ನವದೆಹಲಿ:ಬಲ್ಕಿಸ್ ಬಾನು ಗ್ಯಾಂಗ್​ ರೇಪ್​ ಪ್ರಕರಣದ 11 ಅಪರಾಧಿಗಳನ್ನು ಬಿಡುಗಡೆ ಮಾಡಿರುವುದನ್ನು ವಿರೋಧಿಸಿ ಸಲ್ಲಿಕೆಯಾಗಿದ್ದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್​, ಪ್ರಕರಣ ಸಂಬಂಧ ಗುಜರಾತ್​ ಸರ್ಕಾರಕ್ಕೆ ನೋಟಿಸ್​ ಹೊರಡಿಸಿದ್ದು, ಪ್ರತಿಕ್ರಿಯೆ ನೀಡುವಂತೆ ಕೇಳಿದೆ. ಅಲ್ಲದೆ, ಎರಡು ವಾರಗಳ ಬಳಿಕ ವಿಚಾರಣೆ ನಡೆಸುವುದಾಗಿ ತಿಳಿಸಿದೆ.
ಬಿಡುಗಡೆ ವಿರೋಧಿಸಿ ಸಿಪಿಐ(ಎಂ) ಪೊಲಿಟ್ಬುರೊ ಸದಸ್ಯರಾದ ಸುಭಾಶಿನಿ ಅಲಿ, ತೃಣಮೂಲ ಕಾಂಗ್ರೆಸ್​ ಸಂಸದೆ ಮೊಹುವಾ ಮೊಯಿತ್ರಾ ಮತ್ತು ಮಹಿಳಾ ಹಕ್ಕುಗಳ ಕಾರ್ಯಕರ್ತೆಯರು ಸಲ್ಲಿಸಿದ್ದ ಅರ್ಜಿಯನ್ನು ಪರಿಗಣಿಸುವುದಾಗಿ ಸುಪ್ರೀಂಕೋರ್ಟ್​ ಹೇಳಿತು.
ಕ್ಷಮಾಧಾನ ನೀತಿ ಅಡಿಯಲ್ಲಿ ಅಪರಾಧಿಗಳ ಬಿಡುಗಡೆಗೆ ಅನುಮತಿಸಿರುವ ಪ್ರಕ್ರಿಯೆ ಸರಿಯಾಗಿದೆಯೇ ಎಂಬುದನ್ನು ಒಮ್ಮೆ ಪರಿಶೀಲಿಸಬೇಕಿದೆ ಎಂದು ಮುಖ್ಯ ನ್ಯಾಯಮೂರ್ತಿ ಎನ್​.ವಿ. ರಮಣ ನೇತೃತ್ವದ ಸಾಂವಿಧಾನಿಕ ಪೀಠ ಹೇಳಿದೆ. ಬಿಡುಗಡೆ ವೇಳೆ ಅವರು ಕಾರ್ಯವಿಧಾನದ ಮೂಲಕ ಹೋದರೋ? ಇಲ್ಲವೋ? ಎಂಬುದು ನನಗೆ ಗೊತ್ತಿಲ್ಲ ಪರಿಶೀಲಿಸಬೇಕು ಎಂದು ಎನ್​.ವಿ. ರಮಣ ಅವರು ತಿಳಿಸಿದರು.
2002ರ ಗುಜರಾತ್​ ಗಲಭೆ ಸಂದರ್ಭದಲ್ಲಿ ಬಲ್ಕಿಸ್​ ಬಾನು ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿತ್ತು. ಅಲ್ಲದೆ, ಆಕೆಯ ಕುಟುಂಬದ 7 ಸದಸ್ಯರನ್ನು ಹತ್ಯೆ ಮಾಡಲಾಗಿತ್ತು. ಈ ಪ್ರಕರಣದ ಅಡಿಯಲ್ಲಿ ಬಂಧಿತರಾಗಿದ್ದ 11 ಅಪರಾಧಿಗಳನ್ನು ಕ್ಷಮಾಧಾನ ನೀತಿಯ ಅಡಿಯಲ್ಲಿ ಗುಜರಾತ್​ ಸರ್ಕಾರ ಕಳೆದ ಸ್ವಾತಂತ್ರ್ಯ ದಿನದಂದು ಬಿಡುಗಡೆ ಮಾಡಿದ್ದು, ಭಾರಿ ವಿವಾದವನ್ನು ಸೃಷ್ಟಿಸಿದೆ.(ಏಜೆನ್ಸೀಸ್​)
ದುರಂತ ಅಂತ್ಯ ಕಂಡ ಟೆಕ್ಕಿ: ಸುಂದರಿಯ ಡೈರಿ-ಮೊಬೈಲ್​ನಲ್ಲಿರೋ ಬಾಯ್​ಫ್ರೆಂಡ್​ ರಹಸ್ಯದ ಹಿಂದೆ ಬಿದ್ದ ಪೊಲೀಸರು!

ಬಿಜೆಪಿ ಹೇಳುವಂತೆ ಸಾವರ್ಕರ್ ಸ್ವಾತಂತ್ರ್ಯ ಸೇನಾನಿಯಾಗಿದ್ದರೆ ಭಾರತಕ್ಕೆ ಬರಲು ನಿರಾಕರಿಸಿದ್ದೇಕೆ? ಪ್ರಿಯಾಂಕ್ ಖರ್ಗೆ ಪ್ರಶ್ನೆ

ಶಿರಾದಲ್ಲಿ ಭೀಕರ ಅಪಘಾತ, 9 ಮಂದಿ ದುರ್ಮರಣ: ಹೊಟ್ಟೆಪಾಡಿಗಾಗಿ ಗುಳೆ ಹೊರಟ್ಟಿದ್ದ ಬಡವರು ದುರಂತ ಅಂತ್ಯ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:4 × two =
Remember me
