ಚೆನ್ನೈ:ಟವೆಲ್​ ಧರಿಸಿ ಅರೆಬೆತ್ತಲೆಯಾಗಿ ಆನ್​ಲೈನ್​ ಕ್ಲಾಸ್​ಗೆ ಹಾಜರಾಗಿದ್ದಲ್ಲದೆ, ವಿದ್ಯಾರ್ಥಿನಿಯರೊಂದಿಗೆ ಅಸಭ್ಯವಾಗಿ ನಡೆದುಕೊಳ್ಳುತ್ತಿದ್ದ ಶಿಕ್ಷಕನ ವಿರುದ್ಧ ದೂರುಗಳು ಸುರಿಮಳೆ ಆಗುತ್ತಿದ್ದಂತೆ ಆತನನ್ನು ಚೆನ್ನೈ ಪೊಲೀಸರು ಬಂಧಿಸಿದ್ದಾರೆ.
ರಾಜಗೋಪಾಲನ್​ ಬಂಧಿತ ಶಿಕ್ಷಕ. ಅಕೌಂಟೆನ್ಸಿ ಮತ್ತು ಬಿಸಿನೆಸ್​ ಸ್ಟಡಿ ಕ್ಲಾಸ್​ ತೆಗೆದುಕೊಳ್ಳುವ ಈತನ ವಿರುದ್ಧ ಹಳೆಯ ಮತ್ತು ಹಾಲಿ ವಿದ್ಯಾರ್ಥಿಗಳು ಡಜನ್​ಗೂ ಅಧಿಕ ದೂರುಗಳನ್ನು ನೀಡಿದ ಬಳಿಕ ಸೋಮವಾರ ರಾತ್ರಿ ಶಿಕ್ಷಕನನ್ನು ಚೆನ್ನೈನ ಅಶೋಕ್​ ನಗರ ಮಹಿಳಾ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಶಿಕ್ಷಕನಿಂದ ಮೊಬೈಲ್​ ಫೋನ್​ ಮತ್ತು ಲ್ಯಾಪ್​ಟಾಪ್​ ಅನ್ನು ವಶಕ್ಕೆ ಪಡೆಯಲಾಗಿದ್ದು, ತನಿಖೆ ಆರಂಭವಾಗಿದೆ. ಆರೋಪಿ ಶಿಕ್ಷಕನ ಪತ್ನಿ ಮತ್ತು ತಾಯಿಯನ್ನು ಠಾಣೆಗೆ ಕರೆದು ವಿಚಾರಣೆ ನಡೆಸಿದ್ದಾರೆ.
ರಾಜಗೋಪಾಲನ್​ ಆರೋಪಿ ಶಿಕ್ಷಕ. ಖಾಸಗಿ ಶಾಲೆಯಲ್ಲಿ ಅಕೌಂಟೆನ್ಸಿ ಮತ್ತು ಬಿಸಿನೆಸ್​ ಸ್ಟಡಿ ಕ್ಲಾಸ್​ ತೆಗೆದುಕೊಳ್ಳುತ್ತಿದ್ದ ಈತ ವಿದ್ಯಾರ್ಥಿಗಳ ಮುಂದೆ ಕೆಟ್ಟದಾಗಿ ನಡೆದುಕೊಳ್ಳುತ್ತಾರೆಂಬ ಆರೋಪ ಕೇಳಿಬಂದಿತ್ತು. ಸ್ವತಃ ವಿದ್ಯಾರ್ಥಿಗಳೇ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡಿದ್ದರು. ಅಲ್ಲದೆ, ಶಾಲಾ ಸಿಬ್ಬಂದಿ ಜಾತಿ ಪಕ್ಷಪಾತ ಧೋರಣೆ ಹೊಂದಿದ್ದಾರೆಂಬ ಗಂಭೀರ ಆರೋಪ ಸಹ ಮಾಡಿದ್ದಾರೆ.
ಆರೋಪ ಕೇಳಿಬಂದ ಕೂಡಲೇ ಶಾಲೆಯ ಡೀನ್​ ಶಿಕ್ಷಕನನ್ನು ಅಮಾನತುಗೊಳಿಸಿ, ತನಿಖೆಗೆ ಆದೇಶಿಸಿದ್ದರು. ಆದರೆ, ಈ ಬಗ್ಗೆ ಅನೇಕ ವಿದ್ಯಾರ್ಥಿಗಳು ಠಾಣೆಗೆ ದೂರು ನೀಡಿದ ಬಳಿಕ ಆತನನ್ನು ಬಂಧಿಸಲಾಗಿದೆ. ಆರೋಪಿ ರಾಜಗೋಪಾಲನ್​, ಭೌತಿಕ ತರಗತಿಯಲ್ಲೂ ವಿದ್ಯಾರ್ಥಿನಿಯರ ಬಗ್ಗೆ ಕೆಟ್ಟದಾಗಿ ಕಾಮೆಂಟ್​ ಮಾಡುತ್ತಿದ್ದರು ಮತ್ತು ಅನುಚಿತವಾಗಿಯು ಸ್ಪರ್ಶಿಸುತ್ತಿದ್ದರು. ಇಷ್ಟೇ ಅಲ್ಲದೆ, ಚಿತ್ರವಿಚಿತ್ರ ಪ್ರಶ್ನೆಗಳನ್ನು ಕೇಳುತ್ತಿದ್ದರು ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ.
