ನವದೆಹಲಿ:ಈ ತಿಂಗಳ ಆರಂಭದಲ್ಲಿ ನಡೆದ ಉತ್ತರ ಪ್ರದೇಶದ ಲಖಿಂಪುರ್​ ಖೇರಿ ಘಟನೆಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್​ ಮತ್ತೆ ಯುಪಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದು, ನಿಮ್ಮ ಕಾಲುಗಳನ್ನು ನೀವೆ ಎಳೆದುಕೊಳ್ಳುತ್ತಿರುವ ಭಾವನೆಗಳನ್ನು ಹೊರಗಾಕಿ ಎಂದು ತಾಕೀತು ಮಾಡಿದೆ.
ಎಲ್ಲ ಸಾಕ್ಷಿಗಳ ಹೇಳಿಕೆಯನ್ನು ದಾಖಲಿಸಿ, ಅವುಗಳನ್ನು ರಕ್ಷಿಸಲು ಯುಪಿ ಸರ್ಕಾರಕ್ಕೆ ಕೋರ್ಟ್​ ಆದೇಶಿಸಿದ್ದು, ರೈತರ ಮೇಲಿನ ದೌರ್ಜನ್ಯ ಪ್ರಕರಣವು ಎಂದೂ ಮುಗಿಯದ ಕತೆಯಾಗಬಾರದು ಎಂದು ಸಲಹೆ ನೀಡಿದೆ.
ಕಳೆದ ಭಾನುವಾರ (ಅ.3) ಲಖಿಂಪುರ್​ ಖೇರಿಯಲ್ಲಿ ಪ್ರತಿಭಟನಾ ನಿರತ ರೈತರ ಮೇಲೆ ಕೇಂದ್ರ ಸಚಿವ ಅಜಯ್​ ಮಿಶ್ರಾ ಪುತ್ರ ಆಶಿಶ್​ ಮಿಶ್ರಾ, ಕಾರು ಹರಿಸಿ, ನಾಲ್ವರು ರೈತರನ್ನು ಬಲಿಪಡೆದಿರುವ ಆರೋಪ ಕೇಳಿಬಂದಿದ್ದು, ಉತ್ತರ ಪ್ರದೇಶದ ಪೊಲೀಸರಿಂದ ಅ.11ರಂದು ಬಂಧನಕ್ಕೂ ಒಳಗಾಗಿದ್ದಾರೆ.
ಈ ಪ್ರಕರಣದಲ್ಲಿ ಇದುವರೆಗೂ ಎಷ್ಟು ಮಂದಿಯನ್ನು ಬಂಧಿಸಿದ್ದೀರಿ ಪಟ್ಟಿ ಕೊಡಿ ಎಂದು ಸುಪ್ರೀಂಕೋರ್ಟ್​ ಈ ಹಿಂದೆ ಕೇಳಿತ್ತು. ಅದರಂತೆ ಯುಪಿ ಸರ್ಕಾರ ಇಂದು ಸಲ್ಲಿಸಿರುವ ವರದಿ ನೋಡಿ ಕೋರ್ಟ್​ ಅಸಮಾಧಾನ ಹೊರಹಾಕಿದೆ. ಸರಿಯಾದ ಸಮಯದಲ್ಲಿ ವರದಿ ಸಿಗುತ್ತದೆ ಎಂದು ಭಾವಿಸಿದ್ದೆವು. ನಿನ್ನೆ ತಡರಾತ್ರಿ 1 ಗಂಟೆಯವರೆಗೂ ಕಾದಿದ್ದೆವು ಎಂದು ಯುಪಿ ಸರ್ಕಾರದ ಪರ ವಕೀಲ ಹರೀಶ್​ ಸಾಳ್ವೆ ಮುಂದೆ ನ್ಯಾಯಮೂರ್ತಿ ಎನ್​.ವಿ. ರಮಣ ಬೇಸರ ವ್ಯಕ್ತಪಡಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯೆ ನೀಡಿದ ಹರೀಶ್​ ಸಾಳ್ವೆ, ನಿನ್ನೆಯೇ ವರದಿಯನ್ನು ಸಲ್ಲಿಸಿದೆವು ಎಂದರು. ಇದಕ್ಕೆ ಉತ್ತರಿಸಿದ ನ್ಯಾಯಮೂರ್ತಿಗಳು ಕೊನೆಯ ಸಮಯದಲ್ಲಿ ವರದಿ ಸಲ್ಲಿಸಿದರೆ ಅದನ್ನು ಓದುವುದಾದರೂ ಹೇಗೆ? ಕೊನೆಯ ಪಕ್ಷ ಒಂದು ದಿನದ ಮುಂಚೆಯಾದರೂ ವರದಿಯನ್ನು ಸಲ್ಲಿಸಬೇಕಾಗಿತ್ತು ಎಂದು ಕೇಳಿದ ನ್ಯಾಯಾಲಯ, ಹೆಚ್ಚಿನ ಪ್ರತ್ಯಕ್ಷದರ್ಶಿಗಳನ್ನು ಸರ್ಕಾರ ಯಾಕೆ ವಿಚಾರಣೆ ಮಾಡಿಲ್ಲ. ಒಟ್ಟು 44 ಪ್ರತ್ಯಕ್ಷದರ್ಶಿಗಳಲ್ಲಿ ಈವರೆಗೆ 4 ಮಂದಿಯನ್ನು ಮಾತ್ರ ವಿಚಾರಣೆ ಮಾಡಿದ್ದೀರಿ. ಉಳಿದವರನ್ನೇಕೆ ವಿಚಾರಣೆ ಮಾಡಲಿಲ್ಲ ಎಂದು ನ್ಯಾಯಮೂರ್ತಿ ಎನ್​.ವಿ. ರಮಣ ಅವರು ಪ್ರಶ್ನಿಸಿದರು.
