
ರಾಮನಟ್ಟುಕರ:ನಿಮ್ಮ ಮಕ್ಕಳೇನಾದರೂ ಚೈನೀಸ್​ ರಿಂಗ್​ ಹಾಕಿಕೊಂಡಿದ್ದರೆ, ತಪ್ಪದೇ ಈ ಸ್ಟೋರಿ ಓದಿ. ಬೆರಳಿನಲ್ಲಿ ಚೈನೀಸ್​ ರಿಂಗ್ ನಿಮ್ಮ ಮಕ್ಕಳ​ ಬೆರಳು ಕತ್ತರಿಸುವ ಹಂತಕ್ಕೂ ಹೋಗಬಹುದು. ಕೇರಳದಲ್ಲಿ ಆತಂಕಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಇಬ್ಬರು ಮಕ್ಕಳು ತಮ್ಮ ಪಾಲಕರೊಂದಿಗೆ ಮೀನಚಂಡ ಅಗ್ನಿಶಾಮಕ ಠಾಣೆಗೆ ದೌಡಾಯಿಸಿ ತಮ್ಮ ಕೈಬೆರಳಿನಲ್ಲಿದ್ದ ಚೈನೀಸ್​ ರಿಂಗ್​ ಅನ್ನು ತುಂಬಾ ಕಷ್ಟಪಟ್ಟು ತೆಗೆಸಿದ್ದಾರೆ. ಈ ರೀತಿಯ ಹಲವು ಘಟನೆಗಳು ಕೇರಳದಲ್ಲಿ ಬೆಳಕಿಗೆ ಬರುತ್ತಿದ್ದು, ಪಾಲಕರಲ್ಲಿ ಆತಂಕ ಹೆಚ್ಚಿಸಿದೆ.
ವಜಾಯುರ್​ ಮೂಲದ ಸುಧಾ ಎಂಬುವರ 6 ವರ್ಷದ ಮಗಳು ಹಿವಾನಿ ಮತ್ತು ಕೊಂಡೊಟ್ಟಿ ನಿವಾಸಿ ಮುಸ್ತಾಫಾ ಅವರ ಪುತ್ರ 14 ವರ್ಷದ ಮೊಹಮ್ಮದ್​ ಸನ್ಫಾನ್​ ಅವರ ಕೈಯಲ್ಲಿದ್ದ ಚೈನೀಸ್​ ಉಂಗುರವನ್ನು ಮೀಚಂಡ ಅಗ್ನಿಶಾಮಕ ಸಿಬ್ಬಂದಿ ತೆಗೆದಿದ್ದಾರೆ. ಸುಮಾರು ದಿನಗಳವರೆಗೆ ಚೈನೀಸ್​ ರಿಂಗ್​ ಧರಿಸಿರುವ ಮಕ್ಕಳ ಮೇಲೆ ಎಚ್ಚರಿಕೆ ವಹಿಸಿ ಎಂದು ಅಗ್ನಿಶಾಮಕ ಸಿಬ್ಬಂದಿ ತಿಳಿಸಿದ್ದಾರೆ.
ಚೈನೀಸ್​ ರಿಂಗ್​ ಅನ್ನು ಎಣ್ಣೆ ಅಥವಾ ಸೋಪು ನೀರಿನಲ್ಲಿ ಪ್ರಯತ್ನ ಮಾಡಿದರು ತೆಗೆಯಲು ಸಾಧ್ಯವಾಗುತ್ತಿಲ್ಲ. ಅಕ್ಕಸಾಲಿಗ ಮತ್ತು ಆಸ್ಪತ್ರೆಗಳಿಂದ ಚೈನೀಸ್​ ರಿಂಗ್​ಗಳನ್ನು ಕಳೆಯಲು ಸಾಧ್ಯವಾಗದಿದ್ದಾಗ ಕೊನೆಯ ಪ್ರಯತ್ನ ಎಂಬಂತೆ ಅನೇಕ ಪಾಲಕರು ತಮ್ಮ ಮಕ್ಕಳನ್ನು ಅಗ್ನಿಶಾಮಕ ಠಾಣೆಯತ್ತ ಕರೆತರುತ್ತಿದ್ದಾರೆ.
ರಿಂಗ್​ ಕೈಯಲ್ಲೇ ಇದ್ದರೆ, ಬೆರಳು ಊದಿಕೊಂಡು ರಕ್ಷಣೆ ಮಾಡುವುದು ಕಷ್ಟವಾಗುತ್ತದೆ. ಹೀಗಾಗಿ ಚೈನೀಸ್ ರಿಂಗ್ ಪ್ರಕರಣಗಳು ಮರುಕಳಿಸುತ್ತಿರುವುದರಿಂದ ಮೀನಚಂಡ ಅಗ್ನಿಶಾಮಕ ಠಾಣೆಯು ಉಂಗುರಗಳನ್ನು ಕತ್ತರಿಸಲು ಹೊಸ ಯಂತ್ರವನ್ನೇ ಖರೀದಿಸಿದೆ.(ಏಜೆನ್ಸೀಸ್​)
ಶಾಸಕನ ಕಾರಿನಲ್ಲಿ ಚಾಲಕನ ಮೃತದೇಹ ಪತ್ತೆ: ಸಾವಿಗೆ ಕಾರಣ ಕೇಳಿದ್ದಕ್ಕೆ ತಡಬಡಾಯಿಸಿದ ಎಂಎಲ್​ಸಿ!
ಮಲತಾಯಿಯನ್ನೇ ಮದ್ವೆಯಾದ ಮಗ​: ಇವರಿಬ್ಬರ ಅಹಸ್ಯ ಕೆಲಸಕ್ಕೆ ನೊಂದ ತಂದೆಯ ಗೋಳಾಟ ನೋಡಲಾಗ್ತಿಲ್ಲ!
ಮಂಡ್ಯದ ಮಟನ್ ಶಾಪ್ ಅಭಿಮಾನಿಯ ಬಗ್ಗೆ ಬೋಲ್ಡ್​ ಬ್ಯೂಟಿ ಸನ್ನಿ ಲಿಯೋನ್ ಹೇಳಿದ್ದು ಹೀಗೆ…
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve − 6 =
Remember me
