ಚೆನ್ನೈ:ಆಸ್ಪತ್ರೆಯಿಂದ ಕಣ್ಮರೆಯಾದ ರೋಗಿಯೊಬ್ಬರ ನಾಪತ್ತೆ ಪ್ರಕರವೂ ನಿಗೂಢ ಕೊಲೆ ಪ್ರಕರಣದ ತಿರುವು ಪಡೆದುಕೊಂಡ ಘಟನೆ ಚೆನ್ನೈನ ರಾಜೀವ್​ ಗಾಂಧಿ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ. ಕಳೆದ ಮೇ ತಿಂಗಳಿನಲ್ಲಿ ಸುಮಿತಾ (41) ಎಂಬಾಕೆ ಆಸ್ಪತ್ರೆಗೆ ದಾಖಲಾಗಿ, ಕಾಣೆಯಾಗಿದ್ದರು.
ಪೊಲೀಸರಿಗೆ ಸುಮಿತಾ ಪತಿ ಮೌಲಿ ಮೇ 31ರಂದು ನೀಡಿರುವ ದೂರಿನ ಪ್ರಕಾರ ಮೇ 23ರಂದು ಸುಮಿತಾ ಆಸ್ಪತ್ರೆಯಿಂದ ನಾಪತ್ತೆಯಾದರು. ತೀವ್ರ ಶೋಧದ ನಡುವೆಯೂ ಆಕೆಯ ಸುಳಿವು ಮಾತ್ರ ಪತ್ತೆಯಾಗಲೇ ಇಲ್ಲ ಎಂದು ಆಕೆಯ ಪತಿ ಹೇಳಿಕೊಂಡಿದ್ದಾರೆ.
ಇದರ ನಡುವೆ ಜೂನ್​ 8ರಂದು ಆಸ್ಪತ್ರೆಯ ಸಿಬ್ಬಂದಿಗೆ ಕೊಳೆತ ಸ್ಥಿತಿಯಲ್ಲಿರುವ ಮೃತದೇಹವೊಂದು 3ನೇ ಟವರ್​ನ 8ನೇ ಮಹಡಿಯಲ್ಲಿ ಪತ್ತೆಯಾಗುತ್ತದೆ. ಬಳಿಕ ದೇಹವನ್ನು ಶವಗಾರಕ್ಕೆ ಸಾಗಿಸಲಾಗುತ್ತದೆ. ಮೃತದೇಹವೂ ನಾಪತ್ತೆಯಾಗಿದ್ದ ಮಹಿಳೆಯದ್ದೇ ಇರಬೇಕೆಂದು ಸಂಶಯ ವ್ಯಕ್ತಪಡಿಸಲಾಗುತ್ತದೆ. ನಂತರ ನಾಪತ್ತೆಯಾಗಿದ್ದ ಮಹಿಳೆಯ ಪತಿ ಮೌಲಿಗೆ ಮೃತದೇಹ ಗುರುತು ಪತ್ತೆಹಚ್ಚುವಂತೆ ಹೇಳಲಾಗುತ್ತದೆ. ಬಟ್ಟೆಯನ್ನು ನೋಡಿ ಕೊಳೆತ ಸ್ಥಿತಿಯಲ್ಲಿದ್ದ ಮೃತದೇಹ ತನ್ನ ಪತ್ನಿಯದ್ದೇ ಎಂದು ಗುರುತು ಹಿಡಿಯುತ್ತಾನೆ.
ನಾಪತ್ತೆಯಿಂದ ಕೊಲೆ ಪ್ರಕರಣತನಿಖೆ ಕೈಗೆತ್ತಿಕೊಂಡ ಪೊಲೀಸರು ಆಸ್ಪತ್ರೆಯ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸುತ್ತಾರೆ. ಮೇ 23ರಂದು ಏನು ನಡೆಯಿತು ಎಂದು ವಿವಿಧ ಆಯಾಮಗಳಲ್ಲಿ ಪರಿಶೀಲಿಸಿದ ಬಳಿಕ, ಪ್ರಕರಣಕ್ಕೆ ಸಂಬಂಧಿಸಿದಂತೆ ಗುತ್ತಿಗೆ ಕೆಲಸಗಾರ್ತಿ ರಾಧಿದೇವಿ ಎಂಬಾಕೆಯನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತದೆ.
