ರಾಯ್ಪುರ್​:ಅಸಹಜ ಲೈಂಗಿಕ ಕ್ರಿಯೆಯನ್ನು ನಿರಾಕರಿಸಿದ್ದಕ್ಕೆ 20 ವರ್ಷದ ಯುವಕನೊಬ್ಬ ಅಪ್ರಾಪ್ತ ಬಾಲಕನಿಗೆ ಚಾಕು ಇರಿದು ಕೊಲೆ ಮಾಡಿರುವ ಆತಂಕಕಾರಿ ಘಟನೆ ಛತ್ತೀಸ್​ಗಢದ ಬೆಮೆತರಾ ಜಿಲ್ಲೆಯಲ್ಲಿ ನಡೆದಿದೆ.
ಆರೋಪಿಯನ್ನು ಪಂಕಜ್​ ವಿಶ್ವಕರ್ಮ ಎಂದು ಗುರುತಿಸಲಾಗಿದೆ. ಸೋಮವಾರ ಬಿಜಭತ ಮುರುಮ್​​ ಬಳಿಯಿರುವ ನಿರ್ಜನ ಪ್ರದೇಶದ ಬಳಿ ಕರೆದೊಯ್ದು ಹರಿತವಾದ ಚಾಕುವಿನಿಂದ ಬಾಲಕನನ್ನು ಕೊಲೆ ಮಾಡಿ, ಬಳಿಕ ಮೃತದೇಹವನ್ನು ಬಚ್ಚಿಟ್ಟು ಪರಿಯಾಗಿದ್ದ ಎಂದು ಬೆಮೆತರಾ ಪೊಲೀಸ್​ ಠಾಣೆಯ ಅಧಿಕಾರಿ ಪ್ರೇಮ್​ ಪ್ರಕಾಶ್​ ಅವಧಿಯಾ ಮಂಗಳವಾರ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಮಗ ಮನೆಗೆ ಬರದಿದ್ದನ್ನು ನೋಡಿ ಮೃತ ಬಾಲಕನ ಪಾಲಕರು ನಾಪತ್ತೆ ದೂರನ್ನು ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದಾಗ ನಿರ್ಜನ ಪ್ರದೇಶದಲ್ಲಿ ಮೃತದೇಹವೊಂದು ಪತ್ತೆಯಾಗಿರುವುದು ಪೊಲೀಸರಿಗೆ ಗೊತ್ತಾಗಿದೆ. ಹೋಗಿ ಪರಿಶೀಲಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಪರಾರಿಯಾಗಿರುವ ಆರೋಪಿ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.(ಏಜೆನ್ಸೀಸ್​)
ನ್ಯಾಯಾಧೀಶರ ಕಟು ಟೀಕೆ ವಿರುದ್ಧ ಮೇಲ್ಮನವಿ: ನಟ ವಿಜಯ್​ ಪರ ತೀರ್ಪು ನೀಡಿದ ಮದ್ರಾಸ್​ ಹೈಕೋರ್ಟ್ ​

ಆರೋಗ್ಯ ಸಚಿವರೇ ಈ ನಿರ್ಲಕ್ಷ್ಯಕ್ಕೆ ಯಾರು ಹೊಣೆ? ನಾಗರಹಾವು ಕಚ್ಚಿದ ಮಹಿಳೆಗೆ ಚುಚ್ಚುಮದ್ದು ಸಿಗದೇ ಸಾವು

ಗಣರಾಜ್ಯೋತ್ಸವದಂದು ಸೈನಿಕನಾಗಿ ಮಿಂಚಿದ ಅಪ್ಪು! ‘ಜೇಮ್ಸ್’ ವಿಶೇಷ ಪೋಸ್ಟರ್‌ ವೈರಲ್…

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:four × one =
Remember me
