ಹೈದರಾಬಾದ್​:ಶಿಕ್ಷಕರ ವಿರುದ್ಧ 8 ವರ್ಷದ ಬಾಲಕನೊಬ್ಬ ಪೊಲೀಸ್​ ಠಾಣೆಯ ಮೆಟ್ಟಿಲೇರಿದ ಅಪರೂಪದ ಪ್ರಸಂಗ ತೆಲಂಗಾಣದ ಮೆಹಬೂಬಬಾದ್​ ಜಿಲ್ಲೆಯ ಬಯ್ಯಾಪುರಂ ಪೊಲೀಸ್​ ಠಾಣೆಯಲ್ಲಿ ನಡೆದಿದೆ.
ಪೊಲೀಸ್​ ಠಾಣೆಗೆ ಅಳುತ್ತಾ ಬಂದ ಬಾಲಕನನ್ನು ಪೊಲೀಸರು ಪ್ರಶ್ನಿಸಿದಾಗ, ಬಾಲಕ ಕೊಟ್ಟ ಉತ್ತರ ಕೇಳಿ ಪೊಲೀಸರೇ ಶಾಕ್​ ಆಗಿದ್ದಾರೆ. ವಿವರಣೆಗೆ ಬರುವುದಾದರೆ, ಅನಿಲ್​ ಹೆಸರಿನ ಬಾಲಕ ಬಯ್ಯಾರಾಮ್​ ಮಂಡಲದ ಖಾಸಗಿ ಶಾಲೆಯೊಂದರಲ್ಲಿ ಮೂರನೇ ತರಗತಿ ವಿದ್ಯಾರ್ಥಿಯಾಗಿದ್ದಾನೆ. ಶನಿವಾರ ಪೊಲೀಸ್​ ಠಾಣೆಗೆ ಆಗಮಿಸಿದ ಬಾಲಕ, ತನ್ನ ಶಾಲಾ ಶಿಕ್ಷಕರಾದ ಸನ್ನಿ ಮತ್ತು ವೆಂಕಟ್​ ವಿರುದ್ಧ ದೂರು ಸ್ವೀಕರಿಸಿ ಕ್ರಮ ಜರುಗಿಸುವಂತೆ ಪೊಲೀಸರನ್ನು ಕೇಳಿದ್ದಾನೆ. ಈ ವೇಳೆ ಪೊಲೀಸರು ಕೇಳಿದ ಪ್ರಶ್ನೆಗಳಿಗೆ ಕೊಂಚವೂ ಹೆದರದೆ ಆತ ಕೊಟ್ಟ ಉತ್ತರ ಕೇಳಿ ಪೊಲೀಸರೇ ಶಾಕ್​ ಆಗಿದ್ದಾರೆ.
ಇದಾದ ಬಳಿಕ ಬಾಲಕನನ್ನು ಶಾಲೆಗೆ ಕರೆದುಕೊಂಡು ಹೋಗಿ ವಿಚಾರಣೆ ನಡೆಸಲಾಯಿತು. ಈ ವೇಳೆ ತನಗೆ ಹೊಡೆದ ಶಿಕ್ಷಕರನ್ನು ಬಾಲಕ ತೋರಿಸಿದ್ದಾನೆ. ಮಕ್ಕಳಿಗೆ ಪಾಠ ಹೇಳಬೇಕಾದ ಶಿಕ್ಷಕರು ಶಿಸ್ತುಮರೆತಿದ್ದು, ಅವರಿಗೆ ಪೊಲೀಸರು ಸಮಾಲೋಚನೆ ನೀಡಿದರು.‘ ಇನ್ನೊಮ್ಮೆ ಮಕ್ಕಳೊಂದಿಗೆ ಸರಿಯಾಗಿ ನಡೆದುಕೊಳ್ಳುವಂತೆ ಶಿಕ್ಷಕರಿಗೆ ತಿಳಿ ಹೇಳಿದರು.
ಪುಟ್ಟ ವಯಸ್ಸಿನಲ್ಲಿಮ ದೂರು ಕೊಡಲು ಪೊಲೀಸ್​ ಠಾಣೆಯ ಮೆಟ್ಟಿಲೇರಿದ ಬಾಲಕನ ಧೈರ್ಯವನ್ನು ಪೊಲೀಸರು ಮೆಚ್ಚಿಕೊಂಡರು. ಅಲ್ಲದೆ, ಠಾಣೆಗೆ ಆಗಮಿಸುವಾಗ ಮಾಸ್ಕ್​ ಧರಿಸಿ ಕರೊನಾ ನಿಯಮಗಳನ್ನು ಪಾಲಿಸಿದ ರೀತಿಯು ಇಷ್ಟವಾಗಿದೆ. ಇದೀಗ ಈ ಘಟನೆ ಮೆಹಬೂಬಬಾದ್​ ಜಿಲ್ಲೆ ಭಾರೀ ಚರ್ಚೆಯ ವಿಷಯವಾಗಿದೆ. ಶಿಕ್ಷಕರು ಹೊಡೆದರೆ ಅಳುತ್ತಾ ಮನೆಗೆ ಹೋಗುತ್ತಿರುವ ಮಕ್ಕಳನ್ನು ನಾವು ನೋಡಿದ್ದೇವೆ. ಆದರೆ, ಪೊಲೀಸ್ ಠಾಣೆಗೆ ಹೋಗಿ ಈ ರೀತಿ ದೂರು ನೀಡುವುದು ಹಾಸ್ಯಾಸ್ಪದ ಎಂದು ಹಲವರು ಪ್ರತಿಕ್ರಿಯಿಸುತ್ತಿದ್ದಾರೆ. ಸದ್ಯ ಘಟನೆಯ ವಿಡಿಯೋ ವೈರಲ್ ಆಗಿದೆ.(ಏಜೆನ್ಸೀಸ್​)
ತನ್ನ ಕಾರು ಅಪಘಾತಕ್ಕೀಡಾದ ಬಗ್ಗೆಯೇ ಹೊಸ ಹಾಡು ರಚಿಸಿ ಧ್ವನಿ ನೀಡಿದ ಕಚ್ಚಾ ಬಾದಾಮ್​ ಗಾಯಕ!

ನಡೆದಾಡುವ ದೇವರೆಂದೇ ಹೆಸರಾಗಿದ್ದ ಚನ್ನಪಟ್ಟಣದ ಗೌಡಗೆರೆ ಗ್ರಾಮದ ಪವಾಡ ಬಸವಪ್ಪ ಇನ್ನಿಲ್ಲ

ಈ ಎರಡು ಪೀಸ್​ ಬಟ್ಟೆಗೆ ಇಷ್ಟೊಂದು ಹಣ ಕೊಡ್ಬೇಕಿತ್ತಾ? ಸಿಕ್ಕಾಪಟ್ಟೆ ಟ್ರೋಲ್​ ಆಗುತ್ತಿರುವ ಕರೀನಾ!

ದುಬೈನಲ್ಲಿ ಕೇರಳದ ಸೋಶಿಯಲ್​ ಮೀಡಿಯಾ ಸ್ಟಾರ್​ ಸಾವು: ಗಂಡನ ಮೇಲಿನ ಸಂಶಯಕ್ಕೆ ಕಾರಣ ಹೀಗಿದೆ… ​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 + two =
Remember me