ರಾಧಿದೇವಿಗೆ ಹಣದ ಅವಶ್ಯಕತೆ ಇರುತ್ತದೆ. ಈ ವೇಳೆ ಸಣ್ಣ ಚೀಲದಲ್ಲಿ ಸ್ವಲ್ಪ ಹಣವನ್ನು ಸಾಗಿಸುತ್ತಿದ್ದ ಸುಮಿತಾ ಕಣ್ಣಿಗೆ ಬಿದ್ದಿದ್ದಾಳೆ. ಇತ್ತೆ ಸುಮಿತಾ ಅವರ ಆರೋಗ್ಯವು ಕ್ಷೀಣಿಸುತ್ತಿದೆ ಮತ್ತು ಅವಳನ್ನು ನೋಡಿಕೊಳ್ಳಲು ಯಾರ ಇರಲಿಲ್ಲ ಎಂಬವು ಆಕೆಗೆ ತಿಳಿದಿತ್ತು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಆಸ್ಪತ್ರೆಯಲ್ಲಿ ಮೂರು ವರ್ಷಗಳಿಂದ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದ ರಾಧಿದೇವಿ ಸುಮಿತಾಳ ಬಳಿ ಸುಲಿಗೆ ಮಾಡಲು ಸಂಚು ರೂಪಿಸುತ್ತಾಳೆ.
ಮೇ 22-23ರ ಮಧ್ಯರಾತ್ರಿ 12.30ರ ಸುಮಾರಿಗೆ ಸುಮಿತಾ ಬೆಡ್​ ಬಳಿ ಹೋಗುವ ರಾಧಿದೇವಿ, ಸ್ಕ್ಯಾನ್​ ಮಾಡಿಸಬೇಕೆಂದು ಸುಳ್ಳು ಹೇಳಿ ಕರೆದೊಯ್ಯುತ್ತಾಳೆ. ವಾರ್ಡ್​ನಿಂದ ವ್ಹೀಲ್​ಚೇರ್​ ಮೂಲಕ ಲಿಫ್ಟ್​ ಬಳಿ ಕರೆದೊಯ್ಯುತ್ತಾಳೆ. ಬಳಿಕ ಆಕೆಯ ಸೆಲ್​ಫೋನ್​ ಮತ್ತು ಹಣವನ್ನು ಸುಲಿಗೆ ಮಾಡಿದ ನಂತರ 8ನೇ ಮಹಡಿಗೆ ಬಲವಂತವಾಗಿ ಎಳದೊಯ್ದು ಹಗ್ಗದಿಂದ ಉಸಿರುಗಟ್ಟಿಸಿ ಕೊಲೆ ಮಾಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.(ಏಜೆನ್ಸೀಸ್​)
ಅಕ್ರಮವಾಗಿ ಗಡಿ ದಾಟುತ್ತಿದ್ದ ಐವರು ಬಾಂಗ್ಲಾದೇಶೀಯರ ಬಂಧನ

ನಡೆದುಕೊಂಡು ಹೋಗುವಾಗ ಹಿಂದಿನಿಂದ ಬಂದ ಮಹಿಳೆ ಮಾಡಿದ ಕೆಲಸವೇನು ನೋಡಿ..

ಅಮ್ಮನನ್ನು ಕೊಂದು ಸಾವಿರ ಪೀಸ್​ ಮಾಡಿದ ಮಗ! ಹೆತ್ತವಳ ಮಾಂಸವನ್ನೇ ಫ್ರಿಡ್ಜ್​ನಲ್ಲಿಟ್ಟು ತಿನ್ನುತ್ತಿದ್ದ!

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:two × 5 =
Remember me
