ನವದೆಹಲಿ:ಮದುವೆಗೆ ಸಂಬಂಧಿಸಿದ ಅನೇಕ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಪ್ರತಿದಿನ ವೈರಲ್​ ಆಗುತ್ತಿರುತ್ತವೆ. ಕೆಲವೊಂದು ಫನ್ನಿ ವಿಡಿಯೋಗಳಾದರೆ, ಇನ್ನು ಕೆಲವು ಶಾಕಿಂಗ್​ ವಿಡಿಯೋಗಳಾಗಿರುತ್ತವೆ. ಕೆಲವೊಮ್ಮೆ ಮದುವೆ ಮಂಟಪದಲ್ಲೇ ವಧು-ವರ ಮದುವೆ ರದ್ದು ಮಾಡಿಕೊಂಡ ವಿಡಿಯೋಗಳನ್ನು ನೋಡಿದ್ದೇವೆ. ಅದೇ ರೀತಿಯ ಮತ್ತೊಂದು ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.
ಬ್ರೈಡಲ್​​ ಲೆಹಂಗಾ ಡಿಸೈನ್​ ಹೆಸರಿನ ಇನ್​ಸ್ಟಾಗ್ರಾಂ ಪೇಜ್​ನಲ್ಲಿ ವಿಡಿಯೋ ಶೇರ್​ ಮಾಡಲಾಗಿದೆ. ವಿಡಿಯೋದಲ್ಲಿ ವಧು-ವರ ಮಂಟಪದ ವೇದಿಕೆಯಲ್ಲಿ ನಿಂತಿರುವುದನ್ನು ಕಾಣಬಹುದಾಗಿದೆ. ವರ, ವಧುವಿನ ಕೊರಳಿಗೆ ಹಾರ ಹಾಕಿರುತ್ತಾನೆ. ಇನ್ನೇನು ವಧು ಹಾರ ಹಾಕಬೇಕು ವೇದಿಕೆಯಲ್ಲೇ ಮಾತಿನ ಚಕಮಕಿ ನಡೆದು ಮದುವೆ ರದ್ದು ಮಾಡಿಕೊಳ್ಳುವ ದೃಶ್ಯ ವಿಡಿಯೋದಲ್ಲಿದೆ.
ಮದುವೆ ಯಾಕೆ ಮಾಡಿಕೊಳ್ಳಲ್ಲ ಎಂದು ಯಾರೋ ವಧುವನ್ನು ಪ್ರಶ್ನಿಸುವುದು ವಿಡಿಯೋದಲ್ಲಿ ಕೇಳುತ್ತದೆ. ಇದಕ್ಕೆ ಪ್ರತಿಕ್ರಿಯೆ ನೀಡುವ ವಧು, ವರ ಅನಕ್ಷರಸ್ಥನಾಗಿರುವಾಗ ನಾನು ಹೇಗೆ ಮದುವೆ ಮಾಡಿಕೊಳ್ಳಲಿ, ನಾನು ವಿದ್ಯಾವಂತೆ ಮತ್ತು ಬಿ.ಎಡ್ ಮಾಡಿದ್ದೇನೆ ಎಂದು ನಾನು ಈಗಾಗಲೇ ನಿಮಗೆ ತಿಳಿಸಿದ್ದೇನೆ ಎನ್ನುತ್ತಾ ಹಾರವನ್ನು ಕೆಳಗೆ ಎಸೆದು ಹೋಗುತ್ತಾಳೆ.
ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಪರ-ವಿರೋಧ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ.(ಏಜೆನ್ಸೀಸ್​)

A post shared by Bridal lehenga (@bridal_lehenga_designn)

ದುಬೈನಲ್ಲಿ ಕೇರಳದ ಸೋಶಿಯಲ್​ ಮೀಡಿಯಾ ಸ್ಟಾರ್ ಸಾವು: ತನಿಖೆಯಲ್ಲಿ ಗಂಡನ ಕರಾಳ ಮುಖ ಬಯಲು

ಚಾಮರಾಜನಗರದಲ್ಲಿ ಯುವತಿ ಸಾವು, ಕದ್ದು ಮುಚ್ಚಿ ಅಂತ್ಯಸಂಸ್ಕಾರ… ವಾರದ ಬಳಿಕ ಸ್ಫೋಟಕ ಮಾಹಿತಿ ಬಯಲು

PSI ಹುದ್ದೆ ನೇಮಕಾತಿ ಅಕ್ರಮ: ಇಡೀ ಪರೀಕ್ಷೆ ರದ್ದು, ಮರು ಪರೀಕ್ಷೆಗೆ ಆದೇಶಿಸಿದ ಸರ್ಕಾರ

Sign in to your account
Please enter an answer in digits:14 + 12 =
Remember me
