ಕೊಂಡಟ್ಟಿ:ಹುಟ್ಟುಹಬ್ಬದ ದಿನವೇ ನವವಿವಾಹಿತೆಯೊಬ್ಬಳು ಅಪಘಾತದಲ್ಲಿ ದುರಂತ ಸಾವಿಗೀಡಾಗಿರುವ ಘಟನೆ ಕೇರಳದ ಕೊಂಡಟ್ಟಿಯಲ್ಲಿ ಬುಧವಾರ (ಮಾ.23) ಬೆಳಗ್ಗೆ ಸಂಭವಿಸಿದೆ.
ಸಿ. ವಿಜಿ (26) ಮೃತ ದುರ್ದೈವಿ. ಕೊಯಿಕ್ಕೋಡ್​ ಮೆಡಿಕಲ್​ ಕಾಲೇಜಿನಲ್ಲಿ ನರ್ಸ್​ ಆಗಿದ್ದ ವಿಜಿ, ಓಝುಕೂರ್ ಮೂಲದ ಸುಜೀಶ್​ ಎಂಬುವರನ್ನು ನಾಲ್ಕು ತಿಂಗಳ ಹಿಂದಷ್ಟೇ ಮದುವೆ ಆಗಿದ್ದರು. ನಿನ್ನೆ ಬೆಳಗ್ಗೆ ನಿಯಂತ್ರಣ ತಪ್ಪಿದ ಲಾರಿಯೊಂದು ಖಾಸಗಿ ಬಸ್​ಗೆ ಡಿಕ್ಕಿಯಾದ ಪರಿಣಾಮ ಬಸ್​ನಲ್ಲಿದ್ದ ವಿಜಿ ಮೃತಪಟ್ಟಿದ್ದಾರೆ. ಈ ಘಟನೆಯಲ್ಲಿ ಹಲವರು ಗಂಭೀರ ಗಾಯಗೊಂಡಿದ್ದಾರೆ.
ವಿಜಿ ಅವರ ಸಾವಿಗೆ ಆಕೆಯ ಸಂಬಂಧಿಕರು ಸಂತಾಪ ಸೂಚಿಸಿದ್ದಾರೆ. ಮದುವೆಯಾದ ನಾಲ್ಕು ತಿಂಗಳ ಬಳಿಕ ನಿನ್ನೆ ಅವರ ಮದುವೆ ನಂತರದ ಮೊದಲ ಹುಟ್ಟುಹಬ್ಬ ಆಚರಿಸಿಕೊಳ್ಳುವ ಸಿದ್ಧತೆಯಲ್ಲಿದ್ದರು. ವಿಜಿ ಬರ್ತಡೇಯನ್ನು ಅದ್ಧೂರಿಯಾಗಿ ಆಚರಿಸಲು ಮನೆಯಲ್ಲಿ ಭಾರೀ ಸಿದ್ಧತೆ ನಡೆದಿತ್ತು.
ಪತ್ನಿ ವಿಜಿ ಸಾವನ್ನು ಅರಗಿಸಿಕೊಳ್ಳಲು ಸುಜೀಶ್​ಗೆ ಈಗಲೂ ಆಗುತ್ತಿಲ್ಲ. ನಿನ್ನೆ ಖುಷಿಯಾಗಿ ಕೆಲಸಕ್ಕೆ ಹೋದ ವಿಜಿ ಇನ್ನು ಮನೆಗೆ ಬಂದಿಲ್ಲ ಅಂತಾನೇ ನಂಬಿದ್ದಾರೆ. ನಿನ್ನೆಯಷ್ಟೇ ಆಕೆಯನ್ನ ಬಸ್​ ನಿಲ್ದಾಣಕ್ಕೆ ಡ್ರಾಪ್​ ಮಾಡಿ ಬಂದಿದ್ದ. ಕೊಂಡಟ್ಟಿಯಿಂದ ಬರುತ್ತಿದ್ದ ಟಾರಸ್​ ಲಾರಿ ಕೊಯಿಕ್ಕೋಡ್​ನಿಂದ ಬರುತ್ತಿದ್ದ ಖಾಸಗಿ ಬಸ್​ಗೆ ಡಿಕ್ಕಿ ಹೊಡೆದು ದುರಂತ ಸಂಭವಿಸಿದೆ. ಈ ವೇಳೆ ಗಂಭೀರವಾಗಿ ಗಾಯಗೊಂಡಿದ್ದ ಪ್ರಯಾಣಿಕರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತು. ಈ ವೇಳೆ ಚಿಕಿತ್ಸೆ ಫಲಿಸದೇ ವಿಜಿ ಮೃತಪಟ್ಟಿದ್ದು, ಆಕ್ರಂದನ ಮುಗಿಲು ಮುಟ್ಟಿದೆ.
ಲಾರಿ ಚಾಲಕನ ವಿರುದ್ಧ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ಆರಂಭವಾಗಿದೆ.(ಏಜೆನ್ಸೀಸ್​)
ಮೋಹನಾಂಗಿಯ ಬಲೆಗೆ ಬಿದ್ದ ‘ಮಿಸ್ಟರ್​ ರಾಜಸ್ಥಾನ್’​ ವಿಲವಿಲ! ಮಾಡೋದೆಲ್ಲಾ ಮಾಡಿ ತಗ್ಲಾಕೊಂಡ ಸುಂದರಿ…

ಕಹಿ ಅನುಭವ: ಚಾಲಕನ ವಿರುದ್ಧ ಆರೋಪ ಮಾಡಿ ಉಬರ್​ ನೆರವು ಕೋರಿದ ನಟಿ ಸ್ವರಾ ಭಾಸ್ಕರ್​

ನಾನು ನಿತ್ಯಾ ಮೆನನ್​ರನ್ನು ಮದ್ವೆ ಆಗಲ್ಲ, ಒಂದಲ್ಲ ಒಂದು ದಿನ ಆಕೆ ಪಶ್ಚಾತಾಪ ಪಟ್ಟೆ ಪಡುತ್ತಾಳೆ

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:nineteen + six =
Remember me
