ಚೆನ್ನೈ:ಬೃಹತ್​​ ಮರವೊಂದು ಚಲಿಸುವ ಕಾರಿನ ಮೇಲೆ ಬಿದ್ದು 57 ವರ್ಷದ ಬ್ಯಾಂಕ್​ ಮ್ಯಾನೇಜರ್​ ದುರಂತ ಸಾವಿಗೀಡಾಗಿರುವ ಘಟನೆ ತಮಿಳುನಾಡು ರಾಜಧಾನಿ ಚೆನ್ನೈನಲ್ಲಿ ನಡೆದಿದೆ.
ಮೃತರನ್ನು ವಾಣಿ ಕಬಿಲನ್​ ಎಂದು ಗುರುತಿಸಲಾಗಿದೆ. ಇವರು ಇಂಡಿಯನ್​ ಓವರ್​ಸೀಸ್​ ಬ್ಯಾಂಕ್​ ಮ್ಯಾನೇಜರ್​ ಆಗಿ ಸೇವೆ ಸಲ್ಲಿಸುತ್ತಿದ್ದರು. ಈ ಘಟನೆ ಶುಕ್ರವಾರ (ಜೂನ್​ 24) ಸಂಜೆ ಜರುಗಿದೆ. ವಾಣಿ ಮತ್ತು ಅವರ ಸಹೋದರಿ ಚೆನ್ನೈನ ಕೆಕೆ ನಗರದಲ್ಲಿ ಪ್ರಯಾಣ ಮಾಡುತ್ತಿದ್ದರು. ಈ ವೇಳೆ ಬೃಹತ್​ ಮರ ಕಾರಿನ ಮೇಲೆ ಬಿದ್ದಿದೆ. ತಕ್ಷಣ ವಾಣಿ ಅವರನ್ನು ಆಸ್ಪತ್ರೆಗೆ ದಾಖಲಿಸಿದಾದರೂ ಅಷ್ಟರಲ್ಲಾಗಲೇ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರು. ವಾಣಿ ಅವರ ಸಹೋದರಿ ಎಜಿಲರಸಿ ಗಂಭೀರವಾಗಿ ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇಬ್ಬರು ಸಹೋದರಿಯರು ತಮ್ಮ ಕಾರಿನ ಹಿಂಬದಿಯಲ್ಲಿ ಕುಳಿತಿದ್ದರು. ಕಾರ್ತಿಕ್ ಎಂಬ ವ್ಯಕ್ತಿ ಕಾರು ಚಾಲನೆ ಮಾಡುತ್ತಿದ್ದ. ಲಕ್ಷ್ಮಣ ಸ್ವಾಮಿ ರಸ್ತೆಯಿಂದ ಪಿಟಿ ರಾಜನ್ ರಸ್ತೆ ಕಡೆಗೆ ಹೋಗುತ್ತಿದ್ದರು. ಚಲಿಸುವಾಗಲೇ ಕಾರಿನ ಮೇಲೆ ಬೃಹತ್ ಮರವೊಂದು ಬಿದ್ದಿದೆ. ಇದರಿಂದಾಗಿ ಸಹೋದರಿಯರು ಒಳಗೆ ಸಿಲುಕಿಕೊಂಡರು. ಆದರೆ, ಚಾಲಕ ಕಾರ್ತಿಕ್ ಬದಿಯಲ್ಲಿ ಬಾಗಿಲು ತೆರೆಯಲು ಅವಕಾಶವಿದ್ದ ಕಾರಣ, ಅಪಾಯದಿಂದ ತಪ್ಪಿಸಿಕೊಳ್ಳಲು ಸಾಧ್ಯವಾಯಿತು. ಆತ ಈಗ ತಲೆಮರೆಸಿಕೊಂಡಿದ್ದಾನೆ. ದಾರಿಹೋಕರು ಮತ್ತು ಸ್ಥಳೀಯ ನಿವಾಸಿಗಳು ಒಟ್ಟಾಗಿ ಮರವನ್ನು ಸ್ಥಳಾಂತರಿಸಿ, ವಾಣಿ ಮತ್ತು ಎಜಿಲರಸಿಯನ್ನು ಕಾರಿನಿಂದ ಹೊರಗೆ ತೆಗೆದರು. ಆದರೆ, ವಾಣಿಯನ್ನು ರಕ್ಷಿಸಲು ಸಾಧ್ಯವಾಗಲಿಲ್ಲ.
ಈಜಿಲರಸಿಯನ್ನು ಕೆಕೆ ನಗರದ ಇಎಸ್‌ಐ ಆಸ್ಪತ್ರೆಗೆ ಕಳುಹಿಸಿದರೆ, ವಾಣಿ ಅವರ ಪಾರ್ಥಿವ ಶರೀರವನ್ನು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ಕಳುಹಿಸಲಾಗಿದೆ. ಅಪಘಾತದ ಸಾವಿನ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.(ಏಜೆನ್ಸೀಸ್​)
ಈ ಫೋಟೋದಲ್ಲಿರೋ ಬಾಲಕಿ ಇಂದು ಬಾಲಿವುಡ್​​ ಬ್ಯೂಟಿ: ಅರೆ ಬೆತ್ತಲೆ ಫೋಟೋಗಳಿಂದಲೇ ಫೇಮಸ್​!

ನಕಲಿ ದಾಖಲೆ ಕೊಟ್ಟು ಶಿಕ್ಷಕರಾಗಿ ನೇಮಕಗೊಂಡಿದ್ದ 2,494 ಮಂದಿಗೆ ಗೇಟ್​ ಪಾಸ್ ಕೊಟ್ಟ ಸರ್ಕಾರ!

ಅಶ್ಲೀಲ ಫೋಟೋ ಕಳುಹಿಸಿದವನ ಅಕೌಂಟ್​ ರಿಪೋರ್ಟ್​ ಮಾಡಿದ್ದಕ್ಕೆ ಖ್ಯಾತ ಗಾಯಕಿಗೆ ಶಾಕ್​ ಕೊಟ್ಟ Instagram!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × two =
Remember me
