ನವದೆಹಲಿ:ಇಂದು ಬಜೆಟ್​ ಮಂಡಿಸುವ ವೇಳೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​ ಅವರು ಡಿಜಿಟಲ್​ ಯೂನಿವರ್ಸಿಟಿ ಸ್ಥಾಪನೆಗೆ ಕೇಂದ್ರ ಸರ್ಕಾರ ಯೋಜನೆ ರೂಪಿಸುತ್ತಿದೆ ಎಂದು ಘೋಷಿಸಿದರು. ಈ ಡಿಜಿಟಲ್​ ಯೂನಿವರ್ಸಿಟಿಯು ದೇಶದ ವಿದ್ಯಾರ್ಥಿಗಳಿಗೆ ವಿಶ್ವ ದರ್ಜೆಯ ಶಿಕ್ಷಣವನ್ನು ನೀಡಲಿದೆ ಎಂದರು.
ವಿಶ್ವದರ್ಜೆಯ ಸಾರ್ವತ್ರಿಕ ಶಿಕ್ಷಣವನ್ನು ವೈಯಕ್ತಿಕ ಕಲಿಕಾ ಅನುಭವದೊಂದಿಗೆ ದೇಶದ ವಿದ್ಯಾರ್ಥಿಗಳ ಮನೆಯ ಬಾಗಿಲಿಗೆ ಪೂರೈಸಲು ಡಿಜಿಟಲ್​ ಯುನಿವರ್ಸಿಟಿಯನ್ನು ಸ್ಥಾಪಿಸಲಾಗುವುದು ಎಂದು ಬಜೆಟ್​ ಮಂಡನೆ ವೇಳೆ ನಿರ್ಮಲಾ ಸೀತಾರಾಮನ್​ ಹೇಳಿದರು.
ಡಿಜಿಟಲ್​ ಯೂನಿವರ್ಸಿಟಿ ಅಂದರೆ ಏನು?ನೆಟ್ವರ್ಕ್​ ಹಬ್​ ಮತ್ತು ಸ್ಪೋಕ್ ಮಾಡೆಲ್​ ಆಧಾರದ ಮೇಲೆ ಕೇಂದ್ರ ಸರ್ಕಾರವು ಡಿಜಿಟಲ್​ ಯೂನಿವರ್ಸಿಟಿಯನ್ನು ಸ್ಥಾಪಿಸಲು ಯೋಜಿಸಿದೆ. ಇಲ್ಲಿ ಹಬ್​ ಮತ್ತು ಸ್ಪೋಕ್​ ಮಾಡೆಲ್​ ವಿತರಣಾ ವಿಧಾನವಾಗಿ ಕಾರ್ಯನಿರ್ವಹಿಸಲಿದೆ. ಅಂದ್ರೆ ಕೇಂದ್ರಿಕೃತ ಹಬ್​ನಲ್ಲಿ ಸೃಷ್ಟಿಯಾಗುವ ಜ್ಞಾನವನ್ನು ಸ್ಪೋಕ್​ ಸಣ್ಣ ಸಣ್ಣ ಸ್ಥಳಗಳ ಅಂತಿಮ ಬಳಕೆಯವರೆಗೂ ತಲುಪಿಸುತ್ತದೆ.
ಇಲ್ಲಿ “ಹಬ್​” ಎಂಬುದು ದೇಶದ ಅತ್ಯುತ್ತಮ ಸರ್ಕಾರಿ ವಿಶ್ವವಿದ್ಯಾಲಯಗಳು ಮತ್ತು ಸಂಸ್ಥೆಗಳನ್ನು ಸೂಚಿದರೆ, ಸ್ಪೋಕ್​ ಪ್ರತಿಯೊಬ್ಬ ವೈಯಕ್ತಿಕ ವಿದ್ಯಾರ್ಥಿಗಳನ್ನು ಸೂಚಿಸುತ್ತದೆ. ಹಬ್​ನಲ್ಲಿ ಸೃಷ್ಟಿಯಾಗುವ ಜ್ಞಾನವನ್ನು ಡಿಜಿಟಲ್​ ಮಾಧ್ಯಮಗಳ ಮೂಲಕ ಪ್ರತಿಯೊಬ್ಬ ವಿದ್ಯಾರ್ಥಿಯನ್ನು ತಲುಪಿಸುವುದು ಡಿಜಿಟಲ್​ ಯೂನಿವರ್ಸಿಟಿಯ ಕರ್ತವ್ಯ ಆಗಿರಲಿದೆ.
ಪ್ರತಿಯೊಂದು ಹಬ್​ಗಳು ಕೂಡ “ಅತ್ಯಾಧುನಿಕ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ ಪರಿಣತಿಯನ್ನು” ನಿರ್ಮಿಸುವ ನಿರೀಕ್ಷೆಯಿದೆ. ನಿರ್ಮಲಾ ಸೀತಾರಾಮನ್​ ಮಾತಿನ ಪ್ರಕಾರ ಹಬ್​ನಲ್ಲಿ ನೀಡಲಾಗುವ ಜ್ಞಾನವೂ ದೇಶದ ವಿವಿಧ ಭಾಷೆಗಳಲ್ಲಿ ದೊರೆಯಲಿದೆ.
ಐಎಸ್​ಟಿಇ ಗುಣಮಟ್ಟದ ಪ್ರಕಾರವೇ ಡಿಜಿಟಲ್​ ಯೂನಿವರ್ಸಿಟಿ ಸ್ಥಾಪನೆಯಾಗಲಿದೆ. ಐಎಸ್​ಟಿಇ ಮಾನದಂಡಗಳು ಬೋಧನೆ ಮತ್ತು ಕಲಿಕೆಯಲ್ಲಿ ತಂತ್ರಜ್ಞಾನದ ಬಳಕೆಯ ಮಾನದಂಡವನ್ನು ತಿಳಿಸುತ್ತದೆ.(ಏಜೆನ್ಸೀಸ್​)
ಸೇನೆಗೆ ಈ ಸಲ ಅಧಿಕ ಆದ್ಯತೆ; ಕಳೆದ ವರ್ಷಕ್ಕಿಂತಲೂ ಶೇ. 10 ಹೆಚ್ಚು ಹಣ

ಕೇಂದ್ರ ಬಜೆಟ್ 2022: ಜನ ಸಾಮಾನ್ಯರಿಗೆ ಯಾವುದು ಅಗ್ಗ? ಯಾವುದು ದುಬಾರಿ?

ಕರೊನಾ ಸಂಕಷ್ಟ ಕಾಲದಲ್ಲಿ ಯಾರಿಗೂ ಹೊರೆಯಾಗದ ಕೇಂದ್ರ ಬಜೆಟ್​

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:15 − three =
Remember me
