ಪಲಕ್ಕಾಡ್​:ಅಪಾಯಕಾರಿ ರೀತಿಯಲ್ಲಿ​​ ಓವರ್​ಟೇಕ್​ ಮಾಡಿದ್ದಕ್ಕೆ ಆಕ್ರೋಶಗೊಂಡ ಮಹಿಳೆಯೊಬ್ಬರು ತಮ್ಮ ಸ್ಕೂಟರ್​ನಲ್ಲಿ ಬಸ್​ ಅನ್ನು ಬೆನ್ನಟ್ಟಿ ಹೋಗಿ ತಡೆದು, ನಡುರಸ್ತೆಯಲ್ಲಿ ಚಾಲಕನಿಗೆ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡ ಘಟನೆ ಕೇರಳದ ಪೆರುಮನ್ನೂರಿನ ಕೂಟ್ಟನಾಡ್​ ಬಳಿ ನಡೆದಿರುವುದಾಗಿ ಮಂಗಳವಾರ (ಸೆ.6) ವರದಿಯಾಗಿದೆ.
ಪೆರಮನ್ನೂರಿನ ನಿವಾಸಿ ಸಾಂದ್ರಾ ಎಂಬಾಕೆ ಬಸ್​ ತಡೆದು ನಡುರಸ್ತೆಯಲ್ಲೇ ಚಾಲಕನಿಗೆ ಕ್ಲಾಸ್ ತೆಗೆದುಕೊಂಡ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ.
ಘಟನೆಯ ವಿವರಣೆಗೆ ಬರುವುದಾದರೆ, ಪಲಕ್ಕಾಡ್​ ಮತ್ತು ಗುರುವಾಯೂರ್​ ನಡುವೆ ಸಂಚರಿಸುವ ರಾಜಪ್ರಭ ಹೆಸರಿನ ಬಸ್​, ಮಹಿಳೆಯ ಸ್ಕೂಟರ್​ ಅನ್ನು ಅಪಾಯಕಾರಿ ರೀತಿಯಲ್ಲಿ ಓವರ್​ಟೇಕ್​ ಮಾಡಿದೆ ಎಂದು ಆರೋಪ ಕೇಳಿಬಂದಿದೆ. ಇನ್ನೇನು ಬಸ್​ ಸ್ಕೂಟರ್​ಗೆ ಡಿಕ್ಕಿ ಹೊಡೆಯಿತು ಎನ್ನುವಷ್ಟರಲ್ಲಿ ಬಹುದೊಡ್ಡ ಅಪಘಾತದಿಂದ ಅದೃಷ್ಟವಶಾತ್​ ಪಾರಾಗಿದ್ದೇನೆ ಎಂದು ಸಾಂದ್ರಾ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ:ಶಾಲೆಯ ಟಾಯ್ಲೆಟ್​ನಲ್ಲಿ ಮಗುವಿಗೆ ಜನ್ಮ ನೀಡಿದ 11ನೇ ತರಗತಿ ವಿದ್ಯಾರ್ಥಿನಿ! SSLC ವಿದ್ಯಾರ್ಥಿ ವಿರುದ್ಧ ದೂರು ದಾಖಲು
ಬಸ್​ ಚೇಸ್​ ಮಾಡಿದ ರೀತಿಯಿಂದ ಆಕ್ರೋಶಗೊಂಡ ಸಾಂದ್ರಾ, ಕೂಡಲೇ ತಮ್ಮ ಸ್ಕೂಟರ್​ ಮೂಲಕ ಮುಂದಿನ ನಿಲ್ದಾಣದಲ್ಲಿ ಬಸ್​ ತಡೆದಿದ್ದಾರೆ. ಸ್ಕೂಟರ್​ ಅನ್ನು ಬಸ್​ ಮುಂದೆಯೇ ಪಾರ್ಕ್​ ಮಾಡಿ ಪ್ರತಿಭಟಿಸಿದ್ದಾರೆ. ಅವರು ಬಸ್​ ತಡೆದ ಸಮಯದಲ್ಲಿ ಚಾಲಕನ ಕಿವಿಯಲ್ಲಿ ಇಯರ್​ ಫೋನ್​ ಇತ್ತೆಂದು ಆರೋಪ ಮಾಡಿದ್ದಾರೆ.
ಸದ್ಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದ್ದು, ಮಹಿಳೆಯ ದಿಟ್ಟತನಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ ಮತ್ತು ಚಾಲಕನ ನಿರ್ಲಕ್ಷ್ಯದ ವಿರುದ್ಧ ನೆಟ್ಟಿಗರು ಕಿಡಿಕಾರಿದ್ದು, ಕಠಿಣ ಕ್ರಮಕ್ಕೆ ಆಗ್ರಹಿಸುತ್ತಿದ್ದಾರೆ.(ಏಜೆನ್ಸೀಸ್​)
(ವಿಡಿಯೋ ಕೃಪೆ: ಮಾತೃಭೂಮಿ ಕೇರಳ)

ಮೈಸೂರು ಪಾಲಿಕೆ ಚುನಾವಣೆ: ಬಿಜೆಪಿಯ ಶಿವಕುಮಾರ್ ನೂತನ ಮೇಯರ್, JDS ಎಡವಟ್ಟು, ಕಾಂಗ್ರೆಸ್​ ಸಂಭ್ರಮ

ಸೈರಸ್ ಮಿಸ್ತ್ರಿ ಸಾವು: ಅಪಘಾತಕ್ಕೀಡಾದ ಕಾರಿನ ವೇಗ ಎಷ್ಟಿತ್ತು? ಮರಣೋತ್ತರ ಪರೀಕ್ಷಾ ವರದಿಯಲ್ಲಿ ಏನಿದೆ?

27 ವರ್ಷಗಳಲ್ಲಿ 5000 ಕಾರು ಕಳವು: 3 ಹೆಂಡತಿಯರು, ಲಕ್ಷುರಿ ಜೀವನ, ಭಾರತದ ಅತಿ ದೊಡ್ಡ ಕಾರು ಕಳ್ಳ ಸಿಕ್ಕಿಬಿದ್ದಿದ್ಹೇಗೆ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:ten − nine =
Remember me
