ಭೋಪಾಲ್​:ಮಹಿಳಾ ಕಾನ್ಸ್​ಟೇಬಲ್​ ಮೇಲಿನ ಗ್ಯಾಂಗ್​ರೇಪ್​ ಪ್ರಕರಣ ಮಾಸುವ ಮುನ್ನವೇ ಮತ್ತೊಬ್ಬ ಮಹಿಳಾ ಪೊಲೀಸ್​ ಅಧಿಕಾರಿ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣ ಮಧ್ಯಪ್ರದೇಶದಿಂದ ವರದಿಯಾಗಿದೆ.
ಮಹಿಳಾ ಅಧಿಕಾರಿಯ ಕಾರು ಚಾಲಕ ಆಕೆಯ ಮನೆಯ ಬಾತ್​ರೂಮ್​ನಲ್ಲಿ ಕ್ಯಾಮೆರಾ ಇಟ್ಟು ಬೆತ್ತಲೇ ವಿಡಿಯೋ ಚಿತ್ರೀಕರಿಸಿರುವ ಆರೋಪ ಕೇಳಿಬಂದಿದೆ. ವಿಡಿಯೋ ಡಿಲೀಟ್​ ಮಾಡಬೇಕಾದರೆ 5 ಲಕ್ಷ ರೂಪಾಯಿ ಹಣ ಕೊಡುವಂತೆ ಆರೋಪಿ ಬೇಡಿಕೆ ಇಟ್ಟಿದ್ದು, ಇದರಿಂದ ಆಘಾತಕ್ಕೆ ಒಳಗಾಗಿರುವ ಸಂತ್ರಸ್ತೆ ಮಹಿಳಾ ಅಧಿಕಾರಿ ಹಿರಿಯ ಅಧಿಕಾರಿಗಳಿಗೆ ದೂರು ನೀಡಿದ್ದಾರೆ.
ಕಾನ್ಸ್​ಟೇಬಲ್​ ಒಬ್ಬ ಮಹಿಳಾ ಅಧಿಕಾರಿಗೆ ಚಾಲಕನಾಗಿ ಕೆಲಸ ನಿರ್ವಹಿಸುತ್ತಿದ್ದಾನೆ. ಇದೇ ತಿಂಗಳ 22ರಂದು ಮಹಿಳಾ ಅಧಿಕಾರಿಯ ಮನೆಯನ್ನು ಪ್ರವೇಶಿಸಿರುವ ಕಾನ್ಸ್​ಟೇಬಲ್​ ಬಾತ್​ರೂಮ್​ ಬಾಗಿಲ ಕಿಂಡಿಯಲ್ಲಿ ಫೋನ್​ ಕ್ಯಾಮೆರಾ ಇಟ್ಟು ರೆಕಾರ್ಡ್​ ಮಾಡಿಕೊಂಡಿದ್ದಾನೆ. ಇದು ಗೊತ್ತಾದ ಕೂಡಲೇ ಸಂತ್ರಸ್ತೆ ತಕ್ಷಣ ಬಾಗಿಲು ತೆರೆದಾಗ ಆರೋಪಿ ಅಲ್ಲಿಂದ ಪರಾರಿ ಆಗಿದ್ದಾನೆ. ಮತ್ತೆ ಮಹಿಳಾ ಅಧಿಕಾರಿಯ ಮನೆಗೆ ಸೆ. 26ರಂದು ತೆರಳಿದ ಕಾನ್ಸ್​ಟೇಬಲ್​ 5 ಲಕ್ಷ ರೂಪಾಯಿ ಹಣಕ್ಕೆ ಬೇಡಿಕೆ ಇಟ್ಟಿದ್ದಾನೆ. ಕೊಡದೇ ಇದ್ದರೆ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ.
ಇದಾದ ಬಳಿಕ ಮಹಿಳಾ ಅಧಿಕಾರಿ ಹಿರಿಯ ಅಧಿಕಾರಿಗಳ ಬಳಿ ಅಳಲು ತೋಡಿಕೊಂಡಿದ್ದಾರೆ. ತಕ್ಷಣ ಭೋಪಾಲ್​ ಅಪರಾಧ ವಿಭಾಗ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಬೆನ್ನಲ್ಲೇ ಆರೋಪಿಯನ್ನು ಬಂಧಿಸಿ ವಿಚಾರಣೆ ಕೈಗೊಂಡಿದ್ದಾರೆ.(ಏಜೆನ್ಸೀಸ್​)
ಬರ್ತಡೇ ಪಾರ್ಟಿಗೆ ಆಹ್ವಾನ: ನಂಬಿ ಹೋದ ಮಹಿಳಾ ಪೇದೆಯ​ ಮೇಲೆ ಮೂವರು ಕಾಮುಕರಿಂದ ಗ್ಯಾಂಗ್​ರೇಪ್

ಅತ್ಯಾಚಾರ ಸಂತ್ರಸ್ತೆಯ ಜೀವ ಉಳಿಸಿದ ನಟಿ ಜ್ಯೋತಿಕಾ ಸಿನಿಮಾ: ಸಂಬಂಧಿಯ ಕರಾಳ ಮುಖ ಬಿಚ್ಚಿಟ್ಟ ಬಾಲಕಿ

ಮದುವೆಯಾದ ಒಂದೇ ತಿಂಗಳಲ್ಲಿ ಸಾಫ್ಟ್​ವೇರ್​ ಗಂಡನ ಕ್ರೂರತ್ವ: ಭರವಸೆಯ ಬದುಕು ದುರಂತದಲ್ಲಿ ಅಂತ್ಯ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty + 10 =
Remember me
