ಮುಂಬೈ:ತಾಯಿಯ ನೆರವಿನಿಂದ 19 ವರ್ಷದ ಅಕ್ಕನ ತಲೆಯನ್ನು ಕತ್ತರಿಸಿದ ಸಹೋದರ ನೆರೆಮನೆಯವರ ಎದುರು ತುಂಡರಿಸಿದ ತಲೆಯನ್ನು ಪ್ರದರ್ಶನಕ್ಕಿಟ್ಟ ಆತಂಕಕಾರಿ ಘಟನೆ ಮಹಾರಾಷ್ಟ್ರದ ಔರಂಗಬಾದ್​ ಜಿಲ್ಲೆಯಲ್ಲಿ ಭಾನುವಾರ ನಡೆದಿದೆ.
ಮರ್ಯಾದೆ ಹತ್ಯೆ ಮಾಡಿದಲ್ಲದೆ, ಅಕ್ಕನ ಕತ್ತರಿಸಿದ ತಲೆಯ ಜತೆಗೆ ತಾಯಿ ಮತ್ತು ಮಗ ಸಲ್ಫಿ ತೆಗೆದುಕೊಂಡಿರುವುದಾಗಿ ವರದಿಯಾಗಿದೆ. ಕೊಲೆಯಾಗುವಾಗ ಆಕೆಯ ಗಂಡನು ಕೂಡ ಮನೆಯಲ್ಲೇ ಇದ್ದ. ಅಕ್ಕನ ಗಂಡನ ಮೇಲೂ ದಾಳಿ ಮಾಡಲು ಬಾಮೈದ ಮುಂದಾಗಿದ್ದಾನೆ. ಆದರೆ, ಆತ ಎಸ್ಕೇಪ್​ ಆಗುವಲ್ಲಿ ಯಶಸ್ವಿಯಾಗಿದ್ದಾನೆ.
ಗರ್ಭಿಣಿಯಾಗಿದ್ದ ಸಹೋದರಿಯ ತಲೆಯನ್ನು ತುಂಡರಿಸಿದ ಬಳಿಕ ಮನೆಯ ವರಾಂಡ ಮುಂದೆ ನಿಂತು ತಲೆಯನ್ನು ಗಾಳಿಯಲ್ಲಿ ಎಸೆದು ನೆರೆಮನೆಯವರಿಗೆ ಪ್ರದರ್ಶಿಸಿದ್ದಾನೆ. ಇದಾದ ಬಳಿಕ ಪೊಲೀಸ್​ ಠಾಣೆಗೆ ತೆರಳಿ ಆರೋಪಿಗಳು ಶರಣಾಗಿದ್ದಾರೆ.
ಘಟನೆಯ ಹಿನ್ನೆಲೆ ಏನು?ಕೀರ್ತಿ ಥೋರ್​ ಎಂಬಾಕೆ ಕಳೆದ ಜೂನ್​ನಲ್ಲಿ ಓಡಿಹೋಗಿ ಮದುವೆಯಾಗಿ ಗಂಡನ ಜತೆ ವಾಸವಿದ್ದಳು. ಕಳೆದ ವಾರವಷ್ಟೇ ಆಕೆಯನ್ನು ತಾಯಿ ಸಂಪರ್ಕಿಸಿದ್ದರು. ಮನೆಗೆ ಬರುವಂತೆ ಮಗಳು ತಾಯಿಗೆ ಆಹ್ವಾನ ನೀಡಿದ್ದರು. ಅದರಂತೆ ಭಾನುವಾರ ಮಗನ ಜತೆಯಲ್ಲಿ ತಾಯಿ ಮಗಳ ಮನೆಗೆ ಬಂದಿದ್ದಳು. ತಾಯಿ ಮತ್ತು ಮಗ ಬಂದಾಗ ಕೀರ್ತಿ ಗಂಡ ಬೇರೊಂದು ಕೋಣೆಯಲ್ಲಿದ್ದ. ಇತ್ತ ಕೀರ್ತಿ ತನ್ನ ತಾಯಿ, ತಮ್ಮನಿಗೆ ಟೀ ಮಾಡುತ್ತಿದ್ದಳು. ಇದೇ ಸಂದರ್ಭದಲ್ಲಿ ಹಿಂದಿನಿಂದ ಬಂದ ತಾಯಿ-ಮಗ ಕೀರ್ತಿ ಮೇಲೆ ದಾಳಿ ಮಾಡಿದ್ದಾರೆ.
