ನವದೆಹಲಿ:ದೇಶದ ಜನತೆ ಎದುರು ನೋಡುತ್ತಿದ್ದ ಆ ಕ್ಷಣ ಬಂದೇ ಬಿಟ್ಟಿದೆ. ಸುಮಾರು 70 ವರ್ಷಗಳ ಹಿಂದೆ ಅಳಿದು ಹೋಗಿದ್ದ ಚೀತಾ ಸಂತತಿ ಭಾರತಕ್ಕೆ ಮತ್ತೆ ಮರಳಿದೆ. ಪ್ರಧಾನಿ ಮೋದಿ ಹುಟ್ಟುಹಬ್ಬದ ವಿಶೇಷ ದಿನದಂದು ನಮೀಬಿಯಾದಿಂದ ವಿಶೇಷ ವಿಮಾನದಲ್ಲಿ ಹಾರಿದ 8 ಚೀತಾಗಳು ಇಂದು ಬೆಳಗ್ಗೆ ಮಧ್ಯಪ್ರದೇಶದ ಗ್ವಾಲಿಯರ್​ನಲ್ಲಿರುವ ವಾಯುಪಡೆಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿವೆ.
ನಮೀಬಿಯಾ ರಾಜಧಾನಿ ವಿಂಡ್ಹೋಕ್​ನಿಂದ ವಿಶೇಷವಾಗಿ ವಿನ್ಯಾಸಗೊಳಿಸಲಾದ ಬಿ747 ಜಂಬೋ ಜೆಟ್​ನಿಂದ 8 ಚೀತಾಗಳನ್ನು ಕರೆತರಲಾಗಿದೆ. 8ರಲ್ಲಿ 5 ಚೀತಾ ಹೆಣ್ಣು ಮತ್ತು 3 ಚೀತಾ ಗಂಡು. ಭಾರತಕ್ಕೆ ಆಗಮಿಸಿದ ಈ ವಿಶೇಷ ಅತಿಥಿಗಳನ್ನು ಪ್ರಧಾನಿ ಮೋದಿ ಅವರು ತಮ್ಮ ಹುಟ್ಟುಹಬ್ಬದಂದೇ ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನಕ್ಕೆ ಅರ್ಪಿಸಲಿದ್ದಾರೆ.
ಪ್ರಧಾನಿ ಮೋದಿ ಅವರು ನವದೆಹಲಿಯಿಂದ ಗ್ವಾಲಿಯರ್ ವಿಮಾನ ನಿಲ್ದಾಣಕ್ಕೆ ಬೆಳಿಗ್ಗೆ 9.20 ರ ಸುಮಾರಿಗೆ ಆಗಮಿಸುತ್ತಾರೆ. ಬಳಿಕ ಸುಮಾರು 165 ಕಿಮೀ ದೂರದಲ್ಲಿರುವ ಶಿಯೋಪುರ್ ಜಿಲ್ಲೆಯ ಕುನೋ ರಾಷ್ಟ್ರೀಯ ಉದ್ಯಾನವನಕ್ಕೆ (ಕೆಎನ್‌ಪಿ) ತೆರಳಲಿದ್ದಾರೆ. ಅಲ್ಲಿ ಅವರು 10.45 ರ ಸುಮಾರಿಗೆ ಚೀತಾಗಳನ್ನು ಕ್ವಾರಂಟೈನ್ ಆವರಣಗಳಿಗೆ ಬಿಡಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹಿನ್ನೆಲೆ: ಭಾರತದಲ್ಲಿ ಚೀತಾಗಳ ಸಂಖ್ಯೆಯನ್ನು ವೃದ್ಧಿಸುವ ನಿಟ್ಟಿನಲ್ಲಿ ನಮೀಬಿಯಾ ದೇಶದಿಂದ ಚೀತಾಗಳನ್ನು ಕರೆತರಲಾಗಿದೆ. ಇದಕ್ಕಾಗಿ ನಮೀಬಿಯಾ ದೇಶದಿಂದ ಚೀತಾಗಳನ್ನು ಆಮದು ಮಾಡಿಕೊಳ್ಳಲು ಒಪ್ಪಂದ ಮಾಡಲಾಗಿತ್ತು. ಈ ಪ್ರಯತ್ನದ ಫಲವಾಗಿ ಇದೀಗ ಭಾರತಕ್ಕೆ ಮೊದಲ ಹಂತದಲ್ಲಿ 8 ಚೀತಾಗಳು ಬಂದಿವೆ.(ಏಜೆನ್ಸೀಸ್​)
#WATCH| The special chartered cargo flight, carrying 8 cheetahs from Namibia, landed at the Indian Air Force Station in Gwalior, Madhya Pradesh.pic.twitter.com/xFmWod7uG5
— ANI (@ANI)September 17, 2022

ಹುಟ್ಟುಹಬ್ಬ ಹಿನ್ನೆಲೆ ಇಂದು ಪ್ರಧಾನಿ ಮೋದಿ ಫುಲ್​ ಬಿಜಿ: 4 ಕಾರ್ಯಕ್ರಮಗಳು, ಚೀತಾಗಳ ಆಗಮನವೇ ಎಲ್ಲರ ಆಕರ್ಷಣೆ

ಆಫ್ಘಾನ್​ನಲ್ಲಿ ಅಡಗಿದ್ದಾನೆ ಜಾಗತಿಕ ಉಗ್ರ ಮಸೂದ್​ ಅಜರ್: ಪಾಕ್​ ವಿದೇಶಾಂಗ ಸಚಿವರ ಹೇಳಿಕೆ

ಇವರನ್ನೂ ಪಾಸ್ ಮಾಡಿ!; ಮೂವರು ನಾಯಕಿಯರ ಜತೆ ಗಣೇಶ್ ರೈಡಿಂಗ್

Sign in to your account
Please enter an answer in digits:4 × 3 =
Remember me
