ಅಂಬಿಕಾಪುರ:ಛತ್ತೀಸ್​ಗಢದ ಸರ್ಗುಜಾ ಮೂಲದ ವ್ಯಕ್ತಿಯೊಬ್ಬ ತನ್ನ ಏಳು ವರ್ಷದ ಮಗಳ ಮೃತದೇಹವನ್ನು ತನ್ನ ಭುಜದ ಮೇಲೆ ಹೊತ್ತು ಸಾಗುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಶುಕ್ರವಾರ ಸಿಕ್ಕಾಪಟ್ಟೆ ಶೇರ್​ ಆಗಿದ್ದು, ಆರೋಗ್ಯ ಮಂತ್ರಿ ಟಿ.ಎಸ್​. ಸಿಂಗ್​ ಡಿಯೋ ತನಿಖೆಗೆ ಆದೇಶಿಸಿದ್ದಾರೆ.
ಅಧಿಕಾರಿಗಳ ಪ್ರಕಾರ ಶುಕ್ರವಾರ ಬೆಳಗ್ಗೆ ಸರ್ಗುಜಾ ಜಿಲ್ಲೆಯ ಲಖನ್​ಪುರ್​ ಗ್ರಾಮದಲ್ಲಿ ಆರೋಗ್ಯ ಕೇಂದ್ರದಲ್ಲಿ ಬಾಲಕಿ ಮೃತಪಟ್ಟಳು ಮತ್ತು ಮತ್ತು ಮೃತದೇಹ ರವಾನಿಸುವ ವಾಹನ ಬರುವ ಮುನ್ನವೇ ಆಕೆಯ ತಂದೆ ಬಾಲಕಿಯ ಶವವನ್ನು ತೆಗೆದುಕೊಂಡು ಹೋದರು ಎಂದು ಮಾಹಿತಿ ನೀಡಿದ್ದಾರೆ.
ಮೃತ ಬಾಲಕಿಯ ತಂದೆಯ ಹೆಸರು ಈಶ್ವರ್​ ದಾಸ್​. ಈತ ಅಮ್ದಾಲ್​ ಗ್ರಾಮದ ನಿವಾಸಿ. ಅನಾರೋಗ್ಯ ಪೀಡಿತ ತನ್ನ ಮಗಳು ಸುರೇಖಾಳನ್ನು ಲಖನ್​ಪುರ್​ ಗ್ರಾಮದಲ್ಲಿರುವ ಸಮುದಾಯ ಆರೋಗ್ಯ ಕೇಂದ್ರಕ್ಕೆ ಶುಕ್ರವಾರ ಮುಂಜಾನೆ ಕರೆತಂದಿದ್ದ. ಬಾಲಕಿಯ ಆಮ್ಲಜನಕ ಮಟ್ಟ 60ಕ್ಕೂ ತುಂಬಾ ಕಡಿಮೆ ಇತ್ತು. ಆಕೆ ಕಳೆದ ಕೆಲವು ದಿನಗಳಿಂದ ತೀವ್ರ ಜ್ವರದಿಂದ ಬಳಲುತ್ತಿದ್ದಳು ಎಂದು ಪಾಲಕರು ಇದೇ ಸಂದರ್ಭದಲ್ಲಿ ತಿಳಿಸಿದ್ದಾರೆ. ಆಕೆ ಪರಿಸ್ಥಿತಿ ತುಂಬಾ ಬಿಗಡಾಯಿಸಿದ್ದರಿಂದ ಅಗತ್ಯ ಚಿಕಿತ್ಸೆಯನ್ನು ನೀಡಲಾದರೂ ಚಿಕಿತ್ಸೆ ಫಲಿಸದೇ ಶುಕ್ರವಾರ ಬೆಳಗ್ಗೆ 7.30ರ ಸುಮಾರಿಗೆ ಮೃತಪಟ್ಟಳು ಎಂದು ಆರೋಗ್ಯ ಕೇಂದ್ರದ ಗ್ರಾಮೀಣ ವೈದ್ಯಕೀಯ ಸಹಾಯಕ (ಆರ್​ಎಂಎ) ಡಾ. ವಿನೋದ್​ ಭಾರ್ಗವ್​ ತಿಳಿಸಿದ್ದಾರೆ.
ಶೀಘ್ರದಲ್ಲೇ ಶವ ಸಾಗಾಟ ವಾಹನ ಬರಲಿದೆ ಎಂದು ಕುಟುಂಬ ಸದಸ್ಯರಿಗೆ ತಿಳಿಸಿದ್ದೇವೆ. ಆದರೆ, ವಾಹನ ಬೆಳಗ್ಗೆ 9:20 ರ ಸುಮಾರಿಗೆ ಬಂದಿತು. ಆದರೆ, ಆ ಹೊತ್ತಿಗೆ ಪಾಲಕರು ಬಾಲಕಿಯ ದೇಹವನ್ನು ತೆಗೆದುಕೊಂಡು ಹೊರಟು ಹೋಗಿದ್ದರು ಎಂದು ಹೇಳಿದರು. ವೀಡಿಯೊದಲ್ಲಿ, ವ್ಯಕ್ತಿ ತನ್ನ ಹೆಗಲ ಮೇಲೆ ಶವವನ್ನು ಹೊತ್ತುಕೊಂಡು ಹೋಗುತ್ತಿರುವ ದೃಶ್ಯವನ್ನು ಕಾಣಬಹುದು. ಮನೆ ತಲುಪಲು ಕಾಲ್ನಡಿಗೆಯಲ್ಲಿ ಸುಮಾರು 10 ಕಿ.ಮೀ ದೂರ ಕ್ರಮಿಸಿದ್ದಾರೆ.
ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿರುವ ಹಿನ್ನೆಲೆಯಲ್ಲಿ ಶುಕ್ರವಾರ ಜಿಲ್ಲಾ ಕೇಂದ್ರ ಅಂಬಿಕಾಪುರದಲ್ಲಿದ್ದ ಆರೋಗ್ಯ ಸಚಿವ ಟಿಎಸ್‌ ಸಿಂಗ್‌ ಡಿಯೋ ಅವರು ಈ ಕುರಿತು ತನಿಖೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಮುಖ್ಯ ವೈದ್ಯಕೀಯ ಮತ್ತು ಆರೋಗ್ಯ ಅಧಿಕಾರಿಗೆ ಸೂಚಿಸಿದ್ದಾರೆ.
ನಾನು ವೀಡಿಯೋ ನೋಡಿದ್ದೇನೆ. ಇದು ಗೊಂದಲದ ಸಂಗತಿಯಾಗಿದೆ. ಈ ಬಗ್ಗೆ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸಿಎಂಎಚ್‌ಒಗೆ ತಿಳಿಸಿದ್ದೇನೆ. ಅಲ್ಲಿ ನೇಮಕಗೊಂಡಿದ್ದರೂ ಕರ್ತವ್ಯ ನಿರ್ವಹಿಸಲು ಸಾಧ್ಯವಾಗದವರನ್ನು ತೆಗೆದುಹಾಕಬೇಕು ಎಂದು ಹೇಳಿದ್ದೇನೆ ಎಂದು ಸಚಿವರು ಹೇಳಿದರು.(ಏಜೆನ್ಸೀಸ್​)
Surguja: Chhattisgarh Health Min TS Singh Deo orders probe after video of a man carrying body of his daughter on his shoulders went viral
Concerned health official from Lakhanpur should have made the father understand to wait for hearse instead of letting him go, Deo said(25.3)pic.twitter.com/aN5li1PsCm
— ANI MP/CG/Rajasthan (@ANI_MP_CG_RJ)March 26, 2022

10 ಮಹಿಳೆಯರ ಜತೆ ದೈಹಿಕ ಸಂಬಂಧ ಹೊಂದಿದ್ದೇನೆ: ನಟನ ಹೇಳಿಕೆ ಖಂಡಿಸದೇ ಕೆಂಗಣ್ಣಿಗೆ ಗುರಿಯಾದ ನವ್ಯಾ!

ಗ್ರಾಹಕರಿಗೆ ಮತ್ತೆ ಶಾಕ್​: 4ನೇ ಬಾರಿ ಪೆಟ್ರೋಲ್​-ಡೀಸೆಲ್​ ಬೆಲೆ ಏರಿಕೆ, ಐದು ದಿನದಲ್ಲಿ 3.10 ರೂ. ಹೆಚ್ಚಳ

ಸಣ್ಣ ವಿಚಾರಕ್ಕೆ ಫೋನ್​ನಲ್ಲೇ ಕಿತ್ತಾಡಿಕೊಂಡ ಪ್ರೇಮಿಗಳು: ಮರುದಿನವೇ ನಡೆಯಿತು ಘೋರ ದುರಂತ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen − 8 =
Remember me