ಆರೋಪಿ ತಾಯಿ ಕೀರ್ತಿಯ ಕಾಲನ್ನು ಗಟ್ಟಿಯಾಗಿ ಹಿಡಿದುಕೊಂಡರೆ, ಮೊದಲೇ ಸಂಚು ರೂಪಿಸಿ ಕುಡುಗೋಲು ತಂದಿದ್ದ ತಮ್ಮ, ಅಕ್ಕನ ಕುತ್ತಿಗೆಯನ್ನು ತುಂಡರಿಸಿದ್ದಾನೆ. ಬಳಿಕ ತಲೆಯನ್ನು ಹೊರಗೆ ತಂದು ನೆರೆಮನೆಯವರ ಎದುರು ಪ್ರದರ್ಶಿಸಿದ್ದಾನೆ. ಬಳಿಕ ಅಮ್ಮ-ಮಗ ಇಬ್ಬರು ವಿರಂಗಾವ್​ ಪೊಲೀಸ್​ ಠಾಣೆಗೆ ತೆರಳಿ ಶರಣಾಗಿದ್ದಾರೆ.
ಇತ್ತ ಪತ್ನಿ ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿದ್ದರೆ, ಅತ್ತ ಪತಿ ಬೇರೊಂದು ಕೋಣೆಯಲ್ಲಿ ಮಲಗಿದ್ದ. ಈ ವೇಳೆ ಮನೆಯಲ್ಲಿ ಪಾತ್ರೆಗಳು ಬೀಳುವ ಸದ್ದು ಕೇಳಿ ಎಚ್ಚರಗೊಂಡು ಪತಿ ಅಡುಗೆ ಕೋಣೆಗೆ ಧಾವಿಸಿದಾಗ ಪತ್ನಿಯ ಸ್ಥಿತಿಯನ್ನು ನೋಡಿ ಬೆಚ್ಚಿಬಿದ್ದಿದ್ದಾನೆ. ಈ ವೇಳೆ ಆತನನ್ನೂ ಕೊಲ್ಲಲು ಯತ್ನಿಸಿದರಾದರೂ ಆತ ಪರಾರಿಯಾಗಿದ್ದಾನೆ.(ಏಜೆನ್ಸೀಸ್​)
VIDEO: ಅಮ್ಮಾ ನಿನ್ನನ್ನು ಮಿಸ್‌ ಮಾಡಿಕೊಳ್ತಿದ್ದೆ ಎಂದು ಮಗ ಹೂಗುಚ್ಛ ಹಿಡಿದು ಬಂದರೆ, ಚಪ್ಪಲಿಯಿಂದ ಹಿಗ್ಗಾಮುಗ್ಗ ಥಳಿಸಿದ ತಾಯಿ!
ಕೇವಲ 7 ಗಂಟೆಯಲ್ಲಿ 919 ಪುರುಷರ ಜತೆ ಲೈಂಗಿಕ ಸಂಪರ್ಕ: ಈಕೆ ಹೇಳೋದನ್ನು ಕೇಳಿದ್ರೆ ಹೀಗೂ ಉಂಟಾ ಅಂತೀರಿ!
ವಿಕ್ಕಿ-ಕತ್ರಿನಾ ಮದುವೆಯ ನೇರಪ್ರಸಾರಕ್ಕೆ OTTಯಿಂದ 100 ಕೋಟಿ ರೂ. ಆಫರ್: ತಾರಾಜೋಡಿಯ ನಿಲುವೇನು?
ಹೆಂಗಸರು ತಡರಾತ್ರಿವರೆಗೆ ಕುಡಿದ್ರೆ ಸಿಗುತ್ತೆ ಡಿಸ್ಕೌಂಟ್​! ಸಂಸತ್ತಲ್ಲಿ ಮದ್ಯ ಪ್ರದರ್ಶಿಸಿ ಬಿಜೆಪಿ ಸಂಸದರಿಂದ ಆರೋಪ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:one × three =
Remember me
