ನವದೆಹಲಿ:ಹಿರಿಯ ಕಾಂಗ್ರೆಸ್​ ನಾಯಕ ಪಿ. ಚಿದಂಬರಂ ಅವರಿಗೆ ಸಂಬಂಧಿಸಿದ ಬಹು ವಸತಿ ಮತ್ತು ಕಚೇರಿಗಳ ಮೇಲೆ ಕೇಂದ್ರೀಯ ತನಿಖಾ ದಳ (ಸಿಬಿಐ) ಮಂಗಳವಾರ ದಾಳಿ ನಡೆಸಿದೆ. ದೆಹಲಿ, ಮುಂಬೈ ಹಾಗೂ ತಮಿಳುನಾಡಿನ ಚೆನ್ನೈ ಮತ್ತು ಶಿವಗಂಗೈನಲ್ಲಿ ಸಿಬಿಐ ದಾಳಿ ಮಾಡಿದೆ.
ಪಿ. ಚಿದಂಬರಂ ಪುತ್ರ ಕಾರ್ತಿ ಚಿದಂಬರಂ ಅವರ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಈ ಮೇಲಿನ ನಗರಗಳ ಏಳು ಕಡೆಗಳಲ್ಲಿ ಸಿಬಿಐ ಶೋಧ ಕಾರ್ಯಾಚರಣೆಯನ್ನು ನಡೆಸುತ್ತಿದೆ. 2010 ಮತ್ತು 14ರ ನಡುವಿನ ವಿದೇಶಿ ವ್ಯವಹಾರಗಳ ಸಂಬಂಧ ಕಾರ್ತಿ ಚಿದಂಬರಂ ವಿರುದ್ಧ ಸಿಬಿಐ ಹೊಸ ಪ್ರಕರಣವನ್ನು ದಾಖಲಿಸಿಕೊಂಡಿದ್ದು, ಇದಕ್ಕೆ ಸಂಬಂಧಿಸಿದಂತೆ ದಾಳಿ ಮಾಡಿದೆ.
ಇನ್ನು ಕಾರ್ತಿ ವಿರುದ್ಧ ಇರುವುದು ಇದೊಂದು ಪ್ರಕರಣವಲ್ಲ. ಹಲವು ಪ್ರಕರಣಗಳಲ್ಲಿ ಇವರ ವಿರುದ್ಧ ತನಿಖೆ ನಡೆಯುತ್ತಿದೆ. ಕಾರ್ತಿ ತಂದೆ ಚಿದಂಬರಂ ಅವರು ಹಣಕಾಸು ಸಚಿವರಾಗಿದ್ದ ಸಮಯದಲ್ಲಿ 305 ಕೋಟಿ ರೂ. ಮೊತ್ತದ ವಿದೇಶಿ ಹಣವನ್ನು ಸ್ವೀಕರಿಸುವುದಕ್ಕಾಗಿ ಐಎನ್‌ಎಕ್ಸ್ ಮೀಡಿಯಾಗೆ ವಿದೇಶಿ ಹೂಡಿಕೆ ಉತ್ತೇಜನಾ ಮಂಡಳಿ (ಎಫ್‌ಐಪಿಬಿ) ಅನುಮತಿ ನೀಡಿದ ಪ್ರಕರಣವು ಸೇರಿದೆ. ಇದೇ ಪ್ರಕರಣದಲ್ಲಿ ಹಿಂದೊಮ್ಮೆ ಕಾರ್ತಿ ಬಂಧನವಾಗಿದ್ದರು.(ಏಜೆನ್ಸೀಸ್​)
ಕಾಂಗ್ರೆಸ್ ಹೈಕಮಾಂಡ್ ತೀರ್ಮಾನದಿಂದ ಸಂಕಷ್ಟಕ್ಕೆ ಸಿಲುಕಿದ ಮಾಜಿ ಸಿಎಂ ಸಿದ್ದರಾಮಯ್ಯ?

ತಾಯಿಯಿಂದ ಬೇರ್ಪಟ್ಟ ಹುಲಿ ಮರಿಗಳನ್ನು ಸಲಹುತ್ತಿರುವ ಶ್ವಾನ: ವಿಡಿಯೋ ನೋಡಿದ್ರೆ ಫಿದಾ ಆಗೋದು ಗ್ಯಾರೆಂಟಿ!

ಲಿವಿಂಗ್‌ ಟುಗೆದರ್​ನಲ್ಲಿದ್ದ ಕಿರುತೆರೆ ಯುವನಟಿ ಪಲ್ಲವಿ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 4 =
Remember me