ವಿದ್ಯಾರ್ಥಿನಿಯರ ದೇಹದ ಆಕಾರದ ಬಗ್ಗೆ ಮಾತನಾಡುತ್ತಿದ್ದ ರಾಜ್​ಗೋಪಾಲನ್​, ಮಹಿಳೆಯರ ಸ್ಲೀವ್​ಲೆಸ್​ ಉಡುಗೆ ಅಥವಾ ಅಸಾಂಪ್ರದಾಯಿಕ ಬಟ್ಟೆಗಳ ಬಗ್ಗೆ ಅಣುಕಿಸುತ್ತಿದ್ದರೆಂದು ದೂರಿದ್ದಾರೆ.
ಲಾಕ್​ಡೌನ್​ ಸಮಯದಲ್ಲಿ ಬರೀ ಟವಲ್​ನಲ್ಲಿ ಮಾತ್ರ ಆನ್​ಲೈನ್​ ಕ್ಲಾಸ್​ ತೆಗೆದುಕೊಳ್ಳುತ್ತಿದ್ದರು ಎಂದು ತಿಳಿದುಬಂದಿದೆ. ವಿದ್ಯಾರ್ಥಿನಿಯರ ವಾಟ್ಸ್​ಆ್ಯಪ್​ ಪ್ರೊಫೈಲ್​ ಫೋಟೋ ಬಗ್ಗೆ ಕಾಮೆಂಟ್​ ಮಾಡುತ್ತಿದ್ದರಂತೆ. ಕೆಲವರಿಗೆ ತುಂಬಾ ಚೆನ್ನಾಗಿದ್ದೀಯಾ ಎಂದು ಕಾಮೆಂಟ್​ ಮಾಡಿದರೆ, ಇನ್ನು ಕೆಲವರಿಗೆ ತಲೆಕೆಟ್ಟ ರೀತಿಯಲ್ಲಿ ಕಾಮೆಂಟ್​ ಮಾಡುತ್ತಿದ್ದರಂತೆ. ಇಷ್ಟೇ ಅಲ್ಲದೆ, ನನ್ನೊಂದಿಗೆ ಸಿನಿಮಾ ಬನ್ನಿ ಅಂತಲೂ ವಿದ್ಯಾರ್ಥಿನಿಯರನ್ನು ಆರೋಪಿ ಶಿಕ್ಷಕ ಕರೆಯುತ್ತಿದ್ದನಂತೆ.
ಈ ಬಗ್ಗೆ ಶಾಲೆಯ ಮ್ಯಾನೇಜ್​ಮೆಂಟ್​ ಅನೇಕ ಬಾರಿ ದೂರು ಸಹ ನೀಡಲಾಗಿದೆ. ಆದರೆ, ಈವರೆಗೂ ಒಮ್ಮೆಯು ಕ್ರಮ ತೆಗೆದುಕೊಂಡಿರಲಿಲ್ಲ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದರು.(ಏಜೆನ್ಸೀಸ್​)
ಆನ್​ಲೈನ್​ ಕ್ಲಾಸ್​ನಲ್ಲಿ ಅರೆಬೆತ್ತಲೆಯಾದ ಶಿಕ್ಷಕನ ಕರಾಳ ಮುಖ ಬಯಲು ಮಾಡಿದ ವಿದ್ಯಾರ್ಥಿನಿಯರು..!

ಹಣ್ಣು ಬೇಕಾ ಮಾವಿನಹಣ್ಣು…. ರೀಲ್‌ ಅಲ್ಲ ಇದು ರಿಯಲ್‌: ತೋಟದಲ್ಲಿ ಫುಲ್‌ ಬಿಜಿ ಈ ತುಮಕೂರು ಬೆಡಗಿ

ಪಂಜಾಬ್‌ ರೈತರಿಗಾಗಿ ಕಪ್ಪು ಬಾವುಟ ಹಾರಿಸಿದ ಸಿಧು- ಬ್ಲ್ಯಾಕ್‌ ಡೇ ಆಚರಣೆ: ವಿಡಿಯೋ ವೈರಲ್‌

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × one =
Remember me
