ನವದೆಹಲಿ:ಜವಳಿ ಮೇಲಿನ ಜಿಎಸ್​ಟಿ ಹೆಚ್ಚಳವನ್ನು ಮುಂದೂಡಲು ಇಂದು (ಡಿ.31) ನಡೆದ ಸರಕು ಮತ್ತು ಸೇವಾ ತೆರಿಗೆ (ಜಿಎಸ್​ಟಿ) ಮಂಡಳಿ ಸಭೆಯಲ್ಲಿ ನಿರ್ಧರಿಸಲಾಗಿದ್ದು, ಈ ಮೂಲಕ ಬಟ್ಟೆ ಖರೀದಿದಾರರಿಗೆ ಕೇಂದ್ರ ಸರ್ಕಾರ ರಿಲೀಫ್​ ನೀಡಿದೆ.
ಶೇ. 5 ರಷ್ಟಿದ್ದ ಜವಳಿ ಮೇಲಿನ ಜಿಎಸ್​ಟಿಯನ್ನು 12ಕ್ಕೇರಿಸಲು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​ ನೇತೃತ್ವದ ಜಿಎಸ್​ಟಿ ಮಂಡಳಿ ಈ ಹಿಂದೆ ನಿರ್ಧರಿಸಿತ್ತು. 2022ರ ಜನವರಿ 1ರಿಂದ ಇದು ಜಾರಿಗೆ ಬರಲಿದೆ ಎಂದು ಹೇಳಲಾಗಿತ್ತು. ಆದರೆ, ಇದೀಗ ನಿರ್ಧಾರದಿಂದ ಹಿಂದೆ ಸರಿದಿರುವ ಜಿಎಸ್​ಟಿ ಮಂಡಳಿ ಮುಂದಿನ ಸಭೆಯಲ್ಲಿ ಈ ಬಗ್ಗೆ ಮತ್ತೊಮ್ಮೆ ಚರ್ಚೆ ನಡೆಸಲಿದೆ.
ಜವಳಿ ಮೇಲಿನ ಜಿಎಸ್​ಟಿ ಹೆಚ್ಚಳಕ್ಕೆ ಅನೇಕ ರಾಜ್ಯಗಳು ವಿರೋಧಿಸಿದ್ದವು. ರಾಜ್ಯಗಳ ಈ ಪ್ರಸ್ತಾವನೆಯನ್ನು ಮತ್ತೊಮ್ಮೆ ಪರಿಗಣಿಸಿರುವ ಜಿಎಸ್​ಟಿ ಮಂಡಳಿ ಹೊಸ ಪ್ರಸ್ತಾವನೆಯನ್ನು ತರಲಿದೆ.
ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಮಂಡಳಿಯ 46ನೇ ಸಭೆಯು ಇಂದು (ಡಿ.31) ದೆಹಲಿಯಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಜಿಎಸ್‌ಟಿ ಕೌನ್ಸಿಲ್ ಸದಸ್ಯರು ಇತರ ವಿಷಯಗಳ ಜತೆಗೆ ಜಿಎಸ್‌ಟಿ ದರ ತರ್ಕಬದ್ಧಗೊಳಿಸುವಿಕೆಯ ಬಗ್ಗೆ ಚರ್ಚಿಸುವ ನಿರೀಕ್ಷೆಯಿದೆ.(ಏಜೆನ್ಸೀಸ್​)
ಸಮಾಧಿ ಮುಂದೆ ನಿಂತು ಅಳುತ್ತ ಪಿಟಿಲು ನುಡಿಸುತ್ತಿರೋ ಈ ಬಾಲಕ ಯಾರು? ವೈರಲ್‌ ಚಿತ್ರದ ಹಿಂದಿನ ಕಣ್ಣೀರ ಕಥೆಯಿದು…

ಮೇಕೆದಾಟು ಪಾದಯಾತ್ರೆಗೆ ನಾದಬ್ರಹ್ಮ ಸಾಥ್​, 2 ಹಾಡು ಬರೆಯಲಿದ್ದಾರೆ ಹಂಸಲೇಖ

ಕ್ರಿಸ್​ಮಸ್​ ವೇಳೆ ಮಕ್ಕಳಿಗೆ ಮಾಂಸಾಹಾರ ವಿತರಣೆ: ಶಾಲೆ ಮುಚ್ಚಿಸಿದ್ದ ಬಿಇಒ ಆದೇಶಕ್ಕೆ ಶಿಕ್ಷಣ ಇಲಾಖೆ ತಡೆ

50 ರೂಪಾಯಿ ಆಮಿಷವೊಡ್ಡಿ 6ನೇ ತರಗತಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ಕೊಟ್ಟ ಮುಖ್ಯಶಿಕ್ಷಕ ಅರೆಸ್ಟ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen + 11 =
Remember me
