ವಿಜಯವಾಡ:ಮದುವೆ ಆಗಲು ಇಷ್ಟವಿಲ್ಲದಿದ್ದಕ್ಕೆ ವಧುವೊಬ್ಬಳು ಮದುವೆ ಮಂಟಪದಲ್ಲೇ ಕರೊನಾ ನಾಟಕವಾಡಿ ಕೊನೆಗೂ ತನ್ನ ಕಾರ್ಯ ಸಾಧಿಸಿದ ಘಟನೆ ಆಂಧ್ರ ಪ್ರದೇಶದ ಅನಂತಪುರ ಜಿಲ್ಲೆಯ ಕದಿರಿ ಪ್ರದೇಶದಲ್ಲಿ ನಡೆದಿದೆ.
ಕದಿರಿಯ ಲಕ್ಷ್ಮೀ ನರಸಿಂಹ ದೇವಸ್ಥಾನದಲ್ಲಿ ನಿನ್ನೆ ಮದುವೆ ನಡೆಯಬೇಕಿತ್ತು. ಧರ್ಮಾವರಂ ಪಟ್ಟಣದ ಯುವಕ ಮುಡಿಗುಬ್ಬಾ ಮಂಡಲದ ಯುವತಿಯನ್ನು ವರಿಸಬೇಕಿತ್ತು. ಎರಡು ಮನೆಯವರು ಎಲ್ಲ ತಯಾರಿಯನ್ನು ಮಾಡಿಕೊಂಡು ಮದುವೆ ಆಹ್ವಾನ ಪತ್ರಿಕೆಯನ್ನು ಹಂಚಿದ್ದರು. ಅದರಂತೆ ನಿನ್ನೆ ಎಲ್ಲರು ಮದುವೆ ಮಂಟಪಕ್ಕೆ ಆಗಮಿಸಿದ್ದರು.
ಮದುವೆ ಮಂಟಪದಲ್ಲೂ ಈ ಮದುವೆ ನನಗೆ ಇಷ್ಟವಿಲ್ಲ ಎಂದು ವಧು ತನ್ನ ಪಾಲಕರಿಗೆ ಹೇಳಿದ್ದಾಳೆ. ಆದರೆ, ಆ ಬಗ್ಗೆ ಹೆಚ್ಚಿನ ಗಮನವನ್ನು ಅವರು ಕೊಡಲಿಲ್ಲ. ಮದುವೆ ತಯಾರಿ ಕಡೆ ಗಮನ ಹರಿಸಿದರು. ಇತ್ತ ಏನು ಮಾಡಬೇಕೆಂದು ದಿಕ್ಕು ತೋಚದ ವಧು, ಕೊನೆಗೆ ಪ್ರಸ್ತುತ ಸನ್ನಿವೇಶವನ್ನು ಬಂಡವಾಳ ಮಾಡಿಕೊಂಡು ತನಗೆ ಕರೊನಾ ಇದೆ ಎಂದು ಸುಳ್ಳು ಹೇಳಿದ್ದಾಳೆ.
ವಧುವಿನ ಮಾತು ಕೇಳಿ ಮಂಟಪದಲ್ಲಿದ್ದವರ ಮನಸ್ಸು ಒಂದು ಕ್ಷಣ ಬ್ಲಾಕ್​ ಕೂಡ ಆಗಿದೆ. ಕೋವಿಡ್​ ಎಂದು ಹೇಳಿದರೆ ಖಂಡಿತ ಮದುವೆ ಆಗುವುದಿಲ್ಲ ಎಂಬ ನಂಬಿಕೆಯಿಂದಲೇ ಆಕೆ ಸುಳ್ಳು ಹೇಳಿದ್ದಾಳೆ. ಇದಾದ ಬಳಿಕ ಈ ಪ್ರಕರಣ ಪೊಲೀಸ್​ ಠಾಣೆಯ ಮೆಟ್ಟಿಲೇರಿದಾಗ ನಿಜಾಂಶ ಹೊರಬಂದಿದೆ. ಪಾಸಿಟಿವ್​ ಆಗಿರುವ ಬಗ್ಗೆ ವರದಿ ಕೇಳಿದಾಗ ಇಲ್ಲವೆಂದು ಹೇಳಿದ್ದಾಳೆ. ಮದುವೆ ಇಷ್ಟವಿಲ್ಲದಿದ್ದಕ್ಕೆ ಕರೊನಾ ನಾಟಕವಾಡಿದ್ದಾಳೆಂದು ಎಲ್ಲರಿಗೂ ಗೊತ್ತಾಗಿದೆ.
ಇದು ವರನ ಪಾಲಕರ ಗಮನಕ್ಕೆ ಬಂದು ಅವರು ವಧುವಿನ ವಿರುದ್ಧ ದೂರು ನೀಡಿದ್ದಾರೆ. ಮದುವೆ ಬೇಡವೆಂದರೆ ಮೊದಲೇ ಹೇಳಬೇಕಿತ್ತು. ಇದೀಗ ಎಲ್ಲ ಸಿದ್ಧತೆ ಮಾಡಿಕೊಂಡ ಬಳಿಕ ಹೀಗೆ ಹೇಳಿದರೆ ಏನು ಅರ್ಥ? ಎಂದು ಪ್ರಶ್ನಿಸಿದ್ದಾರೆ. ಇನ್ನು ಯುವತಿ ಬ್ಯಾಂಕ್​ ಖಾತೆಗೆ ಫೋನ್​ ಪೇ ಮೂಲಕ 3 ಲಕ್ಷ ರೂ. ಹಣ ಕಳುಹಿಸಿರುವುದಾಗಿ ವರ ಹೇಳಿದ್ದು, ಹಣವನ್ನು ಮರಳಿಸುವಂತೆ ಮನವಿ ಮಾಡಿಕೊಂಡಿದ್ದಾನೆ.
ಕೊನೆಯಲ್ಲಿ ಪ್ರಕರಣದ ಬಗ್ಗೆ ಮಾತನಾಡಿದ ಕದಿರಿ ಎಸ್​ಐ, ಇಚ್ಛೆಗೆ ವಿರುದ್ಧವಾಗಿ ಮದುವೆ ಮಾಡಿಕೊಳ್ಳುವುದು ಸರಿಯಲ್ಲ. ಹಣವನ್ನು ಹಿಂದಿರುಗಿಸಲಾಗಿದ್ದು, ಮದುವೆ ವಿವಾದ ಬಗೆಹರಿದಿದೆ ಎಂದು ತಿಳಿಸಿದ್ದಾರೆ.(ಏಜೆನ್ಸೀಸ್​)
ಹೊಣೆಗಾರಿಕೆ ಅರಿತುಕೊಳ್ಳಲಿ; ಕರೊನಾ ನೆಪದಲ್ಲಿ ಹಣ ಮಾಡುವ ದಂಧೆ ಅಕ್ಷಮ್ಯ

ಸಂಸದ ತೇಜಸ್ವಿ ಸೂರ್ಯಾರನ್ನು ಉಗ್ರ ಅಜ್ಮಲ್ ಕಸಬ್​ಗೆ ಹೋಲಿಸಿದ ನಟ ಸಿದ್ದಾರ್ಥ್!

ಕಾರಿನಲ್ಲೇ ಕೂತು ಲಸಿಕೆ ಪಡೆಯಿರಿ ! ಪ್ರತಿ ವಲಯದಲ್ಲೂ ಡ್ರೈವ್​ಇನ್ ಲಸಿಕಾ ಕೇಂದ್ರಗಳ ಸ್ಥಾಪನೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × four =
Remember me
