ಡೆಹ್ರಾಡೂನ್:ಮೈನಿಂಗ್​ ಮಾಫಿಯಾವನ್ನು ಬೆನ್ನಟ್ಟಿ ಹೋಗುವಾಗ ನಡೆದ ಗುಂಡಿನ ಚಕಮಕಿಯಲ್ಲಿ ಐವರು ಪೊಲೀಸ್​ ಸಿಬ್ಬಂದಿ ಗಾಯಗೊಂಡಿದ್ದು, ಓರ್ವ ಮಹಿಳೆ ಸಾವಿಗೀಡಾಗಿರುವ ಘಟನೆ ಉತ್ತರಾಖಂಡದಲ್ಲಿ ನಡೆದಿದೆ.
ಮೃತ ಮಹಿಳೆಯನ್ನು ಗುರುಪ್ರೀತ್​ ಕೌರ್​ ಎಂದು ಗುರುತಿಸಲಾಗಿದೆ. ಇವರು ಬಿಜೆಪಿ ನಾಯಕ ಗುರ್ತಾಜ್​ ಭುಲ್ಲರ್ ಅವರು ಪತ್ನಿ. ಮೈನಿಂಗ್​ ಮಾಫಿಯಾ ಮತ್ತು ಉತ್ತರ ಪ್ರದೇಶ ಪೊಲೀಸರ ನಡುವೆ ನಡೆದ ಗುಂಡಿನ ಚಕಮಕಿ ವೇಳೆ ಗುರುಪ್ರೀತ್​ ಕೌರ್​ ಅವರಿಗೆ ಗುಂಡು ತಗುಲಿ ಮೃತಪಟ್ಟಿದ್ದಾರೆ.
ಜಫರ್​ ಎಂಬ ಮೈನಿಂಗ್​ ಮಾಫಿಯಾದ ಆರೋಪಿಯನ್ನು ಬಂಧಿಸಲು ಉತ್ತರ ಪ್ರದೇಶದ ಮೊರಾದಾಬಾದ್​ ಪೊಲೀಸ್​ ತಂಡವು ಉತ್ತರಾಖಂಡದ ಜಾಸ್ಪುರ್​ಗೆ ತೆರಳಿತ್ತು. ಈ ವೇಳೆ ಆರೋಪಿ ಮತ್ತು ಆತನ ಸಹಚರರೊಂದಿಗೆ ನಡೆದ ಫೈರಿಂಗ್​ನಲ್ಲಿ ಇಬ್ಬರು ಪೊಲೀಸರು ಗುಂಡೇಟಿಗೆ ಗಾಯಗೊಂಡರೆ, ಮೂವರು ಪೊಲೀಸ್​ ಸಿಬ್ಬಂದಿ ಬೇರೆ ಕಾರಣಗಳಿಂದ ಗಾಯಗೊಂಡಿದ್ದಾರೆ.
ಪೊಲೀಸರ ಪ್ರಕಾರ ಆರೋಪಿ ಜಫರ್ ವಾಂಟೆಡ್​ ಕ್ರಿಮಿನಲ್​ ಆಗಿದ್ದು, ಆತನ ಸುಳಿವು ನೀಡಿದರೆ 50 ಸಾವಿರ ಬಹುಮಾನ ನೀಡುವುದಾಗಿ ಘೋಷಿಸಲಾಗಿತ್ತು. ಜಾಸ್ಪುರ್​ನ ಭುಲ್ಲಾರ್ ಎಂಬುವರ ಮನೆಯಲ್ಲಿ ಬಚ್ಚಿಟ್ಟುಕೊಂಡಿದ್ದಾರೆ ಎಂಬ ಸುಳಿವು ಸಿಕ್ಕ ಮೇರೆಗೆ ಅವರನ್ನು ಬಂಧಿಸಲು ಪೊಲೀಸ್​ ತಂಡ ತೆರಳಿತ್ತು. ಪೊಲೀಸರನ್ನು ನೋಡಿ ಪರಾರಿಯಾಗುವಾಗ ಮೈನಿಂಗ್​ ಮಾಫಿಯ ಮತ್ತು ಪೊಲೀಸರ ನಡುವೆ ಫೈರಿಂಗ್​ ನಡೆದಿದೆ.
ಇದೀಗ ಶೂಟೌಟ್​ನಲ್ಲಿ ಬಿಜೆಪಿ ನಾಯಕನ ಪತ್ನಿ ಮೃತಪಟ್ಟಿರುವ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ಗ್ರಾಮಸ್ಥರು ನಾಲ್ವರು ಪೊಲೀಸರನ್ನು ಒತ್ತೆಯಾಳಾಗಿ ಇರಿಸಿಕೊಂಡಿದ್ದಾರೆ. ಅಲ್ಲದೆ, ಪೊಲೀಸರ ಮೇಲೆ ಉತ್ತರಾಖಂಡದಲ್ಲಿ ಕೊಲೆ ಪ್ರಕರಣ ಸಹ ದಾಖಲಾಗಿದೆ. ಗಾಯಗೊಂಡಿರುವ ಐವರು ಪೊಲೀಸರಿಗೆ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.(ಏಜೆನ್ಸೀಸ್​)
ಹಾಸನಾಂಬೆ ಜಾತ್ರಾ ಮಹೋತ್ಸವ: ಗರ್ಭಗುಡಿಯ ಬಾಗಿಲು ತೆರೆಯುತ್ತಿದ್ದಂತೆ ಮೊಳಗಿತು ಜಯಘೋಷ…

ಹಿಜಾಬ್​ ಬ್ಯಾನ್​ ಕುರಿತು ಸುಪ್ರೀಂಕೋರ್ಟ್​ನಲ್ಲೇ ವಿಭಿನ್ನ ತೀರ್ಪು! 10 ದಿನಗಳ ಸುದೀರ್ಘ ವಿಚಾರಣೆಯ ಸಂಪೂರ್ಣ ಮಾಹಿತಿ ಇಲ್ಲಿದೆ

ಪ್ರೊ ಕಬಡ್ಡಿ ಲೀಗ್​ ಸೀಸನ್​ 9: ಸಂಪೂರ್ಣ ವೇಳಾಪಟ್ಟಿ ಪ್ರಕಟ, ಡಿಸೆಂಬರ್​ 17ಕ್ಕೆ ಫೈನಲ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 − 10 =
Remember me
