ಕೊಚ್ಚಿ:ಕೇರಳದ ಪ್ರಖ್ಯಾತ ಯೂಟ್ಯೂಬರ್ ಶ್ರೀಕಾಂತ್​ ವೆಟ್ಟಿಯಾರ್​ ಎಂಬುವರ​ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಾಗಿದೆ. ಮದುವೆ ಆಗುವುದಾಗಿ ನಂಬಿಸಿ ಮಹಿಳೆಯೊಬ್ಬಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪ ಕೇಳಿಬಂದಿದೆ.
ಆರೋಪಿ ಶ್ರೀಕಾಂತ್​ ಹಿಟ್ ಚಲನಚಿತ್ರಗಳ ಸ್ಪೂಫ್ ವೀಡಿಯೊಗಳನ್ನು ಮಾಡುತ್ತಿದ್ದ. ಆತನ ಫ್ಯಾನ್​ ಎಂದು ಹೇಳಿಕೊಂಡಿರುವ ಮಹಿಳೆಯೊಬ್ಬಳು, ರಾಜಕೀಯ ಬದ್ಧತೆ ಮತ್ತು ಮಹಿಳಾ ಸಬಲೀಕರಣದ ವಿಷಯಗಳ ಮೇಲೆ ಶ್ರೀಕಾಂತ್​ ಅವರು ಮಾಡಿದ್ದ ವಿಡಿಯೋಗಳಿಂದ ತುಂಬಾ ಪ್ರಭಾವಿತಳಾಗಿದ್ದೆ ಎಂದಿದ್ದಾರೆ.
ಸಂತ್ರಸ್ತೆ ಮಹಿಳೆಗೆ ಮೊದಲೇ ಮದುವೆಯಾಗಿದ್ದು, 8 ವರ್ಷದ ಮಗ ಕೂಡ ಇದ್ದಾನೆ. ಕೊಚ್ಚಿಯಲ್ಲಿ ವಾಸವಿರುವಾಗ ಶ್ರೀಕಾಂತ್​ ಪರಿಚಯವಾಗಿತ್ತು. 2021ರ ಫೆಬ್ರವರಿಯಲ್ಲಿ ನನ್ನನ್ನು ಬರ್ತಡೇ ಪಾರ್ಟಿಗೆ ಆಹ್ವಾನಿಸಿದ್ದ. ಇದಾದ ಬಳಿಕ ಮದುವೆಯಾಗುವ ಭರವಸೆ ನೆಪದಲ್ಲಿ ಎರ್ನಾಕುಲಂ ಮತ್ತು ಅಲುವಾದಲ್ಲಿರುವ ತನ್ನ ಫ್ಲ್ಯಾಟ್​ನಲ್ಲಿ ಅತ್ಯಾಚಾರ ಎಸಗಿದ್ದಾನೆ ಮತ್ತು ಕೊಚ್ಚಿಯ ಹೋಟೆಲ್​ ರೂಮ್​ ಒಂದರಲ್ಲೂ ನನ್ನ ಮೇಲೆ ದೌರ್ಜನ್ಯ ಎಸಗಿದ್ದಾನೆಂದು ಸಂತ್ರಸ್ತೆ ಆರೋಪಿಸಿದ್ದಾರೆ.
ಇದೀಗ ದೂರು ಹಿಂಪಡೆಯುವಂತೆ ತನ್ನ ಸ್ನೇಹಿತರನ್ನು ಹಿಂದೆ ಬಿಟ್ಟು ಶ್ರೀಕಾಂತ್​ ನನ್ನ ಮನವೊಲಿಸುತ್ತಿದ್ದಾನೆಂದು ಮಹಿಳೆ ಹೇಳಿದ್ದಾಳೆ. ಸದ್ಯ ಕೊಚ್ಚಿಯ ಠಾಣೆಯಲ್ಲಿ ಶ್ರೀಕಾಂತ್​ ವಿರುದ್ಧ ದೂರು ದಾಖಲಾಗಿದ್ದು, ತಲೆಮರೆಸಿಕೊಂಡಿರುವ ಶ್ರೀಕಾಂತ್​ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.(ಏಜೆನ್ಸೀಸ್​)
ಎಂಟು ಚಿತ್ರಗಳು ಬಿಡುಗಡೆಗೆ ಸಿದ್ಧ; ರಾಕುಲ್​ಗೆ 2022 ನಿರ್ಣಾಯಕ ವರ್ಷ

ಮದ್ವೆಗೆ ಬಟ್ಟೆ ಖರೀದಿಸಲು ಹೋಗಿದ್ದ ಸಹೋದರರಿಬ್ಬರಲ್ಲಿ ತಮ್ಮ ಶವವಾಗಿ ಪತ್ತೆ, ಅಣ್ಣ ನಾಪತ್ತೆ

ತಂದೆಯ ಚೀರಾಟ ಕೇಳಿ ಪುತ್ರ ಬಳಿಗೆ ಹೋದ; ಕೆಲವೇ ಕ್ಷಣಗಳಲ್ಲಿ ಸಾವಿಗೀಡಾದ್ರು ಅಪ್ಪ-ಮಗ..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen − five =
Remember me
