ಚೆನ್ನೈ:ಗರ್ಲ್​ಫ್ರೆಂಡ್​ಗೆ ಉಡುಗೊರೆ ಕೊಡಲು ತನ್ನ ಮನೆಯಲ್ಲೇ ಚಿನ್ನಾಭರಣ ಕಳ್ಳತನ ಮಾಡಿದ್ದ 40 ವರ್ಷದ ವ್ಯಕ್ತಿಯನ್ನು ಚೆನ್ನೈ ಪೊಲೀಸರು ಬಂಧಿಸಿ, ಕಂಬಿ ಹಿಂದೆ ತಳ್ಳಿದ್ದಾರೆ.
ಬಂಧಿತ ಆರೋಪಿಯನ್ನು ಶೇಖರ್​ ಎಂದು ಗುರುತಿಸಲಾಗಿದೆ. ಆತನ 22 ವರ್ಷದ ಪ್ರೇಯಸಿ ಸ್ವಾತಿಯನ್ನು ಬಂಧಿಸಲಾಗಿದೆ. ಬಂಧಿತರಿಂದ ಒಂದು ಕಾರನ್ನು ಸಹ ವಶಕ್ಕೆ ಪಡೆಯಲಾಗಿದೆ.
ವಿವರಣೆಗೆ ಬರುವುದಾದರೆ, ಆರೋಪಿ ಶೇಖರ್​ ಚೆನ್ನೈನಲ್ಲಿರುವ ಪೂನಮಲ್ಲಿ ಏರಿಯಾದಲ್ಲಿರುವ ತಾಯಿ ಮತ್ತು ಸಹೋದರ ರಾಜೇಶ್​ ಕುಟುಂಬದ ಜೊತೆಗೆ ವಾಸವಾಗಿದ್ದಾನೆ. ಕೆಲವು ಭಿನ್ನಭಿಪ್ರಾಯಗಳಿಂದಾಗಿ ಎರಡು ವರ್ಷಗಳ ಹಿಂದೆ ಶೇಖರ್​ ಪತ್ನಿ ಮಲ್ಲಿಕಾ ಮನೆ ಬಿಟ್ಟು ಹೋಗಿದ್ದಳು. ತನ್ನ ಒಡವೆ ತೆಗೆದುಕೊಳ್ಳಲೆಂದು ಮಲ್ಲಿಕಾ ಇತ್ತೀಚೆಗೆ ಗಂಡನ ಮನೆಗೆ ಮರಳಿದ್ದಳು. ಆದರೆ, ಬೀರು ನೋಡಿ ಮಲ್ಲಿಕಾ ಶಾಕ್ ಆದಳು. ಏಕೆಂದರೆ, ಅಲ್ಲಿ ಯಾವುದೇ ಚಿನ್ನಾಭರಣ ಇರಲಿಲ್ಲ.
ಇದಾದ ಬಳಿಕ ಮಲ್ಲಿಕಾ ಪೊಲೀಸ್​ ಠಾಣೆಗೆ ತೆರಳಿ ದೂರು ದಾಖಲಿಸಿದ್ದಳು. ತನಿಖೆ ಆರಂಭಿಸಿದ ಪೊಲೀಸರಿಗೆ ಕಳ್ಳ ಬೇರೆ ಯಾರು ಇಲ್ಲ. ಮನೆಯಲ್ಲಿರುವ ಶೇಖರ್​ ಎಂಬುದು ಗೊತ್ತಾಯಿತು. ವಿಚಾರಣೆ ನಡೆಸಿದಾಗ ಶೇಖರ್​ ಸಹ ತಪ್ಪೊಪ್ಪಿಕೊಂಡಿದ್ದು, ಮನೆಯಲ್ಲಿದ್ದ ಪತ್ನಿಯ 300 ಸವರನ್​ ಮತ್ತು ತನ್ನ ತಾಯಿಯ 200 ಸವರನ್ ಚಿನ್ನವನ್ನು ಕದ್ದಿರುವುದಾಗಿ ಪೊಲೀಸರ ಮುಂದೆ ಬಾಯ್ಬಿಟ್ಟಿದ್ದಾನೆ.
ಕದ್ದ ಚಿನ್ನವನ್ನು ಆರೋಪಿ ಶೇಖರ್​ ತನ್ನ ಪ್ರೇಯಸಿ ಸ್ವಾತಿಗೆ ಉಡುಗೊರೆಯಾಗಿ ನೀಡಿದ್ದಾನೆ. ಅಲ್ಲದೆ, ಕದ್ದ ಚಿನ್ನದಲ್ಲಿ ಒಂದಿಷ್ಟು ಮಾರಾಟ ಮಾಡಿ ಅದರಿಂದ ಬಂದ ಹಣದಲ್ಲಿ ಆಕೆಗಾಗಿ ಕಾರನ್ನು ಸಹ ಶೇಖರ್ ಕೊಂಡು ತಂದಿದ್ದ. ಇದೀಗ ಇಬ್ಬರು ಬಂಧಿಸಿರುವ ಪೊಲೀಸರು ಕಂಬಿ ಹಿಂದೆ ತಳ್ಳಿದ್ದಾರೆ. ಮತ್ತಷ್ಟು ತನಿಖೆ ಆರಂಭವಾಗಿದೆ.(ಏಜೆನ್ಸೀಸ್​)
ಒಂದು ಮಗುವಿನ ತಂದೆಯೊಂದಿಗೆ ಸಂಬಂಧ! ವೈಯಕ್ತಿಕ ಜೀವನದ ಗುಟ್ಟು ಬಿಚ್ಚಿಟ್ಟ ಜಯಶ್ರೀ ಆರಾಧ್ಯ

ಹೊಳೆಯುವುದೆಲ್ಲ ಚಿನ್ನವಲ್ಲ! Instagram ರೀಲ್ಸ್ ಸ್ಟಾರ್​ ಬಂಧನದ ಬೆನ್ನಲ್ಲೇ ಪೊಲೀಸರ ಸಂದೇಶ ವೈರಲ್​​

ರವಿ ಬೋಪಣ್ಣ ಟ್ರೇಲರ್ ಬಿಡುಗಡೆ; ಹೊಸ ದಾಖಲೆ ಬರೆದ 7 ನಿಮಿಷದ ಟ್ರೇಲರ್..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four + 11 =
Remember me
