ಹೈದರಾಬಾದ್​:ತಮ್ಮ ಮದುವೆ ದಿಬ್ಬಣದಲ್ಲಿ “ನೀ ಬುಲೆಟ್ಟು ಬಂಡಿ” ಎಂಬ ಟಪ್ಪಾಂಗುಚ್ಚಿ ಹಾಡಿಗೆ ನವವಧು ಒಬ್ಬರು ತನ್ನ ಪತಿಯೊಂದಿಗೆ ಸೊಂಟ ಬಳುಕಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿ, ನೆಟ್ಟಿಗರಿಂದ ಮೆಚ್ಚುಗೆ ವ್ಯಕ್ತವಾಗುತ್ತದಂತೆ ವಧುವಿಗೆ ಒಳ್ಳೆಯ ಆಫರ್​ ಒಂದು ಒಲಿದು ಬಂದಿದೆ.
ಗಾಯಕ ಮೋಹನ್​ ಭೋಗರಾಜು ಹಾಡುಗಳನ್ನು ನಿರ್ಮಿಸುವ ಮನರಂಜನಾ ಕಂಪನಿಯೊಂದು ವಧುವಿಗೆ ಆಫರ್​ ಒಂದನ್ನು ನೀಡಿದೆ. ಕಂಪನಿಯ ಹೆಸರು ಬ್ಲ್ಯೂ ರಾಬಿಟ್​ ಎಂಟರ್​ಟೈನ್ಮೆಂಟ್​. ತಮ್ಮ ಮುಂದಿನ ಹಾಡಿಗೆ ಹೆಜ್ಜೆ ಹಾಕುವ ಅವಕಾಶವನ್ನು ಮದುವೆ ದಿಬ್ಬಣದಕಲ್ಲಿ ಕುಪ್ಪಳಿಸಿದ ವಧುವಿಗೆ ನೀಡುವುದಾಗಿ ಕಂಪನಿಯ ಮ್ಯಾನೇಜರ್​ ಘೋಷಣೆ ಮಾಡಿದ್ದಾರೆ.
ವಿವರಣೆಗೆ ಬರುವುದಾದರೆ, ವಧವಿನ ಹೆಸರು ಸಾಯಿ ಶ್ರೀಯಾ. ಈಕೆ ಅರಣ್ಯ ಇಲಾಖೆಯ ಉದ್ಯೋಗಿ ರಾಮು ಮತ್ತು ಸುರೇಖಾ ದಂಪತಿಯ ಹಿರಿಯ ಮಗಳು. ತೆಲಂಗಾಣದ ಮಂಚೇರಿಯಲ್​ ಜಿಲ್ಲೆಯ ಜನ್ನಾರ ಮೂಲದವರು. ಇದೇ ತಿಂಗಳ 14ರಂದು ರಾಮಕೃಷ್ಣಪುರದ ಅಕುಲಾ ಅಶೋಕ್​ ಎಂಬುವರನ್ನು ಶ್ರೀಯಾ ವರಿಸಿದರು.
ಮದುವೆಯ ದಿಬ್ಬಣದ ವೇಳೆ ಶ್ರೀಯಾ “ನೀ ಬುಲೆಟ್ಟು ಬಂಡಿ” ಎಂಬ ಜಾನಪದ ಹಾಡಿಗೆ ಮಸ್ತ್​ ಸ್ಟೆಪ್ಸ್​ ಹಾಕಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿ, ರಾತ್ರೋರಾತ್ರಿ ಫೇಮಸ್​ ಆಗಿದ್ದಾರೆ. ಶ್ರೀಯಾ ಡ್ಯಾನ್ಸ್​ ನೋಡಿ ಅನೇಕ ನೆಟ್ಟಿಗರು ಸಹ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.
ಈ ಹಾಡನ್ನು ಕೇಳಿರುವ ಬ್ಲ್ಯೂ ರಾಬಿಟ್​ ಎಂಟರ್​ಟೈನ್ಮೆಂಟ್​ ಕಂಪನಿ ತಕ್ಷಣ ಶ್ರೀಯಾ ಕರೆ ಮಾಡಿ ಮಾತನಾಡಿದೆ. ಮುಂದಿನ ಹಾಡಿನಲ್ಲಿ ಹೆಜ್ಜೆ ಹಾಕಲು ಅವಕಾಶ ನೀಡುವುದಾಗಿ ಹೇಳಿದೆ. ಇದರಿಂದ ಖುಷಿಯಾಗಿರುವ ಶ್ರೀಯಾ, ಇಷ್ಟು ದೊಡ್ಡ ಅವಕಾಶ ಬರುವಾಗ ಬೇಡ ಎನ್ನಲು ಹೇಗೆ ಸಾಧ್ಯ ಎಂದಿದ್ದಾರೆ. ಮುಖ್ಯ ಪಾತ್ರದಲ್ಲಿ ಶೀಘ್ರದಲ್ಲೇ ಹೊಸ ಹಾಡಿನಲ್ಲಿ ಶ್ರೀಯಾ ನಟಿಸಲಿದ್ದಾರೆ.(ಏಜೆನ್ಸೀಸ್​)
(ವಿಡಿಯೋ ಕೃಪೆ: ಪ್ರೈಮ್​ ಟೈಮ್​ ಟಿವಿ)

ಪುಡಾರಿಗಳ ಅಡ್ಡೆಯಾದ ಚಾಮುಂಡಿ ಬೆಟ್ಟದ ತಪ್ಪಲು: ಗ್ಯಾಂಗ್​ರೇಪ್​ ಜಾಗದಲ್ಲಿ ಮದ್ಯದ ಬಾಟಲಿ, ಕಾಂಡೋಮ್ ಪತ್ತೆ

ಮೈಸೂರಲ್ಲಿ ಗ್ಯಾಂಗ್​ ರೇಪ್​: ವಿಡಿಯೋ ಮಾಡಿ ಹಣಕ್ಕೆ ಬೇಡಿಕೆ ಇಟ್ಟ ಕಾಮುಕರು, ರಾತ್ರಿವರೆಗೂ ಕಾದು ಅಟ್ಟಹಾಸ ಮೆರೆದ್ರು…

ಆಫ್ಘಾನ್​ನಲ್ಲಿ ಅರಾಜಕತೆ: 1 ಬಾಟಲ್ ನೀರಿಗೆ​ 3000 ರೂ. ಆದ್ರೆ, ಒಂದು ಪ್ಲೇಟ್​ ಊಟದ ಬೆಲೆ ತಲೆ ತಿರುಗುವಂತಿದೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × 4 =
Remember me
