ಮಥುರಾ (ಉತ್ತರ ಪ್ರದೇಶ):ಬೇರೊಬ್ಬನ ಜತೆ ಮದುವೆಯಾಗುತ್ತಿದ್ದ ಪ್ರೇಯಸಿಗೆ ಕಲ್ಯಾಣ ಮಂಟಪದಲ್ಲೇ ಮಾಜಿ ಪ್ರಿಯಕರ ಗುಂಡಿಟ್ಟು ಹತ್ಯೆ ಮಾಡಿರುವ ಘಟನೆ ಮಥುರಾದ ಮುಬರಿಕಪುರ ಗ್ರಾಮದ ನೌಜಹೀಲ್​ ಏರಿಯಾದಲ್ಲಿ ಶುಕ್ರವಾರ ನಡೆದಿದೆ.
ಮೃತ ವಧುವಿನ ಹೆಸರು ಕಾಜಲ್ (20)​. ಕೊರಳಿಗೆ ಹೂವಿನ ಹಾರ ಹಾಕುವ ಪದ್ಧತಿ ಮುಗಿಯುತ್ತಿದ್ದಂತೆ ಮಂಟಪದಲ್ಲೇ ಇದ್ದ ಮಾಜಿ ಪ್ರಿಯಕರ, ವಧು ಕಾಜಲ್​ಗೆ ಗುಂಡಿಕ್ಕಿದ್ದಾನೆ. ಗುಂಡಿನ ಶಬ್ದ ಕೇಳಿ ವಧುವಿನ ಕುಟುಂಬಸ್ಥರು ಸ್ಥಳಕ್ಕೆ ಧಾವಿಸಿ ಬಂದು ರಕ್ತದ ಮಡುವಿನಲ್ಲಿ ಬಿದ್ದಿದ್ದ ಮಗಳನ್ನು ನೋಡಿ ಆಘಾತಕ್ಕೆ ಒಳಗಾದರು.
ಘಟನೆ ಬಗ್ಗೆ ಮಾತನಾಡಿರುವ ವಧುವಿನ ತಂದೆ ಖುಬಿ ರಾಮ್​ ಪ್ರಜಾಪತಿ, ಹೂವಿನ ಹಾರ ಹಾಕುವ ಸಂಪ್ರದಾಯ ಮುಗಿಯುತ್ತಿದ್ದಂತೆ ಮಗಳು ಮತ್ತೆ ರೆಡಿಯಾಗಿ ಬರಲೆಂದು ತನ್ನ ಕೋಣೆಗೆ ತೆರಳಿದಳು. ಈ ವೇಳೆ ಕೋಣೆಗೆ ನುಗ್ಗಿದ ಅಪರಿಚಿತ ಗುಂಡಿಟ್ಟು ಪರಾರಿಯಾದನು ಎಂದು ಹೇಳಿದ್ದಾರೆ.
ಘಟನೆಯ ಬಳಿಕ ವಧುವಿನ ತಂದೆ ದೂರು ದಾಖಲಿಸಿದ್ದಾರೆ. ಈ ಬಗ್ಗೆ ಮಾತನಾಡಿರುವ ಮಥುರಾ ಗ್ರಾಮಾಂತರ ಪೊಲೀಸ್​ ವರಿಷ್ಠಾಧಿಕಾರಿ ಶಿರೀಶ್​ ಚಂದ್ರ, ಘಟನೆಯ ಬಗ್ಗೆ ನಮಗೆ ಮಾಹಿತಿ ತಿಳಿದಿದೆ. ದೂರು ದಾಖಲಿಸಿಕೊಂಡಿದ್ದೇವೆ. ಎಲ್ಲ ಆಯಾಮಗಳಲ್ಲೂ ನಮ್ಮ ತಂಡ ತನಿಖೆ ನಡೆಸಲಿದೆ ಎಂದು ಹೇಳಿದ್ದಾರೆ.(ಏಜೆನ್ಸೀಸ್​)
ಬೆತ್ತಲೆಯಾಗಿ ಕಾಣಿಸಿಕೊಂಡರಾ ಆಂಡ್ರಿಯಾ ಜರೆಮಿಯ? ಟೀಸರ್​ ಬಿಡುಗಡೆ ಬೆನ್ನಲ್ಲೇ ಬಿಸಿ ಬಿಸಿ ಚರ್ಚೆ ಶುರು!

ವರದಕ್ಷಿಣೆಗಾಗಿ ಪತ್ನಿಯ ಮೇಲೆ ಸಂಬಂಧಿಕರಿಂದ ಗ್ಯಾಂಗ್​​ರೇಪ್​ ಮಾಡಿಸಿ ಯೂಟ್ಯೂಬ್​ಗೆ ವಿಡಿಯೋ ಹರಿಬಿಟ್ಟ ಪತಿ

ಹಿಂದು ಎಂಬ ಕಾರಣಕ್ಕೆ ಅಫ್ರಿದಿ ಕೊಟ್ಟ ಕಿರುಕುಳದ ಇಂಚಿಂಚೂ ಮಾಹಿತಿ ಬಿಚ್ಚಿಟ್ಟ ಪಾಕ್​ ಮಾಜಿ ಆಟಗಾರ ಕನೇರಿಯಾ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × 2 =
Remember me
