ವಿಜಯವಾಡ:ದೇವಸ್ಥಾನಕ್ಕೆ ಆಗಮಿಸಿದ ಮಹಿಳೆಯರು ಸ್ನಾನ ಮಾಡುವುದನ್ನು ಗೊತ್ತಿಲ್ಲದಂತೆ ಫೋಟೋ ಮತ್ತು ವಿಡಿಯೋ ಚಿತ್ರೀಕರಿಸಿ ಹಣಕ್ಕಾಗಿ ಬ್ಲ್ಯಾಕ್​ಮೇಲ್​ ಮಾಡುತ್ತಿದ್ದ ಹೆಡ್​ ಕಾನ್ಸ್​ಟೇಬಲ್​ ಮತ್ತು ಸಮುದಾಯವೊಂದರ ನಾಯಕನನ್ನು ಪೊಲೀಸರು ಬಂಧಿಸಿರುವ ಘಟನೆ ಆಂಧ್ರ ಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯಲ್ಲಿ ನಡೆದಿದೆ. ಪ್ರಕರಣದಲ್ಲಿ ಅಪ್ರಾಪ್ತನೊಬ್ಬನನ್ನು ಸಹ ಬಾಲಾಪರಾಧಿ ನ್ಯಾಯಮಂಡಳಿಯ ವಶಕ್ಕೆ ಒಪ್ಪಿಸಲಾಗಿದೆ.
ಪೆದ್ದಪುರಂ ಪೊಲೀಸ್​ ಠಾಣೆಯಲ್ಲಿ ಹೆಡ್​ ಕಾನ್ಸ್​ಟೇಬಲ್​​ ಆಗಿರುವ ಕನಕರಾವ್​​, ಪೂರ್ವ ಗೋದಾವರಿ ಜಿಲ್ಲೆಯಲ್ಲಿರುವ ಸೂರ್ಯನಾರಾಯಣ ದೇವಸ್ಥಾನಕ್ಕೆ ಭೇಟಿ ನೀಡಿದ್ದ. ಈ ವೇಳೆ ದೇವಸ್ಥಾನದ ಪುರೋಹಿತ ಸಂಬಂಧಿ ಅಪ್ರಾಪ್ತನ ಬಾಲಕನಿಗೆ ಹಣದ ಆಮಿಷವೊಡ್ಡಿದ ಕನಕರಾವ್​​, ಮಹಿಳೆಯರು ಸ್ನಾನ ಮಾಡುವುದನ್ನು ಫೋಟೋ ಮತ್ತು ವಿಡಿಯೋ ಮಾಡಿ ವಾಟ್ಸ್​ಆ್ಯಪ್​ ಮೂಲಕ ಕಳುಹಿಸಿಕೊಡಲು ಹೇಳಿದ್ದ.
ಕನಕರಾವ್​ ಹೇಳಿದಂತೆ ಬಾಲಕ ಫೋಟೋ ಮತ್ತು ವಿಡಿಯೋ ರೆಕಾರ್ಟ್​ ಮಾಡಿ ಕಳುಹಿಸುತ್ತಿದ್ದ. ಬಳಿಕ ಕನಕರಾವ್​ ಅವುಗಳನ್ನು ಪೆದ್ದಪುರಂನ ಸಮುದಾಯದ ನಾಯಕ ರೊಕ್ಕಮ್​ ಶ್ಯಾಮ್​ ದಯಾಕರ್​ಗೆ ಕಳೆಹಿಸುತ್ತಿದ್ದ. ಬಳಿಕ ಇಬ್ಬರು ಸೇರಿ ದೇವಸ್ಥಾನ ಆಡಳಿತ ಮಂಡಳಿಯ ಕುಟುಂಬಕ್ಕೆ ಕರೆ ಮಾಡಿ ಬೆದರಿಕೆ ಹಾಕುತ್ತಿದ್ದರು. 5 ಲಕ್ಷ ರೂಪಾಯಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದರು. ಹಣ ಕೊಡದಿದ್ದರೆ, ಫೋಟೋ ಮತ್ತು ವಿಡಿಯೋಗಳನ್ನು ಬಿಡುಗಡೆ ಮಾಡಿ ದೇವಸ್ಥಾನದ ಗೌರವ ಹಾಳು ಮಾಡುವುದಾಗಿ ಹೆದರಿಸಿದ್ದರು.
ಇದಾದ ಬಳಿಕ ದೇವಸ್ಥಾನದ ಆಡಳಿತ ಮಂಡಳಿ ಪೊಲೀಸ್​ ಠಾಣೆಗೆ ತೆರಳಿ ಕೇಸು ದಾಖಲಿಸಿದ ಬಳಿಕ ಹೆಡ್​ ಕಾನ್ಸ್​ಟೇಬಲ್​ ಕನಕರಾವ್​ ಮತ್ತು ರೊಕ್ಕ ಶ್ಯಾಮ್​ ದಯಾಕರ್​ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ. ಬಾಲಕನನ್ನು ಬಾಲಾಪರಾಧಿ ನ್ಯಾಯಮಂಡಳಿಗೆ ಹಸ್ತಾಂತರಿಸಲಾಗಿದೆ. (ಏಜೆನ್ಸೀಸ್​)
ಯಾರೂ ಇಲ್ಲದ ವೇಳೆ ಯುವತಿ ಮನೆಗೆ ಎಂಟ್ರಿ ಕೊಟ್ಟ ಪಾಗಲ್​ ಪ್ರೇಮಿ! ಮುಂದೆ ನಡೆದಿದ್ದೆಲ್ಲ ಬೆಚ್ಚಿಬೀಳಿಸೋ ಘಟನೆ

‘ಅತ್ಯಾಚಾರಿ ಬಿಲ್‌ ಕ್ಲಿಂಟನ್‌ ಬಹುದಿನಗಳ ನಂತರ ತಮ್ಮ ಹಾಸಿಗೆ ಮೇಲೆ ಮಲಗಿದರು’ ಎಂದ ಬಿಬಿಸಿ ನಿರೂಪಕಿ!

2021ನೇ ಸಾಲಿನ ಇನ್​ಸ್ಟಾಗ್ರಾಂ ಶ್ರೀಮಂತರ ಪಟ್ಟಿ ಬಿಡುಗಡೆ: ಪ್ರತಿ ಪೋಸ್ಟ್​ಗೆ ಕೊಹ್ಲಿಗೆ ಸಿಗುವ ಹಣ ಇಷ್ಟೊಂದಾ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eight − 3 =
Remember me
