ಭರತ್​ಪುರ್​:ಹಾಡಹಗಲಲ್ಲೇ ವಾಹನನಿಬಿಡ ರಸ್ತೆಯಲ್ಲಿ ಕಾರೊಂದನ್ನು ಅಡ್ಡಗಟ್ಟಿ ಅದರಲ್ಲಿ ವೈದ್ಯ ದಂಪತಿಯನ್ನು ಬೈಕ್​ನಲ್ಲಿ ಬಂದ ದುಷ್ಕರ್ಮಿಗಳಿಬ್ಬರು ಗುಂಡಿನ ದಾಳಿ ನಡೆಸಿ ಹತ್ಯೆಗೈದಿರುವ ಘಟನೆ ರಾಜಸ್ಥಾನದ ಭರತ್​ಪುರ್​ನಲ್ಲಿ ನಡೆದಿದೆ.
ಸ್ಥಳೀಯರನ್ನು ತೀವ್ರ ಆತಂಕಕ್ಕೆ ದೂಡಿರುವ ಈ ಘಟನೆ ಶುಕ್ರವಾರ ಸಂಜೆ 4.45ರ ಸುಮಾರಿಗೆ ನಡೆದಿದೆ. ವೈದ್ಯ ದಂಪತಿ ತೆರಳುತ್ತಿದ್ದ ಕಾರನ್ನು ಓವರ್​ಟೇಕ್​ ಮಾಡಿ ಅಡ್ಡಗಟ್ಟಿ ಕೊಲೆ ಮಾಡಿ ಪರಾರಿ ಆಗಿದ್ದಾರೆ.
ಕಾರನ್ನು ಅಡ್ಡಗಟ್ಟಿದ ಬಳಿಕ ದುಷ್ಕರ್ಮಿಗಳಿಬ್ಬರು ಕಾರಿನತ್ತ ನಡೆದಿದ್ದಾರೆ. ಅದನ್ನು ನೋಡಿದ ವೈದ್ಯ ಏನೆಂದು ತಿಳಿದುಕೊಳ್ಳಲು ಕಿಟಕಿ ಗ್ಲಾಸ್​ ಅನ್ನು ಕೆಳಗೆ ಇಳಿಸುತ್ತಿದ್ದಂತೆ ಓರ್ವ ಗುಂಡಿನ ಮಳೆಗರೆದಿದ್ದಾನೆ. ಇದಾದ ಬಳಿಕ ಇಬ್ಬರು ಅಲ್ಲಿಂದ ಬೈಕ್​ನಲ್ಲಿ ಪರಾರಿಯಾಗಿದ್ದಾರೆ.
ಈ ಭಯಾನಕ ಘಟನೆಯು ಸಿಸಿಟಿವಿಯಲ್ಲಿ ದಾಖಲಾಗಿದ್ದು, ಮೇಲ್ನೋಟಕ್ಕೆ ಕೊಲೆಯ ಹಿಂದೆ ಸೇಡಿನ ಕಾರಣ ಇರಬಹುದು ಎಂದು ಪೊಲೀಸರು ಅಂದಾಜಿಸಿದ್ದಾರೆ. ವೈದ್ಯ ದಂಪತಿ ಯುವತಿಯೊಬ್ಬಳ ಕೊಲೆ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪವಿದ್ದು, ಕೊಲೆಯಾದ ಯುವತಿ ವೈದ್ಯರೊಂದಿಗೆ ಸಂಬಂಧ ಹೊಂದಿದ್ದಳು ಎನ್ನಲಾಗಿದೆ.
राजस्थान के भरतपुर में आज दिन दहाड़े डाक्टर दंपति को गोली मार कर हत्या।pic.twitter.com/tYRxxENHtf
— Raajeev Chopra (@Raajeev_Chopra)May 28, 2021

ವೈದ್ಯ ದಂಪತಿಗೆ ಗುಂಡಿನ ದಾಳಿ ಮಾಡಿರುವ ವ್ಯಕ್ತಿಯನ್ನು ಕೊಲೆಯಾದ ಯುವತಿಯ ಸಹೋದರ ಎಂದು ಗುರುತಿಸಲಾಗಿದೆ. ಎರಡು ವರ್ಷಗಳ ಹಿಂದೆ ಯುವತಿಯ ಕೊಲೆ ನಡೆದಿತ್ತು. ಈ ಪ್ರಕರಣದಲ್ಲಿ ವೈದ್ಯನ ಪತ್ನಿ ಮತ್ತು ತಾಯಿಯೇ ಆರೋಪಿಗಳಾಗಿದ್ದರು.(ಏಜೆನ್ಸೀಸ್​)
ನನ್ನದು ನಿನ್ನ ಬಾಲ್​ಗಳಿಗಿಂತ ದೊಡ್ಡದು! ಅಶ್ಲೀಲ ಪ್ರಶ್ನೆ ಕೇಳಿದವನಿಗೆ ನಟಿಯ ಖಡಕ್​ ಉತ್ತರ

ಫಿನ್​ಲ್ಯಾಂಡ್​ ಪ್ರಧಾನಿಯ ಬ್ರೇಕ್​ಫಾಸ್ಟ್​ ಬಿಲ್​ನಲ್ಲಿ ಅಕ್ರಮ ಶಂಕೆ: ಪೊಲೀಸ್​ ತನಿಖೆ ಘೋಷಣೆ

ಐದು ಅಂತಸ್ತಿನ ಕಟ್ಟಡದ ಚಪ್ಪಡಿ ನೆಲಮಹಡಿಗೆ ಅಪ್ಪಳಿಸಿ 7 ಮಂದಿ ದಾರುಣ ಸಾವು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:8 + nineteen =
Remember me
