ಹೈದರಾಬಾದ್​:ಇತ್ತೀಚೆಗೆ ಉತ್ತರ ಪ್ರದೇಶದ ಮತದಾರರಿಗೆ ಬೆದರಿಕೆ ಹಾಕಿದ ತೆಲಂಗಾಣದ ಬಿಜೆಪಿ ಶಾಸಕ ರಾಜಾ ಸಿಂಗ್​ ವಿರುದ್ಧ ಹೈದರಾಬಾದ್​ನ ಮಂಗಲಹತ್​ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಭಾರತದ ಚುನಾವಣಾ ಆಯೋಗ ನೀಡಿದ ನಿರ್ದೇಶದನದಂತೆ ರಾಜಾ ಸಿಂಗ್​ ವಿರುದ್ಧ ಪ್ರಕರಣವನ್ನು ದಾಖಲಿಸಲಾಗಿದೆ.
ಹೈದರಾಬಾದ್​ನ ಗೋಶಮಹಲ್​ ಕ್ಷೇತ್ರದ ಬಿಜೆಪಿ ಶಾಸಕರಾಗಿರುವ ರಾಜಾ ಸಿಂಗ್​ ಇತ್ತೀಚೆಗೆ ಉತ್ತರ ಪ್ರದೇಶದಲ್ಲಿ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ವಿವಾದಾತ್ಮ ಹೇಳಿಕೆ ನೀಡಿದ್ದರು.
ಮುಂದಿನ ಬಾರಿಯು ಉತ್ತರ ಪ್ರದೇಶದಲ್ಲಿ ಬಿಜೆಪಿ ಪಕ್ಷವೇ ಅಧಿಕಾರಕ್ಕೆ ಬರಲಿದೆ. ಬಿಜೆಪಿಗೆ ಮತ ಹಾಕದವರ ಮನೆಗಳನ್ನು ಯೋಗಿ ನೇತೃತ್ವದ ಸರ್ಕಾರ ಜೆಸಿಬಿಯಿಂದ ನೆಲಸಮ ಮಾಡಲಿದೆ ಎಂದು ಹೇಳಿದ್ದರು. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿತ್ತು.
ರಾಜಾ ಸಿಂಗ್​ ಹೇಳಿಕೆಯನ್ನು ಗಮನಿಸಿದ ಚುನಾವಣಾ ಆಯೋಗ ತಕ್ಷಣ ಶಾಸಕರಿಗೆ ನೋಟಿಸ್​ ನೀಡಿ, ಉತ್ತರ ನೀಡುವಂತೆ ಕೇಳಿತ್ತು. ಇದಾದ ಬೆನ್ನಲ್ಲೇ ಶನಿವಾರ ಪ್ರಕರಣ ದಾಖಲಿಸುವಂತೆ ಹೈದರಾಬಾದ್​ ಪೊಲೀಸರಿಗೆ ನಿರ್ದೇಶನ ನೀಡಿತು. ಅದರಂತೆಯೇ ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್​ಗಳ ಅಡಿಯಲ್ಲಿ ರಾಜಾ ಸಿಂಗ್​ ವಿರುದ್ಧ ಪ್ರಕರಣ ದಾಖಲಾಗಿದೆ.(ಏಜೆನ್ಸೀಸ್​)
ಮನೆಗೆ ನುಗ್ಗಿದ ಚಿರತೆ ಮತ್ತು ಬಾಲಕಿ ಒಂದೇ ಕೋಣೆಯಲ್ಲಿ ಲಾಕ್​! ಮುಂದೇನಾಯ್ತು? ಇಲ್ಲಿದೆ ರೋಚಕ ಸ್ಟೋರಿ

ಮಧ್ಯರಾತ್ರಿ ಟ್ರಕ್​ ನಿಲ್ಲಿಸಿ ಕೆಳಗಿಳಿದ ಚಾಲಕ: ನಂತರ ನಡೆದ ಭಯಾನಕ ಘಟನೆ ಸಿಸಿಟಿವಿಯಲ್ಲಿ ಸೆರೆ

‘ನೀನು ಹೆಚ್ಚು ದಿನ ಬದುಕಲ್ಲ…’ ಹೈಕೋರ್ಟ್‌ ಆದೇಶ ಪಾಲಿಸಿ ಎಂದ ಪ್ರಾಂಶುಪಾಲರಿಗೆ ಜೀವ ಬೆದರಿಕೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen − six =
Remember me
