ನವದೆಹಲಿ:ದೀಪಾವಳಿ ಹಿನ್ನೆಲೆಯಲ್ಲಿ ಲಡಾಖ್​ನ​ ಕಾರ್ಗಿಲ್​ಗೆ ಭೇಟಿ ನೀಡಿರುವ ಪ್ರಧಾನಿ ಮೋದಿ, ಯೋಧರನ್ನು ಉದ್ದೇಶಿಸಿ, ನಿಮ್ಮೊಂದಿಗೆ ಇರದೇ ನಾನು ಉತ್ತಮ ದೀಪಾವಳಿಯನ್ನು ಆಚರಿಸಲು ಸಾಧ್ಯವಿಲ್ಲ ಎಂದು ಹೇಳಿದರು.
2014ರಲ್ಲಿ ಅಧಿಕಾರಕ್ಕೆ ಬಂದಾಗಿನಿಂದ ಪ್ರಧಾನಿ ಮೋದಿ ಅವರು ವಿವಿಧ ಮಿಲಿಟರಿ ಬೇಸ್​ನಲ್ಲಿ ಪ್ರತಿವರ್ಷ ದೀಪಾವಳಿಯನ್ನು ಆಚರಿಸುತ್ತಿದ್ದಾರೆ. ಈ ವರ್ಷ ಅವರು ಕಾರ್ಗಿಲ್​ಗೆ ಭೇಟಿ ನೀಡಿದ್ದಾರೆ. ಈ ವೇಳೆ ಯೋಧರಿಗೆ ಸಿಹಿ ಹಂಚಿ, ಅವರನ್ನು ಉದ್ದೇಶಿಸಿ ಪ್ರಧಾನಿ ಮೋದಿ ಮಾತನಾಡಿದರು.
ನನ್ನ ಪಾಲಿಗೆ ನೀವೆಲ್ಲರೂ ನನ್ನ ಕುಟುಂಬವಾಗಿದ್ದೀರಿ. ನಿಮ್ಮೆಲ್ಲರ ನಡುವೆ ದೀಪಾವಳಿಯನ್ನು ಆಚರಿಸುವುದು ಒಂದು ಭಾಗ್ಯವೇ ಸರಿ. ಕಾರ್ಗಿಲ್​ನ ಈ ವಿಜಯದ ಭೂಮಿಯಲ್ಲಿ ನಿಂತು ದೇಶದ ಹಾಗೂ ವಿಶ್ವದ ಜನರಿಗೆ ದೀಪಾವಳಿ ಶುಭ ಕೋರುತ್ತೇನೆ. ಕಾರ್ಗಿಲ್ ವಿಜಯ ಪತಾಕೆ ಹಾರಿಸದ ಪಾಕಿಸ್ತಾನದೊಂದಿಗೆ ಒಂದೇ ಒಂದು ಯುದ್ಧ ನಡೆದಿಲ್ಲ. ದೀಪಾವಳಿ ಅಂದರೆ ಭಯೋತ್ಪಾದನೆಯ ಅಂತ್ಯದ ಹಬ್ಬ ಮತ್ತು ಕಾರ್ಗಿಲ್ ಅದನ್ನು ಸಾಧ್ಯವಾಗಿಸಿತು ಎಂದು ಹೇಳಿದರು.
ಕಾರ್ಗಿಲ್‌ನಲ್ಲಿ ನಮ್ಮ ಸೇನೆಯು ಭಯೋತ್ಪಾದನೆಯ ಚಿಲುಮೆಯನ್ನು ಹತ್ತಿಕ್ಕಿದೆ. ಇಲ್ಲಿಯವರೆಗೆ, ದೇಶವು ಆಚರಿಸಿದ ವಿಜಯದ ದೀಪಾವಳಿಯನ್ನು ನೆನಪಿಸಿಕೊಳ್ಳಿ. ಏಕೆಂದರೆ, ನಮ್ಮ ಸೇನಾ ಪಡೆಗಳು ಗಡಿಯಲ್ಲಿ ನಿಂತು ನಮ್ಮನ್ನು ರಕ್ಷಣೆ ಮಾಡುತ್ತಿವೆ. ದೇಶದ ಪ್ರತಿ ನಾಗರಿಕನು ನೆಮ್ಮದಿಯಿಂದ ಮಲಗಲು ನಮ್ಮ ಯೋಧರು ಕಾರಣ. ನಿಮ್ಮ ತ್ಯಾಗ ಯಾವಗಲೂ ನಮ್ಮ ದೇಶವನ್ನು ಹೆಮ್ಮೆ ಪಡುವಂತೆ ಮಾಡಿದೆ ಎಂದರು.
