ವಿಜಯವಾಡ:ಸಣ್ಣ ಸಣ್ಣ ವಿಷಯಗಳಿಗೂ ತೀವ್ರವಾಗಿ ಮನನೊಂದು ದುಡುಕಿನ ನಿರ್ಧಾರಗಳನ್ನು ತೆಗೆದುಕೊಳ್ಳುವುದು ದುರಂತವೇ ಸರಿ. ಅದರಲ್ಲೂ ಇಂದಿನ ಯುವ ಜನಾಂಗ ಸೂಕ್ಷ್ಮ ಮನಸ್ಥಿತಿಯನ್ನು ಹೊಂದಿದ್ದು, ಸಣ್ಣ ಮನಸ್ತಾಪಗಳನ್ನು ಮರೆಯದೇ ವಾಸ್ತವ ಲೋಕವನ್ನೇ ತೊರೆಯುತ್ತಿರುವುದು ವಿಪರ್ಯಾಸವಾಗಿದೆ.
ಮನೆಯಲ್ಲಿ ತಂದೆ ಅಥವಾ ಶಾಲೆಯಲ್ಲಿ ಟೀಚರ್​ ಬೈಯ್ಯುವುದು ಮತ್ತು ಒಡೆಯುವುದು ಸಾಮಾನ್ಯ. ಆದರೆ, ಅದನ್ನೇ ಮನಸ್ಸಿಗೆ ಹಾಕಿಕೊಂಡು ಜೀವನಕ್ಕೆ ಅಂತ್ಯವಾಡುವುದು ಎಷ್ಟು ಸರಿ? ಇದೇ ರೀತಿಯ ಪ್ರಶ್ನೆಯನ್ನು ಹುಟ್ಟುಹಾಕುವಂತಹ ಘಟನೆಯೊಂದು ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆಯ ತಲರಿವರಿಪಲ್ಲೆ ಪಟ್ಟಣದಲ್ಲಿ ನಡೆದಿದೆ. ಸಣ್ಣ ಕಾರಣಕ್ಕೆ ಬಿ.ಟೆಕ್​ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆ ಕಾರಣ ಏನೆಂದರೆ, ಮೊಟ್ಟೆ ದೋಸೆ ತಿನ್ನಲು ತಾಯಿ ದುಡ್ಡು ಕೊಡಲಿಲ್ಲ ಅಂತಾ ಮನನೊಂದು ವಿದ್ಯಾರ್ಥಿ ದುಡುಕಿನ ನಿರ್ಧಾರ ತೆಗೆದುಕೊಂಡಿದ್ದಾನೆ.
ಸಾಯಿ ಕಿರಣ್​ (21) ಮೃತ ವಿದ್ಯಾರ್ಥಿ. ಮೂರನೇ ವರ್ಷದ ಇಂಜಿನಿಯರಿಂಗ್​ ವಿದ್ಯಾರ್ಥಿಯಾಗಿದ್ದ. ಆರ್ಥಿಕ ತೊಂದರೆಯ ನಡುವೆಯೂ ಮಗನ ಓದಿಗೆ ಪಾಲಕರು ತುಂಬಾ ಕಷ್ಟಪಡುತ್ತಿದ್ದರು. ಮಗ ಚೆನ್ನಾಗಿ ಓದುತ್ತಿದ್ದಾನೆ ಎಂಬ ಆಶಾಭಾವವೂ ಪಾಲಕರಲ್ಲಿತ್ತು. ಹೀಗಿರುವಾಗ ಮಂಗಳವಾರ ಬೆಳಗ್ಗೆ ಮೊಟ್ಟೆ ದೋಸೆ ತಿನ್ನುವ ಆಸೆಯಾಗಿ ತಾಯಿಯ ಬಳಿಕ ಸಾಯಿ ಕಿರಣ್​ ಹಣ ಕೇಳಿದ್ದಾನೆ. ಇದರಿಂದ ಕುಪಿತಗೊಂಡ ತಾಯಿ ಮನೆಯಲ್ಲಿ ಅನ್ನ-ಸಾಂಬರ್​ ಇದೆ ತಿನ್ನು, ಸುಮ್ಮನೇ ಹಣ ವ್ಯರ್ಥ ಮಾಡಬೇಡ ಎಂದು ಗದರಿದ್ದಾರೆ.
ತಾಯಿ ಹೇಳಿದ ಮಾತಿನಿಂದ ಮನನೊಂದ ಸಾಯಿ ಕಿರಣ್​ ತಕ್ಷಣ ಮನೆ ಬಿಟ್ಟು ಹೋಗಿ ಕೆರೆಯೊಂದಕ್ಕೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಜಮೀನಿನಲ್ಲಿ ಕೆಲಸ ಮಾಡುತ್ತಿದ್ದವರು ಮೃತದೇಹವನ್ನು ಕಂಡು ಪೊಲೀಸರಿಗೆ ಮಾಹಿತಿ ನೀಡಿದ ಬಳಿಕ ಸ್ಥಳಕ್ಕೆ ಧಾವಿಸಿದ ಪೊಲೀಸರು ಮೃತದೇಹ ಹೊರತೆಗೆದು ಮರಣೋತ್ತರ ಪರೀಕ್ಷೆಗಾಗಿ ಚಿತ್ತೂರು ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ.
ಮಗನನ್ನು ಕಳೆದುಕೊಂಡ ಕುಟುಂಬದಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ. ಕೇವಲ ಮೊಟ್ಟೆ ದೋಸೆ ಕೊಡಿಸಲಿಲ್ಲ ಎಂಬ ಕಾರಣಕ್ಕೆ ಮಗ ಆತ್ಮಹತ್ಯೆ ಮಾಡಿಕೊಂಡಿದ್ದಾನೆಂಬ ತಾಯಿಯ ಮಾತು ಕೇಳಿ ಇಡೀ ಗ್ರಾಮವೇ ಆಘಾತಕ್ಕೀಡಾಗಿದೆ. ಯುವ ಜನಾಂಗದಲ್ಲಿ ಈ ರೀತಿಯ ಪ್ರವೃತ್ತಿ ಉತ್ತಮವಲ್ಲ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.(ಏಜೆನ್ಸೀಸ್​)
ನಾಗಚೈತನ್ಯ ಜತೆ ಡಿವೋರ್ಸ್ ಆದ್ರೆ ಸಮಂತಾಗೆ ಸಿಗಲಿರುವ ಜೀವನಾಂಶದ ಮೊತ್ತ ಇಷ್ಟಂತೆ..!

ಸಮಂತಾ-ನಾಗಚೈತನ್ಯ ಮನಸ್ತಾಪಕ್ಕೆ ಇದೇ ಕಾರಣನಾ? ಟಾಲಿವುಡ್​ ಅಂಗಳದಲ್ಲಿ ಹೀಗೊಂದು ಬಿಸಿ ಬಿಸಿ ಚರ್ಚೆ..!

ಆರ್​ಜಿವಿ ಸಂದರ್ಶನದಲ್ಲಿ ಲೈಂಗಿಕತೆ ಬಗ್ಗೆ ಬಿಚ್ಚು ಮಾತು: ನಟಿ ಆಶು ರೆಡ್ಡಿ ಕುಟುಂಬದಲ್ಲಿ ಅಲ್ಲೋಲ ಕಲ್ಲೋಲ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eight − six =
Remember me
