ಮಲಪ್ಪುರಂ:ಮದುವೆಗೂ ಮುನ್ನ ಅಥವಾ ನಂತರ, ಸಮಯ ಯಾವುದೇ ಇರಲಿ ಇಂದಿನ ದಿನದಲ್ಲಿ ವೆಡ್ಡಿಂಗ್​ ಫೋಟೋಶೂಟ್​ ನವ ಜೋಡಿಯ ಅವಿಭಾಜ್ಯ ಅಂಗವಾಗಿದೆ. ಬಹುತೇಕ ಜೋಡಿಗಳು ತಮ್ಮ ವೆಡ್ಡಿಂಗ್​ ಫೋಟೋಗಳು ತುಂಬಾ ವಿಭಿನ್ನವಾಗಿರಬೇಕೆಂಬ ಕನಸನ್ನೂ ಹೊಂದಿರುತ್ತಾರೆ. ಸಾಧ್ಯವಾದಷ್ಟು ಸುಂದರವಾದ ತಾಣಗಳಲ್ಲಿ ಸೆರೆಹಿಡಿಯಬೇಕೆಂದು ಬಯಸುತ್ತಾರೆ. ಆದರೆ, ಕೇರಳದ ವಧುವೊಬ್ಬಳು ವಿಭಿನ್ನವಾಗಿ ವೆಡ್ಡಿಂಗ್​ ಫೋಟೋಶೂಟ್​ ಮಾಡಿಸಿದ್ದು, ಈ ಮೂಲಕವು ಸರ್ಕಾರದ ಅವ್ಯವಸ್ಥೆಯ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ.
ಹೌದು, ಮಲಪ್ಪುರಂ ಜಿಲ್ಲೆಯ ನೀಲಂಬುರ್​ ಪಟ್ಟಣದಲ್ಲಿರುವ ರಸ್ತೆಯು ಗುಂಡಿಮಯವಾಗಿದೆ. ರಸ್ತೆಯ ಈ ಶೋಚನಿಯ ಸ್ಥಿತಿಯನ್ನು ಸರ್ಕಾರಕ್ಕೆ ಮನವರಿಕೆ ಮಾಡಬೇಕೆಂಬ ಉದ್ದೇಶದಿಂದ ಪೂಕೊಟ್ಟುಂಪದಂ ಮೂಲದ ಸುಜೀಶಾ ಎಂಬಾಕೆ ರಸ್ತೆ ಗುಂಡಿಗಳ ನಡುವೆಯೇ ವೆಡ್ಡಿಂಗ ಫೋಟೋಶೂಟ್​ ಮಾಡಿಸಿದ್ದಾರೆ.
ನೀಲಂಬುರ್​ನಲ್ಲಿರುವ ಆ್ಯರೋ ವೆಡ್ಡಿಂಗ್​ ಕಂಪನಿ ಈ ಫೋಟೋಶೂಟ್​ ಮಾಡಿದೆ. ರಸ್ತೆಯು ಗುಂಡಿಮಯವಾಗಿದ್ದು, ಗುಂಡಿಗಳಲ್ಲಿ ನೀರು ತುಂಬಿ ಸವಾರರು ಬಹುದಿನಗಳಿಂದ ಪರದಾಡುವಂತಾಗಿದೆ. ಹೀಗಾಗಿ ಸಂಪೂರ್ಣ ಹಾಳಾದ ರಸ್ತೆಯ ಮಧ್ಯೆ ನಿಂತು ಫೋಟೋಶೂಟ್ ನಡೆಸುವುದು ಅಧಿಕಾರಿಗಳ ನಿಷ್ಕ್ರಿಯತೆಯ ವಿರುದ್ಧ ಪ್ರತಿಭಟಿಸುವ ಒಂದು ಸಾಧನವಾಗಿದೆ ಎಂದು ಛಾಯಾಗ್ರಾಹಕ ಆಶಿಕ್ ಹೇಳಿದರು. ಈ ಯೋಜನೆಯನ್ನು ವಧುವಿಗೆ ಸೂಚಿಸಿದಾಗ, ಅವರು ಸಹ ಒಪ್ಪಿಗೆ ನೀಡಿದರು ಎಂದು ಆಶಿಕ್​ ತಿಳಿಸಿದರು.
ಹಲವಾರು ಇನ್​ಸ್ಟಾಗ್ರಾಂ ಬಳಕೆದಾರರು ಫೋಟೋಶೂಟ್‌ಗೆ ಧನಾತ್ಮಕ ಕಾಮೆಂಟ್‌ಗಳನ್ನು ಪೋಸ್ಟ್ ಮಾಡುವ ಮೂಲಕ ತಮ್ಮ ಬೆಂಬಲವನ್ನು ಸೂಚಿಸುತ್ತಿದ್ದು, ವಧುವಿಕೆ ಬಹುಪರಾಕ್​ ಎನ್ನುತ್ತಿದ್ದಾರೆ.(ಏಜೆನ್ಸೀಸ್​)
ಲವರ್​​​ ಜತೆ ಸ್ಕೂಟಿಯಲ್ಲಿ ಹೋಗ್ತಿದ್ದ ಪತ್ನಿಯನ್ನು ರೆಡ್​ಹ್ಯಾಂಡ್​ ಆಗಿ ಹಿಡಿದ ಪತಿ! ಮುಂದೇನಾಯ್ತು ನೀವೇ ನೋಡಿ…

ಅಶ್ಲೀಲ ವಿಡಿಯೋ ಸೋರಿಕೆ ಪ್ರಕರಣ​: ಬಾಯ್​ಫ್ರೆಂಡ್​ ಬೆದರಿಕೆಗೆ ಹೆದರಿ ವಿದ್ಯಾರ್ಥಿನಿಯಿಂದ ದುಷ್ಕೃತ್ಯ

ಮೋದಿಗೆ ದೀದಿ ಕ್ಲೀನ್​ಚಿಟ್​: ಅವರ ತಪ್ಪೇ ಇಲ್ಲ ಎಂದ ಮಮತಾ ಮಾತಿಗೆ ರಾಜಕೀಯದಲ್ಲಿ ಬಿಸಿಬಿಸಿ ಚರ್ಚೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen + 18 =
Remember me
