ನವದೆಹಲಿ:ಎರಡನೇ ಅಲೆಯಲ್ಲಿ ಭೀಕರ ಸ್ವರೂಪ ಪಡೆದುಕೊಂಡಿರುವ ಕರೊನಾ ವೈರಸ್​ ದೇಶಾದ್ಯಂತ ಅನೇಕ ಜೀವಗಳನ್ನು ಬಲಿಪಡೆದುಕೊಳ್ಳುತ್ತಿದೆ. ಮೃತ್ಯುಕೂಪದ ನಡುವೆ ಜನರ ಸಂಜೀವಿನಿಯಾಗಿ ಉಳಿದಿರುವುದು ಕೋವಿಡ್​ ಲಸಿಕೆ ಮಾತ್ರ. ಆದರೂ, ಲಸಿಕೆ ಬಗ್ಗೆ ಪರ-ವಿರೋಧ ಚರ್ಚೆ ಆಗುತ್ತಲೇ ಇದೆ. ಆದರೆ, ದೆಹಲಿಯ ಇಂದ್ರಪ್ರಸ್ಥ ಅಪೋಲೋ ಆಸ್ಪತ್ರೆಯ ಅಧ್ಯಯನವು ಲಸಿಕೆಯ ಮೇಲೆ ಹೊಸ ಭರವಸೆಯನ್ನು ಹುಟ್ಟುಹಾಕಿದೆ.
ಅಪೋಲೋ ಆಸ್ಪತ್ರೆಯ ಅಧ್ಯಯನ ಪ್ರಕಾರ ಕರೊನಾ ಲಸಿಕೆಯ ನಂತರ ಕೇವಲ 0.06 ರಷ್ಟು ಮಂದಿಗೆ ಮಾತ್ರ ಆಸ್ಪತ್ರೆಯ ಅಗತ್ಯವಿರಲಿದೆ ಮತ್ತು ಲಸಿಕೆ ಪಡೆದ ಶೇ. 97.38 ಮಂದಿ ಕರೊನಾದಿಂದ ರಕ್ಷಣೆಗೆ ಒಳಗಾಗಲಿದ್ದಾರೆ ಎಂದು ತಿಳಿದುಬಂದಿದೆ.
ಕರೊನಾ ಲಸಿಕೆಯ ನಂತರದ ಸೋಂಕುಗಳ ಪುನರಾವರ್ತನೆಯನ್ನು ಮೌಲ್ಯಮಾಪನ ಮಾಡಲು ಅಧ್ಯಯನದ ಫಲಿತಾಂಶವನ್ನು ಆಸ್ಪತ್ರೆಯು ಬಿಡುಗಡೆ ಮಾಡಿದೆ. ಮೊದಲ ನೂರು ದಿನ ಕರೊನಾ ಲಸಿಕಾ ಅಭಿಯಾನದಲ್ಲಿ ಕೋವಿಶೀಲ್ಡ್​ ಲಸಿಕೆ ಪಡೆದ ಕರೊನಾ ಲಕ್ಷಣಗಳನ್ನು ಹೊಂದಿದ್ದ ಇಂದ್ರಪ್ರಸ್ಥ ಅಪೋಲೋ ಆಸ್ಪತ್ರೆಯ ಆರೋಗ್ಯ ಕಾರ್ಯಕರ್ತರ ಮೇಲೆಯೇ ಈ ಅಧ್ಯಯನವನ್ನು ನಡೆಸಲಾಗಿದೆ.
ಸದ್ಯ ಅಧ್ಯಯನದಲ್ಲಿ ಕಂಡುಬಂದ ಫಲಿತಾಂಶಗಳನ್ನು ಪೀರ್-ರಿವ್ಯೂಡ್ ಮೆಡಿಕಲ್ ಜರ್ನಲ್​ನಲ್ಲಿ ಪ್ರಕಟಣೆಗಾಗಿ ಪರಿಗಣನೆಯಲ್ಲಿ ಇಡಲಾಗಿದೆ.
ಅಪೋಲೋ ಹಾಸ್ಪಿಟಲ್​ ಗ್ರೂಪ್​ನ ವೈದ್ಯಕೀಯ ನಿರ್ದೇಶಕರಾದ ಡಾ. ಅನುಪಮ್​ ಸಿಬಲ್​ ಮಾಧ್ಯಮದೊಂದಿಗೆ ಮಾತನಾಡಿ, ಕರೊನಾ ಲಸಿಕಾ ಅಭಿಯಾನದ ಪ್ರಗತಿಯ ನಡುವೆಯೂ ಇತ್ತೀಚೆಗೆ ಕರೊನಾ ಎರಡನೇ ಅಲೆಯಲ್ಲಿ ಭಾರತದಲ್ಲಿ ಸೋಂಕಿನ ಪ್ರಕರಣಗಳು ಭಾರೀ ಹೆಚ್ಚಳವಾಗಿವೆ. ಲಸಿಕಾ ನಂತರವು ಸೋಂಕು ತಗುಲಿರುವ ಪ್ರಕರಣಗಳು ಕೂಡ ವರದಿಯಾಗಿವೆ. ಕೆಲವು ವ್ಯಕ್ತಿಗಳಲ್ಲಿ ಭಾಗಶಃ ಮತ್ತು ಪೂರ್ಣ ವ್ಯಾಕ್ಸಿನೇಷನ್ ಮಾಡಿದ ನಂತರ ಈ ಸೋಂಕುಗಳು ಸಂಭವಿಸಬಹುದು ಎಂದು ಹೇಳಿದ್ದಾರೆ.
