ಗ್ವಾಲಿಯರ್​:ಯುವಕನೊಬ್ಬ ಹಿರಿಯ ಮಹಿಳೆಯೊಬ್ಬಳ ಜತೆಗಿನ ಲಿವಿಂಗ್​ ಲಿವಿಂಗ್​ ರಿಲೇಶನ್​​ಶಿಪ್​ ಸಂಬಂಧವನ್ನು ನೋಟರಿ ಮಾಡಿಸಿರುವ ವಿಚಿತ್ರ ಪ್ರಕರಣ ಮಧ್ಯಪ್ರದೇಶದ ಗ್ವಾಲಿಯರ್​ನಲ್ಲಿ ನಡೆದಿದೆ.
28 ವರ್ಷದ ಭೋಲುಮ್​ ಎಂಬಾತ ಮೊರೆನಾ ಜಿಲ್ಲೆಯ ನಿವಾಸಿ 67 ವರ್ಷದ ರಾಮಕಾಲಿ ಜತೆ ಲಿವಿಂಗ್​ ರಿಲೇಶನ್​​ಶಿಪ್​ ಹೊಂದಿದ್ದು, ತಮ್ಮ ಸಂಬಂಧವನ್ನು ಗ್ವಾಲಿಯರ್ ಜಿಲ್ಲಾ​ ನ್ಯಾಯಾಲಯದಲ್ಲಿ ಮಂಗಳವಾರ ನೋಟರಿ ಮಾಡಿಸಿಕೊಳ್ಳುವ ಮೂಲಕ ಎಲ್ಲರನ್ನು ಚಕಿತಗೊಳಿಸಿದ್ದಾರೆ.
ರಾಮಕಾಲಿ ಮತ್ತು ಭೋಲುಮ್​ ಇಬ್ಬರು ಸಹ ಕೈಲಾರಸ್​ ನಿವಾಸಿಗಳು. ಇಬ್ಬರು ಮದುವೆ ಮಾಡಿಕೊಳ್ಳಲು ಬಯಸಿಲ್ಲ. ಆದರೆ, ತಮ್ಮ ಲಿವಿಂಗ್​ ರಿಲೇಶನ್​ಶಿಪ್​ ಅನ್ನು ಗಮನದಲ್ಲಿಟ್ಟುಕೊಂಡು ಅದನ್ನು ನೋಟರಿ ಮಾಡಿಸಿಕೊಳ್ಳುವ ಮೂಲಕ ತಮ್ಮ ಸಂಬಂಧಕ್ಕೆ ಅಧಿಕೃತ ಮುದ್ರೆಯನ್ನು ಒತ್ತಿದ್ದಾರೆ. ಭವಿಷ್ಯದಲ್ಲಿ ತಮ್ಮ ಸಂಬಂಧದ ಬಗ್ಗೆ ಯಾವುದೇ ಜಗಳಗಳು ಉಂಟಾಗಬಾರದು ಎಂದು ಮುಂಚಿತವಾಗಿ ನೋಟರಿ ಮಾಡಲು ಬಂದಿದ್ದೇವೆ ಎಂದು ದಂಪತಿಗಳು ಹೇಳಿಕೊಂಡಿದ್ದಾರೆ.
ಇಬ್ಬರು ನೋಟರಿ ಮಾಡಿಸಿರುವ ಬಗ್ಗೆ ಮಾತನಾಡಿರುವ ವಕೀಲ ಪ್ರದೀಪ್ ಅವಸ್ಥಿ, ” ನೋಟರಿಯಂತಹ ದಾಖಲೆಗಳು ಬದ್ಧವಾಗಿಲ್ಲದಿದ್ದರೂ ವಿವಾದಗಳನ್ನು ತಪ್ಪಿಸಲು” ದಂಪತಿಗಳು ಲಿವಿಂಗ್​ ರಿಲೇಶನ್​ಶಿಪ್​ ಅನ್ನು ನೋಟರಿ ಮಾಡಿಸಿಕೊಂಡಿದ್ದಾರೆ.(ಏಜೆನ್ಸೀಸ್​)
ಯೂಕ್ರೇನ್​ ಮತ್ತು ರಷ್ಯಾ ನಡುವಿನ ಯುದ್ಧಕ್ಕೆ ಕೊನೆ ಎಂದು? ಹೊರಬಿತ್ತು ಸ್ಫೋಟಕ ಮಾಹಿತಿ!

ಅಪರಿಚಿತನ ಕೈಗೆ ATM ಕಾರ್ಡ್​ ಕೊಟ್ಟು 500 ರೂ. ಡ್ರಾ ಮಾಡಿಸ್ಕೊಂಡು ಮನೆಗೆ ಬಂದ ವ್ಯಕ್ತಿಗೆ ಮರುದಿನವೇ ಕಾದಿತ್ತು ಶಾಕ್​!

ಸಿನಿಮಾ ನೋಡ್ಕೊಂಡು ಆಟೋ ಹತ್ತಿದ ವೈದ್ಯೆ ಮೇಲೆ ಗ್ಯಾಂಗ್​ರೇಪ್: ಇಬ್ಬರು ಅಪ್ರಾಪ್ತರು ಸೇರಿ ಐವರು ಅಂದರ್​​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × two =
Remember me
