ನವದೆಹಲಿ:ಬಿಜೆಪಿ ಸಂಸದ (ರಾಜ್ಯಸಭಾ ಸದಸ್ಯ) ಸುಬ್ರಮಣಿಯನ್ ಸ್ವಾಮಿ ಮತ್ತೆ ಪ್ರಧಾನಿ ಮೋದಿ ನೇತೃತ್ವದ ತಮ್ಮದೇ ಕೇಂದ್ರ ಸರ್ಕಾರದ ಟೀಕಾ ಪ್ರಹಾರ ನಡೆಸಿದ್ದಾರೆ. ಆಡಳಿತದ ಎಲ್ಲ ವಿಷಯಗಳಲ್ಲೂ ಮೋದಿ ಸರ್ಕಾರ ವಿಫಲವಾಗಿದೆ ಎಂದು ಜರಿದಿದ್ದಾರೆ.
ಆರ್ಥಿಕತೆ, ಗಡಿ ರಕ್ಷಣೆ ಸೇರಿದಂತೆ ಅನೇಕ ವಿಷಯಗಳಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ. ಅಫ್ಘಾನಿಸ್ತಾನದಲ್ಲಿ ಉಂಟಾದ ಬಿಕ್ಕಟ್ಟನ್ನು ಕೂಡ ಸರ್ಕಾರ ಸರಿಯಾಗಿ ಎದುರಿಸಲಿಲ್ಲ ಎಂದು ಸುಬ್ರಮಣಿಯನ್​ ಸ್ವಾಮಿ, ತೀವ್ರ ವಿವಾದಕ್ಕೆ ಕಾರಣವಾದ ಪೆಗಾಸಸ್​ ಡೇಟಾ ಉಲ್ಲಂಘನೆಗೆ ಮೋದಿ ಸರ್ಕಾರವನ್ನು ದೂರಿದರು. ಆಂತರಿಕ ಭದ್ರತೆಗೆ ಸಂಬಂಧಿಸಿದಂತೆ, ಪ್ರಸ್ತುತ ಸರ್ಕಾರದ ಅಡಿಯಲ್ಲಿ ಕಾಶ್ಮೀರವು ‘ಕತ್ತಲೆ’ಯ ಸ್ಥಿತಿಯಲ್ಲಿದೆ ಎಂದು ಮೋದಿ ಸರ್ಕಾರದ ತಮ್ಮ ರಿಪೋರ್ಟ್​ ಕಾರ್ಡ್​ ಅನ್ನು ಟ್ವೀಟ್​ ಮಾಡಿದ್ದಾರೆ.
Modi Government's Report Card:Economy—FAILBorder Security–FAILForeign Policy –Afghanistan FiascoNational Security —Pegasus NSOInternal Security—Kashmir GloomWho is responsible?–Subramanian Swamy
— Subramanian Swamy (@Swamy39)November 24, 2021

ಬುಧವಾರವಷ್ಟೇ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಸುಬ್ರಮಣಿಯನ್​ ಸ್ವಾಮಿ ಹೊಗಳಿದರು. ರಾಜಕೀಯ ದಿಗ್ಗಜರಾದ ಜಯಪ್ರಕಾಶ್​ ನಾರಾಯಣ, ಮೊರಾರ್ಜಿ ದೇಸಾಯಿ, ರಾಜೀವ್​​ ಗಾಂಧಿ, ಚಂದ್ರಶೇಖರ್​ ಮತ್ತು ಪಿ.ವಿ. ನರಸಿಂಹರಾವ್​ ಜತೆ ಮಮತಾ ಅವರನ್ನು ಹೋಲಿಸಿ ಮಾತನಾಡಿದ್ದರು. ಮಮತಾ ಅವರು ಮೂರು ದಿನಗಳ ದೆಹಲಿ ಪ್ರವಾಸದಲ್ಲಿದ್ದು, ಈ ವೇಳೆ ಸುಬ್ರಮಣಿಯನ್​ ಸ್ವಾಮಿ ಅವರನ್ನು ಭೇಟಿ ಮಾಡಿದ ವೇಳೆ ಇಬ್ಬರು ಉಭಯಕುಶಲೋಪರಿ ವಿಚಾರಿಸಿದರು.
Of the all the politicians I have met or worked with, Mamata Banerjee ranks with JP, Morarji Desai, Rajiv Gandhi, Chandrashekhar, and P V Narasimha Rao who meant what they said and said what they meant. In Indian politics that is a rare quality
— Subramanian Swamy (@Swamy39)November 24, 2021

ಇನ್ನು ಇತ್ತೀಚೆಗೆ ಸುಬ್ರಮಣಿಯನ್ ಸ್ವಾಮಿ ಅವರು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚಾಗಿ ಮೋದಿ ಸರ್ಕಾರದ ವಿರುದ್ಧ ಟೀಕೆ ಮಾಡುತ್ತಿದ್ದಾರೆ. ಚೀನಾ ನಮ್ಮ ಪರಮಾಣು ಅಸ್ತ್ರಕ್ಕೆ ಹೆದರದಿದ್ದರೆ ನಾವು ಅವರ ಅಣ್ವಸ್ತ್ರಗಳಿಗೆ ಏಕೆ ಹೆದರಬೇಕು? ಎಂದು ನವೆಂಬರ್ 23 ರಂದು ಟ್ವೀಟ್ ಮಾಡಿದ್ದಾರೆ. ಅದಕ್ಕೂ ಒಂದು ದಿನದ ಮೊದಲು, ಬೆಲೆ ಏರಿಕೆಯ ಕುರಿತು ಟ್ವಿಟರ್ ಬಳಕೆದಾರರ ಕಾಮೆಂಟ್‌ಗೆ ಅವರು ಉತ್ತರಿಸಿದ್ದರು. ಪ್ರಧಾನಿ ನರೇಂದ್ರ ಮೋದಿಗೆ ಅರ್ಥಶಾಸ್ತ್ರ ತಿಳಿದಿಲ್ಲ ಎಂದು ಕಾಲೆಳೆದಿದ್ದರು.(ಏಜೆನ್ಸೀಸ್​)
Or is Modicomics since he does not know economics?
— Subramanian Swamy (@Swamy39)November 22, 2021

ಮಾಜಿ ಪತಿ ನಾಗಚೈತನ್ಯ ಬರ್ತಡೇಯ ಮಾರನೇ ದಿನ ಸಮಂತಾ ಮಾಡಿದ್ದು ಸರಿನಾ? ಅಭಿಮಾನಿಗಳ ಆಕ್ರೋಶ!

VIDEO| ಇಂತಹ ಟ್ರಾಫಿಕ್ ಪೊಲೀಸ್ ಕಾನ್ಸ್‌ಟೇಬಲ್‌ ನೀವು ನೋಡಿರಲಿಕ್ಕಿಲ್ಲ…

ಬಾಲಿವುಡ್​ ಬ್ಯೂಟಿ ಕತ್ರಿನಾ ಕೈಫ್​ ಹೆಸರೇಳಿ ರಾಜ್ಯದ ಜನತೆಗೆ ಸಚಿವರು ಕೊಟ್ಟ ಭರವಸೆ ಹೇಳಿಕೆ ವೈರಲ್​!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × 1 =
Remember me
