ಯವತ್ಮಾಲ್​ (ಮಹಾರಾಷ್ಟ್ರ):ಎಂಟು ಪ್ರಯಾಣಿಕರಿದ್ದ ಮಹಾರಾಷ್ಟ್ರದ ಸರ್ಕಾರಿ ಬಸ್ ಪ್ರವಾಹದಿಂದ ಉಕ್ಕಿ ಹರಿಯುತ್ತಿದ್ದ ಸೇತುವೆ ಮೇಲೆ ಚಲಿಸುವಾಗ ನೀರಿನ ಸೆಳೆತಕ್ಕೆ ಕೊಚ್ಚಿ ಹೋಗಿರುವ ಘಟನೆ ಮಂಗಳವಾರ ಬೆಳಗ್ಗೆ ಯವತ್ಮಾಲ್​ ಜಿಲ್ಲೆಯ ಉಮರ್ಖೇದ್​ ಪಟ್ಟಣದಲ್ಲಿ ನಡೆದಿದೆ.
ಸ್ಥಳೀಯರ ಎಚ್ಚರಿಕೆಯನ್ನು ನಿರ್ಲಕ್ಷಿಸಿ ಚಾಲಕ ಬಸ್​ ಚಲಾಯಿಸಿಕೊಂಡು ಹೋಗಿದ್ದೇ ಅನಾಹುತಕ್ಕೆ ಕಾರಣವಾಗಿದೆ. ಮಹಾರಾಷ್ಟ್ರ ಸರ್ಕಾರಿ ಬದ್​ ನಾಂದೇಡ್​ನಿಂದ ನಾಗ್ಪುರಕ್ಕೆ ತೆರಳುತ್ತಿತ್ತು. ನಡುವೆ ಉಮರ್ಖೇದ್​ನಲ್ಲಿ ನದಿಗೆ ಅಡ್ಡಲಾಗಿ ನಿರ್ಮಾಣವಾಗಿರುವ ಸೇತುವೆ ಭಾರಿ ಮಳೆಯ ಪ್ರವಾಹದಿಂದ ಉಕ್ಕಿ ಹರಿಯುತ್ತಿತ್ತು. ನೀರಿನಲ್ಲಿ ಕೆಲವೇ ದೂರ ಸಾಗಿದ ಬಸ್​, ಸೇತುವೆ ಹೋಗುತ್ತಿದ್ದಂತೆ ನೀರಿನ ಸೆಳೆತಕ್ಕೆ ಕೊಚ್ಚಿ ಹೋಗಿದೆ.
ಕೊಚ್ಚಿ ಹೋಗುತ್ತಿದ್ದ ಬಸ್​ ಮರವೊಂದರ ಕೊಂಬೆಗೆ ಸಿಲುಸಿಕೊಂಡಿದೆ. ಹೇಗೋ ನಾಲ್ವರು ಪ್ರಯಾಣಿಕರು ಬಸ್​ನ ರೂಫ್​ ಏರಿ ಬಚಾವ್​ ಆಗಿದ್ದಾರೆ. ಇನ್ನು ಮೂವರನ್ನು ಸ್ಥಳೀಯರು ರಕ್ಷಣೆ ಮಾಡಿದ್ದಾರೆ. ಇನ್ನೊಬ್ಬ ಪ್ರಯಾಣಿಕ ನಾಪತ್ತೆಯಾಗಿದ್ದು, ಪತ್ತೆ ಕಾರ್ಯ ನಡೆಯುತ್ತಿದೆ.
ಜಿಲ್ಲೆಯ ಉನ್ನತ ಪೊಲೀಸ್ ಅಧಿಕಾರಿಗಳು, ರಾಜ್ಯ ಸಾರಿಗೆ ಅಧಿಕಾರಿಗಳು ಮತ್ತು ಅಗ್ನಿಶಾಮಕ ದಳದ ತಂಡಗಳು ಸುತ್ತಮುತ್ತಲಿನ ಹಳ್ಳಿಗಳ ಯುವಕರೊಂದಿಗೆ ರಕ್ಷಣಾ ಕಾರ್ಯ ನಡೆಸುತ್ತಿದೆ.(ಏಜೆನ್ಸೀಸ್​)
(ವಿಡಿಯೋ ಕೃಪೆ: ಲೋಕಮಾತ ನ್ಯೂಸ್​)
यवतमाळ – उमरखेडजवळ वाहून गेली बस, युवकांनी घेतल्या पाण्यात उड्याpic.twitter.com/5EmVMeksh2
— Lokmat (@lokmat)September 28, 2021

ಬಿಜೆಪಿ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಸುರೇಶ್​ಗೌಡ ರಾಜೀನಾಮೆ: ಸಂಸದ ಜಿಎಸ್​ಬಿ, ಸಚಿವ ಮಾಧುಸ್ವಾಮಿ ಹೆಸರು ತಳುಕು

ಅತ್ಯಾಚಾರ ಸಂತ್ರಸ್ತೆಯ ಜೀವ ಉಳಿಸಿದ ನಟಿ ಜ್ಯೋತಿಕಾ ಸಿನಿಮಾ: ಸಂಬಂಧಿಯ ಕರಾಳ ಮುಖ ಬಿಚ್ಚಿಟ್ಟ ಬಾಲಕಿ

ಏಷ್ಯಾದ ಅತಿದೊಡ್ಡ ಸುರಂಗ ಮಾರ್ಗ ಶೀಘ್ರ ಮುಕ್ತಾಯ: ಚೀನಾ-ಪಾಕ್‌ ಗಡಿಯಲ್ಲಿರೋ ಇದಕ್ಕಿದೆ ಹಲವಾರು ವಿಶೇಷತೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 2 =
Remember me