ಪೀಡಿಯಾಟ್ರಿಕ್ ಗ್ಯಾಸ್ಟ್ರೋಎಂಟರಾಲಜಿಯ ಹಿರಿಯ ಸಲಹೆಗಾರರಾಗಿರುವ ಡಾ. ಸಿಬಲ್​ ತಮ್ಮ ಮಾತನನ್ನು ಮುಂದುವರಿಸಿ, ಶೇ. 100 ರಷ್ಟು ಇಮ್ಯುಟಿಯನ್ನು ಲಸಿಕೆ ನೀಡುವುದಿಲ್ಲ ಎಂಬುದು ಅಧ್ಯಯನದಲ್ಲಿ ತಿಳಿದುಬಂದಿದೆ. ನಮ್ಮ ಅಧ್ಯಯನದ ಪ್ರಕಾರ ಲಸಿಕೆ ಹಾಕಿಸಿಕೊಂಡ ಶೇ. 97.38 ಮಂದಿ ಕರೊನಾ ವೈರಸ್ ಸೋಂಕಿ​ನಿಂದ ರಕ್ಷಣೆ ಪಡೆಯುತ್ತಾರೆ ಮತ್ತು ಕೇವಲ 0.06 ರಷ್ಟು ಮಂದಿ ಮಾತ್ರ ಆಸ್ಪತ್ರೆಯ ಅಗತ್ಯವಿರುತ್ತದೆ ಎಂದು ತಿಳಿಸಿದ್ದಾರೆ.
ಲಸಿಕಾ ನಂತರವು ಸೋಂಕು ತಗುಲುವ ಸಂಭವನೀಯತೆ ಕಡಿಮೆ ಮತ್ತು ಇಂತಹ ಸೋಂಕು ಪ್ರಾಥಮಿಕವಾಗಿ ಸಣ್ಣ ಸೋಂಕುಗಳಾಗಿದ್ದು, ತೀವ್ರವಾದ ಕಾಯಿಲೆಗೆ ಕಾರಣವಾಗುವುದಿಲ್ಲ ಎಂಬುದು ಅಧ್ಯಯನದಿಂದ ತಿಳಿದುಬಂದಿದೆ. ಐಸಿಯು ದಾಖಲಾತಿಯಾಗಲಿ ಅಥವಾ ಸಾವಾಗಲಿ ಸಂಭವಿಸುವುದಿಲ್ಲ. ನಮ್ಮ ಅಧ್ಯಯನವು ವ್ಯಾಕ್ಸಿನೇಷನ್ ಪ್ರಕರಣವನ್ನು ಬಲಪಡಿಸುತ್ತದೆ ಎಂದು ಡಾ. ಸಿಬಲ್​ ತಿಳಿಸಿದ್ದಾರೆ.
ಈ ಅಧ್ಯಯನವನ್ನು ಸುಮಾರು 3,235 ಆರೋಗ್ಯ ಕಾರ್ಯಕರ್ತರ ಮೇಲೆ ನಡೆಸಲಾಗಿದೆ. ಅಧ್ಯಯನದ ಅವಧಿಯಲ್ಲಿ 3,235 ರೋಗಿಗಳಲ್ಲಿ ಕೇವಲ 85 ಮಂದಿ ಮಾತ್ರ ಕೋವಿಡ್​ ಸೋಂಕಿಗೆ ಒಳಗಾಗಿದ್ದಾರೆ. ಈ ಪೈಕಿ 65 (ಶೇಕಡಾ 2.62) ಮಂದಿ ಸಂಪೂರ್ಣವಾಗಿ ಲಸಿಕೆ ನೀಡಲಾಗಿದೆ ಮತ್ತು 20 (ಶೇಕಡಾ 2.65) ಮಂದಿಗೆ ಭಾಗಶಃ ಲಸಿಕೆ ನೀಡಲಾಗಿದೆ.(ಏಜೆನ್ಸೀಸ್​)
ಕ್ಷಮೆ ಕೇಳಲಿ ಎಂದ ರೋಹಿಣಿ ಸಿಂಧೂರಿಗೆ ಪ್ರಶ್ನೆಗಳ ಸುರಿಮಳೆಗೈದ ಶಾಸಕ ಸಾರಾ ಮಹೇಶ್!

ಸೆಕೆಂಡ್‌ ಹ್ಯಾಂಡ್‌ ಕಾರು ಕೊಳ್ಳಲು ಹೆತ್ತ ಮಗುವನ್ನೇ ಮಾರಿದ ದಂಪತಿ!

ತನ್ನೊಂದಿಗೆ ಮಲಗುವಂತೆ ನಟಿಗೆ ಆಹ್ವಾನ ನೀಡಿದ ಪ್ರಾಧ್ಯಾಪಕ: ಜಾಲತಾಣದಲ್ಲಿ ಅಳಲು ತೋಡಿಕೊಂಡ ನಟಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eleven − nine =
Remember me