ಯೂಕ್ರೇನ್​ ಮತ್ತು ರಷ್ಯಾ ಯುದ್ಧದ ಸಂದರ್ಭದಲ್ಲಿ ನಮ್ಮ ರಾಷ್ಟ್ರ ಧ್ವಜ ನಮ್ಮ ನಾಗರಿಕರಿಗೆ ರಕ್ಷಾ ಕವಚ ಆಗಿದ್ದನ್ನು ನಾವು ನೋಡಿದ್ದೇವೆ. ವಿಶ್ವದಾದ್ಯಂತ ಭಾರತದ ಮೇಲಿನ ಗೌರವ ಹೆಚ್ಚಾಗಿದೆ. ದೇಶದ ಒಳಗೆ ಮತ್ತು ಹೊರಗಿರುವ ಶತ್ರುಗಳ ವಿರುದ್ಧ ಭಾರತ ಯಶಸ್ವಿಯಾಗಿ ನಿಂತಿದ್ದಕ್ಕೆ ಇದೆಲ್ಲ ಸಾಧ್ಯವಾಯಿತು ಎಂದು ಹೇಳಿದರು.
ನೀವೆಲ್ಲರೂ ಗಡಿಯಲ್ಲಿ ನಮ್ಮನ್ನು ರಕ್ಷಿಸುತ್ತಿರುವಂತೆಯೇ ನಾವು ದೇಶದೊಳಗೆ ಭಯೋತ್ಪಾದನೆ, ನಕ್ಸಲ್​, ಭ್ರಷ್ಟಾಚಾರದಂತಹ ದುಷ್ಟರ ವಿರುದ್ಧ ಹೋರಾಡಲು ಕೆಲಸ ಮಾಡುತ್ತಿದ್ದೇವೆ. ನಕ್ಸಲರು ರಾಷ್ಟ್ರದ ಬಹುದೊಡ್ಡ ಭಾಗವನ್ನು ತನ್ನ ಹಿಡಿತಕ್ಕೆ ತೆಗೆದುಕೊಂಡಿತ್ತು ಆದರೆ, ಇಂದು ಅದು ವೇಗವಾಗಿ ಕಡಿಮೆಯಾಗುತ್ತಿದೆ ಎಂದು ತಿಳಿಸಿದರು.
ಈ ದೇಶದ ಸೈನಿಕರು ತಮ್ಮ ಜವಾಬ್ದಾರಿಯನ್ನು ಅರಿತುಕೊಳ್ಳಲು ಅನುಕೂಲವಾಗುವಂತೆ ಗಡಿ ಪ್ರದೇಶಗಳಲ್ಲಿ ತಡೆರಹಿತ ಸಂಪರ್ಕದೊಂದಿಗೆ ಹೈಟೆಕ್ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸುತ್ತಿದ್ದೇವೆ. ಮಹಿಳಾ ಅಧಿಕಾರಿಗಳ ಸೇರ್ಪಡೆ ನಮ್ಮ ಶಕ್ತಿಯ ಬೆಳವಣಿಗೆಗೆ ಕಾರಣವಾಗುತ್ತದೆ ಎಂದು ಕಾರ್ಗಿಲ್​ನಲ್ಲಿ ಪ್ರಧಾನಿ ಹೇಳಿದರು.(ಏಜೆನ್ಸೀಸ್​)
A spirited Diwali in Kargil!pic.twitter.com/qtIGesk98x
— Narendra Modi (@narendramodi)October 24, 2022

ರಂಗೋಲಿಯಲ್ಲಿ ಮೂಡಿದ ಕಾಂತಾರ; ಕಲಾವಿದೆಯ ಕೈಚಳಕಕ್ಕೆ ಮೆಚ್ಚುಗೆ…

ಬ್ರಿಟನ್​ ಪ್ರಧಾನಿ ರೇಸ್​ನಿಂದ ಹಿಂದೆ ಸರಿದ ಬೋರಿಸ್​ ಜಾನ್ಸನ್​: ರಿಷಿಗೆ ಪ್ರಧಾನಿ ಪಟ್ಟ ಒಲಿಯುವ ಸಾಧ್ಯತೆ

ನನ್ನ ಅದೃಷ್ಟ ಚೆನ್ನಾಗಿರಲಿಲ್ಲ… ಹೀಗಾಗಿ ನನಗೆ ಮುಖ್ಯಮಂತ್ರಿ ಆಗುವ ಅವಕಾಶ ತಪ್ಪಿತು; ಜಿ. ಪರಮೇಶ್ವರ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 + four =
Remember me
