ನವದೆಹಲಿ:ದೇಶಾದ್ಯಂತ ಭಾರೀ ಸಂಚಲನ ಸೃಷ್ಟಿಸಿರುವ ದಿ ಕಾಶ್ಮೀರ್​ ಫೈಲ್ಸ್​ ಚಿತ್ರದ ಬಗ್ಗೆ ಪರ-ವಿರೋಧ ಚರ್ಚೆಗಳು ನಡೆಯುತ್ತಿವೆ. ರಾಜಕೀಯ ಕೆಸರೆರಚಾಟಕ್ಕೂ ಇದು ಕಾರಣವಾಗಿದೆ. ಇದರ ನಡುವೆ ಗುರುವಾರ ದೆಹಲಿ ವಿಧಾನಸಭಾ ಬಜೆಟ್​ ಅಧಿವೇಶನದಲ್ಲಿ ಕಾಶ್ಮೀರ್​ ಫೈಲ್ಸ್​ ಚಿತ್ರಕ್ಕೆ ತೆರಿಗೆ ಮುಕ್ತ ಅವಕಾಶ ನೀಡವಂತೆ ಬೇಡಿಕೆ ಇಟ್ಟ ಬಿಜೆಪಿ ನಾಯಕರಿಗೆ ಮುಖ್ಯಮಂತ್ರಿ ಅರವಿಂದ್​ ಕೇಜ್ರಿವಾಲ್​ ತಿರುಗೇಟನ್ನು ನೀಡಿದ್ದಾರೆ.
ತೆರಿಗೆ ಮುಕ್ತ ಮಾಡುವುದನ್ನು ಕೇಳುವ ಬದಲು ಕಾಶ್ಮೀರ್​ ಫೈಲ್ಸ್​ ಚಿತ್ರವನ್ನು ಯೂಟ್ಯೂಬ್​ನಲ್ಲಿ ಅಪ್​ಲೋಡ್​ ಮಾಡುವಂತೆ ನಿರ್ದೇಶಕ ವಿವೇಕ್​ ಅಗ್ನಿಹೋತ್ರಿ ಅವರನ್ನು ಕೇಳಿರಿ, ಆಗ ಎಲ್ಲರೂ ಉಚಿತವಾಗಿ ಸಿನಿಮಾವನ್ನು ವೀಕ್ಷಣೆ ಮಾಡಬಹುದು ಎಂದು ಕೇಜ್ರಿವಾಲ್​, ಬಿಜೆಪಿಗರಿಗೆ ತಿರುಗೇಟು ನೀಡಿದರು.
ಬುಧವಾರ ನಡೆದ ವಿಧಾನಸಭೆ ಅಧಿವೇಶನಕ್ಕೆ ಅಡ್ಡಿಪಡಿಸಿ, ಕಾಶ್ಮೀರ ಫೈಲ್ಸ್​ ಸಿನಿಮಾವನ್ನು ತೆರಿಗೆ ಮುಕ್ತಗೊಳಿಸುವಂತೆ ಬಿಜೆಪಿ ಶಾಸಕರು ಒತ್ತಾಯಿಸಿದ ಒಂದು ದಿನದ ನಂತರ ಸಿಎಂ ಕೇಜ್ರಿವಾಲ್ ಉತ್ತರ ನೀಡಿದ್ದಾರೆ. ಕೆಲವರು ಕಾಶ್ಮೀರಿ ಪಂಡಿತರ ಹೆಸರಿನಲ್ಲಿ ಕೋಟಿಗಟ್ಟಲೆ ಸಂಪಾದಿಸಿದ್ದಾರೆ ಮತ್ತು ನಿಮಗೆ ಕೇವಲ ಪೋಸ್ಟರ್‌ಗಳನ್ನು ಹಾಕುವ ಕೆಲಸವನ್ನು ನೀಡಲಾಗಿದೆ ಎಂದು ವಿಧಾನಸಭೆಯಲ್ಲಿ ಬಿಜೆಪಿಯನ್ನುದ್ದೇಶಿಸಿ ಕೇಜ್ರಿವಾಲ್ ವ್ಯಂಗ್ಯವಾಡಿದರು.
Many people are requesting me for my complete speech in Delhi Assembly today. Here is the link. Do watch it. It raises some v imp pointshttps://t.co/0zZqtgjq0W
— Arvind Kejriwal (@ArvindKejriwal)March 24, 2022

ಬಿಹಾರ, ಮಧ್ಯಪ್ರದೇಶ, ಹರಿಯಾಣ, ಉತ್ತರ ಪ್ರದೇಶ, ಗುಜರಾತ್, ತ್ರಿಪುರಾ, ಗೋವಾ ಮತ್ತು ಉತ್ತರಾಖಂಡ ಸೇರಿದಂತೆ ಹಲವಾರು ರಾಜ್ಯಗಳಲ್ಲಿ ಕಾಶ್ಮೀರ್​ ಫೈಲ್ಸ್​ ಚಿತ್ರವನ್ನು ತೆರಿಗೆ ಮುಕ್ತಗೊಳಿಸಲಾಗಿದೆ.(ಏಜೆನ್ಸೀಸ್​)
ಶಿಕ್ಷಕರ ಹುದ್ದೆಗೆ ಮೊದಲ ದಿನವೇ 5 ಸಾವಿರ ಅರ್ಜಿ ಸಲ್ಲಿಕೆ: ಅರ್ಜಿ ಶುಲ್ಕ ಪಾವತಿಸಿರುವ ಸಂಖ್ಯೆ ಮಾತ್ರ 5!

ಪತಂಜಲಿ ರುಚಿ ಸೋಯಾ ಎಫ್​ಪಿಒ ಆರಂಭ; ಸಾಂಸ್ಥಿಕ ಹೂಡಿಕೆದಾರರಿಂದ 1290 ಕೋಟಿ ರೂಪಾಯಿ ಹೂಡಿಕೆ

ಐಪಿಎಲ್​ಗೆ ಟೆರರ್ ಅಲರ್ಟ್!; ಟೂರ್ನಿ ಆರಂಭಕ್ಕೆ 2 ದಿನ ಮೊದಲೇ ಆತಂಕದ ಕಾಮೋಡ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 + one =
Remember me
