ಮತ್ತು ಮಧ್ಯಪ್ರದೇಶಗಳಲ್ಲಿಯೂ ಈ ವಿವಾದ ಕೇಳಿಬರುತ್ತಿದೆ.
ಇದೀಗ ಟ್ವೀಟ್​ ಮೂಲಕ ಪ್ರತಿಕ್ರಿಯೆ ನೀಡಿರುವ ಪ್ರಿಯಾಂಕಾ, ಅದು ಬಿಕಿನಿಯೇ ಆಗಿರಲಿ, ಘೂಂಘಾಟ್ ಆಗಿರಲಿ, ಜೀನ್ಸ್​ ಆಗಿರಲಿ ಅಥವಾ ಹಿಜಾಬ್​ ಆಗಿರಲಿ ಯಾವ ಬಟ್ಟೆಯನ್ನು ಧರಿಸಬೇಕು ಎಂದು ನಿರ್ಧರಿಸುವುದು ಹೆಣ್ಣು ಮಕ್ಕಳ ಹಕ್ಕು. ಇದನ್ನು ಭಾರತೀಯ ಸಂವಿಧಾನವೇ ಖಚಿತಪಡಿಸಿದೆ. ಹೆಣ್ಣು ಮಕ್ಕಳಿಗೆ ಕಿರುಕುಳ ನೀಡುವುದನ್ನು ನಿಲ್ಲಿಸಿ ಎಂದು ಟ್ವೀಟ್​ ಮಾಡಿದ್ದಾರೆ.
Whether it is a bikini, a ghoonghat, a pair of jeans or a hijab, it is a woman’s right to decide what she wants to wear.
This right is GUARANTEED by the Indian constitution. Stop harassing women.#ladkihoonladsaktihoon
— Priyanka Gandhi Vadra (@priyankagandhi)February 9, 2022

ಪ್ರಿಯಾಂಕಾ ಟ್ವೀಟ್​ ಮಾಡಿದ ಬೆನ್ನಲ್ಲೇ ಟ್ವಿಟರ್​ನಲ್ಲಿ ಬಿಕಿನಿ ಪದದ ಹ್ಯಾಶ್​ಟ್ಯಾಗ್​ ವೈರಲ್​​ ಆಗಿದ್ದು, ಪರ-ವಿರೋಧ ಚರ್ಚೆ ಆರಂಭವಾಗಿದೆ.
ಇನ್ನೊಂದೆಡೆ ಉತ್ತರ ಪ್ರದೇಶದ ವಿಧಾನಸಭಾ ಚುನಾವಣೆಯಲ್ಲಿ ಗೆಲುವಿಗಾಗಿ ಕಾಂಗ್ರೆಸ್​ ಅವಿರತ ಪ್ರಯತ್ನ ಮಾಡುತ್ತಿದ್ದು, ಮಹಿಳೆಯರ ಹಕ್ಕುಗಳು ಮತ್ತು ಸಬಲೀಕರಣವನ್ನು ಮುಂದಿಟ್ಟುಕೊಂಡು ಪ್ರಿಯಾಂಕಾ ವಾದ್ರಾ ನೇತೃತ್ವದಲ್ಲಿ ಚುನಾವಣೆ ಎದುರಿಸುತ್ತಿದ್ದಾರೆ. ಈ ಬಾರಿ ಹೆಚ್ಚು ಮಹಿಳೆಯರಿಗೆ ಕಾಂಗ್ರೆಸ್​ ಸೀಟ್​ ಅನ್ನು ನೀಡಲಾಗಿದೆ.(ಏಜೆನ್ಸೀಸ್​)
ಯಮುನೆಗೆ ಬಂದ ಪ್ರಿಯಾಂಕಾ: ವಿಶ್ರಮ್​ ಘಾಟ್​​ನಲ್ಲಿ ಮೊಳಗಿತು ವೇದ ಮಂತ್ರ, ನೆರವೇರಿತು ವಿಶೇಷ ಪೂಜೆ

ಸ್ಟಾರ್​ ನಟ ರವಿತೇಜ ಜತೆ ಲಿಪ್​ಲಾಕ್​: ಬೋಲ್ಡ್​ ಹೇಳಿಕೆ ನೀಡಿದ ನಟಿ ಮೀನಾಕ್ಷಿ ಚೌಧರಿ!

ಮಂಡ್ಯದಲ್ಲಿ ಭೀಕರ ಹತ್ಯೆ ಪ್ರಕರಣ: ತಂಗಿ ಗಂಡನ ಮೇಲಿನ ವ್ಯಾಮೋಹಕ್ಕೆ ನಡುರಾತ್ರಿ ನೆತ್ತರು ಹರಿಸಿದ ಹಂತಕಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:ten − 5 =
Remember me