ಎಷ್ಟು ಜನರನ್ನು ಬಂಧಿಸಿದ್ದೀರಿ ಎಂದು ನ್ಯಾಯಾಲಯ ಕೇಳಿದ ಪ್ರಶ್ನೆಗೆ, ಎರಡು ಪ್ರಕರಣದ ಆಧಾರದ ಮೇಲೆ ಆರೋಪಿಗಳನ್ನು ಬಂಧಿಸಲಾಗಿದೆ. ಮೊದಲನೆಯದು ರೈತರ ಮೇಲೆ ಕಾರು ಹರಿಸಿದ್ದು ಮತ್ತು ಎರಡನೆಯದು ಕಾರಿನೊಳಗಿದ್ದವರ ಮೇಲೆ ಗುಂಪು ಹಲ್ಲೆ ನಡೆಸಿದ್ದು, ಇದರಲ್ಲಿ ಮೊದಲನೇ ಪ್ರಕರಣಕ್ಕೆ ಸಂಬಂಧಿಸಿದಂತೆ 10 ಮಂದಿಯನ್ನು ಬಂಧಿಸಿದ್ದೇವೆ ಎಂದು ಯುಪಿ ಸರ್ಕಾರದ ಪರ ವಕೀಲರು ಕೋರ್ಟ್​ ತಿಳಿಸಿದರು.
ಸಾಕ್ಷಿಗಳಿಗೆ ರಕ್ಷಣ ಕೊಡುವಂತೆ ಆದೇಶಿಸಿದ ನ್ಯಾಯಾಲಯ, ಇನ್ನಷ್ಟು ಮಂದಿಯನ್ನು ವಿಚಾರಣೆ ನಡೆಸುವಂತೆ ಸೂಚನೆ ನೀಡಿತು. ಪೊಲೀಸರು ವಿಚಾರಣೆ ನಡೆಸದೇ ಹೊರತು ಈ ಪ್ರಕರಣದ ಮೇಲೆ ಹೆಚ್ಚು ಹೇಳಲಾಗದು ಎಂದಿದೆ.(ಏಜೆನ್ಸೀಸ್​)
ಪ್ರೇಯಸಿ ಹೆಸರಲ್ಲಿ ಕೊಡಗು ಎಸ್​ಪಿಗೆ ಪತ್ರ ಬರೆದು ಮಧ್ಯಪ್ರದೇಶದಲ್ಲಿ ಪೊನ್ನಂಪೇಟೆ ಮೂಲದ ಯುವಕ ಆತ್ಮಹತ್ಯೆ!

Lakhimpur Kheri Case: ಜನತೆಗೆ ನೀವು ಕಳುಹಿಸುತ್ತಿರುವ ಸಂದೇಶವೇನು? ಯುಪಿ ಸರ್ಕಾರದ ಕ್ರಮಕ್ಕೆ ಸುಪ್ರೀಂಕೋರ್ಟ್​ ಕಿಡಿ

Lakhimpur Kheri Case: ಎಷ್ಟು ಜನರನ್ನು ಬಂಧಿಸಿದ್ದೀರಿ ನಾಳೆ ವರದಿ ಕೊಡಿ, ಯುಪಿ ಸರ್ಕಾರಕ್ಕೆ ಸುಪ್ರೀಂ ತಾಕೀತು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:10 − five =
Remember me
