ಭೋಪಾಲ್​:ನಾಯಿ ಮತ್ತು ಬೆಕ್ಕು ಸೇರಿದಂತೆ ಕೆಲವೊಂದು ಸಾಕು ಪ್ರಾಣಿಗಳು ಮನುಷ್ಯರಂತೆಯೇ ಮನೆಯಲ್ಲಿ ಆರಾಮವಾಗಿ ಓಡಾಡಿಕೊಂಡು ಇರುತ್ತವೆ. ವಿಶೇಷವಾಗಿ ನಾಯಿ ಹಾಗೂ ಬೆಕ್ಕು ಮಾಲೀಕರ ಹಿಂದೆ ಸುತ್ತವುದು, ಕಾಲಿಗೆ ಸಿಕ್ಕಿಕೊಳ್ಳುವುದು ಸಾಮಾನ್ಯ. ಇಂತಹ ಪ್ರಾಣಿಗೆ ಬೃಹತ್​ ಗಾತ್ರದ ಕಟ್ಟಡಗಳನ್ನು ಸುಲಭವಾಗಿ ಏರುತ್ತವೆ. ಇಂತಹ ಪ್ರಾಣಿಗಳು ಮನೆಯಲ್ಲಿದ್ದರೆ ಅಚ್ಚರಿಯೇನಿಲ್ಲ.
ಆದರೆ, ಮನೆಯ ಹೊರಗೆ ಕೊಟ್ಟಿಗೆಯಲ್ಲಿ ವಾಸಿಸುವ ಎತ್ತು ಅಥವಾ ಗೂಳಿ ಮನೆಯೊಳಗಿನ ಬೆಡ್​ರೂಮ್​ನಲ್ಲಿ ಕುಳಿತಿದೆ ಅಂದರೆ ಯಾರು ನಂಬಲಾರರು. ಸಾಮಾನ್ಯವಾಗಿ ಗೃಹಪ್ರವೇಶದ ದಿನಗಳಲ್ಲಿ ಮಾತ್ರ ಈ ಪ್ರಾಣಿಗಳನ್ನು ಮನೆಯೊಳಗೆ ಕರೆತರುತ್ತಾರೆ. ಆದರೆ, ಇನ್ನಿತರ ದಿನಗಳಲ್ಲಿ ಅದರ ಸ್ಥಾನವೇನಿದ್ದರೂ ಮನೆಯ ಹೊರಗಡೆಯಷ್ಟೇ. ಆದರೆ, ಇಲ್ಲೊಂದು ಗೂಳಿ ಕಟ್ಟಡದ ಮೂರನೇ ಮಹಡಿಯನ್ನು ಏರಿ ಬೆಡ್​ರೂಮ್​ನಲ್ಲಿ ಕುಳಿತಿದೆ ಅಂದರೆ ಯಾರು ನಂಬುವುದಿಲ್ಲ. ಆದರೆ ನಾವು ಹೇಳುತ್ತಿರುವುದು ಸತ್ಯ.
ಮಧ್ಯಪ್ರದೇಶದಲ್ಲಿ ರೇವಾ ಏರಿಯಾದಲ್ಲಿ ಘಟನೆ ನಡೆದಿದ್ದು, ಮೂರನೇ ಮಹಡಿ ಏರಿ ಬಂದ ಎತ್ತು, ಸುಸ್ತಾಗಿ ಮನೆಯೊಂದರ ಬೆಡ್​ ರೂಮಿಗೆ ತೆರಳಿ ವಿಶ್ರಾಂತಿ ಪಡೆದಿದೆ. ಮನೆಯವರು ಟಿವಿ ನೋಡುವುದರಲ್ಲಿ ನಿರತರಾಗಿದ್ದ ಸಮಯದಲ್ಲಿ ಎತ್ತು ಮನೆಯೊಳಗೆ ಬಂದಿದೆ. ಆದರೆ, ಇದು ಯಾರ ಗಮನಕ್ಕೂ ಬಂದಿಲ್ಲ. ಎತ್ತು ಇಕ್ಕಟಾದ ಮೆಟ್ಟಿಲುಗಳನ್ನು ಏರಿ ಬಂದಿದ್ದು ನಿಜಕ್ಕೂ ಅಚ್ಚರಿ. ಮೊದಲೇ ಸುಸ್ತಾಗಿದ್ದ ಹಸು ಮನೆಯೊಳಗೆ ನುಗ್ಗಿ ಬೆಡ್​ ಮೇಲೆ ಮಲಗಿದೆ.
ಟಿವಿ ನೋಡುತ್ತಿದ್ದವರಲ್ಲಿ ಒಬ್ಬರು ಕೆಲ ಸಮಯದ ಬಳಿಕ ಕೋಣೆಗೆ ಬಂದಾಗ ಎತ್ತನ್ನು ನೋಡಿ ಗಾಬರಿಯಾಗಿದ್ದಾರೆ. ಬಳಿಕ ಎತ್ತನ್ನು ಮನೆಯಿಂದ ಹೊರಗೆ ಓಡಿಸಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋವೊಂದು ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.(ಏಜೆನ್ಸೀಸ್​)
ಸೀರೆಯೆಂದರೆ ಸಂಭ್ರಮವೆನ್ನುತ್ತ ಪುಷ್​ಅಪ್ ಮಾಡುವ ಡಾಕ್ಟರ್! ನೆಟ್ಟಿಗರ ಮನಗೆದ್ದ ವೈದ್ಯೆ

ಕರೊನಾ ಕ್ವಾರಂಟೈನ್ ಉಲ್ಲಂಘಿಸಿದ ಭಾರತೀಯನಿಗೆ ಬಹ್ರೈನ್​ನಲ್ಲಿ 3 ವರ್ಷ ಜೈಲು ಶಿಕ್ಷೆ! ಸಹಾಯಕ್ಕೆ ಮೊರೆ

ಗಂಡನೊಂದಿಗೆ ಫೋನ್​ನಲ್ಲಿ ಮಾತನಾಡುತ್ತಾ ಹೊರಹೋದವಳು ದೂರದ ರೈಲ್ವೆ ಹಳಿ ಬಳಿ ಮಾಂಸವಾಗಿ ಪತ್ತೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 + 1 =
Remember me
