ಶ್ರೀಕಾಕುಳಂ:ಓರ್ವ ಸಬ್​ ಇನ್ಸ್​ಪೆಕ್ಟರ್​ ಸೇರಿದಂತೆ ನಾಲ್ವರು ಸಶಸ್ತ್ರ ಮೀಸಲು ಪೊಲೀಸ್ ಸಿಬ್ಬಂದಿ ರಸ್ತೆ ಅಪಘಾತದಲ್ಲಿ ಮೃತಪಟ್ಟಿರುವ ದಾರುಣ ಘಟನೆ ಆಂಧ್ರ ಪ್ರದೇಶದ ಶ್ರೀಕಾಕುಳಂ ಜಿಲ್ಲೆಯ ಪಲಸಾ ಬಳಿಯಿರುವ ಹೆದ್ದಾರಿ-16ರಲ್ಲಿ ಸೋಮವಾರ ನಡೆದಿದೆ.
ಪೊಲೀಸ್​ ಜೀಪ್​ ತಿರುವು ತೆಗೆದುಕೊಳ್ಳುವ ವೇಳೆ ಲಾರಿಯೊಂದು ಡಿಕ್ಕಿ ಹೊಡೆದು ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತರನ್ನು ಜೆ. ಕೃಷ್ಣುಡು (ಎಆರ್​-ಎಸ್​ಐ) (58), ವೈ ಬಾಬು ರಾವ್​ (53), ಟಿ. ಆಂಟೋನಿ (50) (ಹೆಡ್​ ಕಾನ್ಸ್​ಟೇಬಲ್​ಗಳು​) ಮತ್ತು ಪಿ. ಜನಾರ್ಧನ ರಾವ್​ (ಕಾನ್ಸ್​ಟೇಬಲ್​-ಚಾಲಕ) (47) ಎಂದು ಗುರುತಿಸಲಾಗಿದೆ.
ಘಟನೆ ಬಗ್ಗೆ ಪೊಲೀಸ್​ ಮಹಾನಿರ್ದೇಶಕ ಡಿ. ಗೌತಮ್​ ಸಾವಂಗ್​ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಹುತಾತ್ಮ ಯೋಧನ ಪಾರ್ಥೀವ ಶರೀರವನ್ನು ಭೈರಿ ಸಾರಂಗಪುರಂನಲ್ಲಿರುವ ಅವರ ಕುಟುಂಬಕ್ಕೆ ಹಸ್ತಾಂತರಿಸಿ ಶ್ರೀಕಾಕುಳಂಗೆ ಹಿಂತಿರುಗುವಾಗ ನಾಲ್ವರು ಕಾರು ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಅಪಘಾತದ ಬಗ್ಗೆ ಸಂಪೂರ್ಣ ತನಿಖೆ ನಡೆಸಿ ಆದಷ್ಟು ಬೇಗ ವರದಿ ಸಲ್ಲಿಸುವಂತೆ ಡೆಪ್ಯುಟಿ ಇನ್ಸ್​ಪೆಕ್ಟರ್​ ಜನರಲ್​ ಮತ್ತು ಶ್ರೀಕಾಕುಳಂ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿಗೆ ಡಿಜಿಪಿ ಸೂಚನೆ ನೀಡಿದ್ದಾರೆ.
ನಾಲ್ವರು ಸಿಬ್ಬಂದಿಯನ್ನು ಕಳೆದುಕೊಂಡಿರುವುದು ಪೊಲೀಸ್​ ಇಲಾಖೆಗೆ ನಷ್ಟವಾಗಿದೆ ಎಂದು ಡಿಜಿಪಿ ಸಾವಂಗ್​ ಹೇಳಿದ್ದಾರೆ. ಮೃತರ ಕುಟುಂಬದ ನೆರವಿಗೆ ಇಲಾಖೆ ನಿಲ್ಲಲಿದೆ ಎಂದು ಅಭಯ ನೀಡಿದ್ದು, ಆಂಧ್ರ ಸಿಎಂ ವೈ.ಎಸ್​. ಜಗನ್​ ಮೋಹನ್​ ರೆಡ್ಡಿ ಸಹ ಮೃತರ ಆತ್ಮಕ್ಕೆ ಶಾಂತಿ ಕೋರಿದ್ದು, ಅವರ ಕುಟುಂಬಗಳಿಗೆ ಸಾಂತ್ವಾನ ಹೇಳಿದ್ದಾರೆ.(ಏಜೆನ್ಸೀಸ್​)
ಮಾದಕ ಜಾಲದಲ್ಲಿ ಸ್ಯಾಂಡಲ್​ವುಡ್​ ನಂಟು ಪ್ರಕರಣ: ನಟಿ ರಾಗಿಣಿ, ಸಂಜನಾ ಸೇರಿ ಹಲವರ ಡ್ರಗ್ಸ್ ಸೇವನೆ ಖಚಿತ

ಸ್ಥಳೀಯ ಹೋರಾಟಗಾರರ ಗುಂಡೇಟಿಗೆ ತಾಲಿಬಾನ್​ ಜಿಲ್ಲಾ ಮುಖ್ಯಸ್ಥ ಸೇರಿ 50 ಉಗ್ರರು ಫಿನಿಶ್​..!

ಮಕ್ಕಳಿಗೆ ಮೂರನೇ ಅಲೆ ಅಪಾಯ ಆತಂಕ; ಎನ್​ಐಡಿಎಂ ವರದಿ, ಎಚ್ಚರಿಕೆ ಅಕ್ಟೋಬರ್​ನಲ್ಲಿ ಉತ್ತುಂಗದ ಸಾಧ್ಯತೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen − one =
Remember me
