ವಿಜಯವಾಡ:ಪ್ರಕೃತಿಯಲ್ಲಿ ವಿವಿಧ ರೀತಿಯ ವಿಸ್ಮಯಗಳು ನಡೆಯುತ್ತಿರುತ್ತದೆ. ಇದಕ್ಕೆ ಪೂರಕವಾಗಿ ಆಂಧ್ರ ಪ್ರದೇಶದ ನಗರಿ ಮುನ್ಸಿಪಾಲಿಟಿಯಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ.
ಸಾಮಾನ್ಯವಾಗಿ ಮೊಟ್ಟೆಯನ್ನು ಹೊಡೆದಾಗ ಒಳಗೆ ಹಳದಿ ಲೋಳೆ ಮತ್ತು ಅದರ ಸುತ್ತ ಬಿಳಿ ಲೋಳೆ ಇರುತ್ತದೆ. ಆದರೆ, ಮೊಟ್ಟೆ ಒಳಗಡೆ ಮೊಟ್ಟೆ ಇರುವುದನ್ನು ಎಂದಾದರೂ ಗಮನಿಸಿದ್ದೀರಾ? ಈ ಪ್ರಶ್ನೆಗೆ ಬಹುತೇಕ ಇಲ್ಲ ಅಂತಾನೇ ಉತ್ತರ ನೀಡುತ್ತಾರೆ. ಆದರೆ, ನಗರಿ ಪಟ್ಟಣದಲ್ಲಿ ಇದು ನಡೆದಿದೆ.
ನಗರಿಯ ಬಸ್​ ನಿಲ್ದಾಣದ ಪಕ್ಕದಲ್ಲಿರುವ ಟಿಫನ್​ ಕೇಂದ್ರ ವಿಚಿತ್ರ ಘಟನೆಗೆ ಸಾಕ್ಷಿಯಾಗಿದೆ. ಆಮ್ಲೆಟ್​ ಹಾಕಲೆಂದು ಹೋಟೆಲ್​ ಮಾಲೀಕ ಮೊಟ್ಟೆಯನ್ನು ಹೊಡೆದಾಗ ಅದರ ಒಳಗೆ ಇನ್ನೊಂದು ಮೊಟ್ಟೆ ನೋಡಿ ಶಾಕ್​​ ಆಗಿದ್ದಾನೆ. ಮೊಟ್ಟೆಯ ಜತೆಗೆ ಹಳದಿ ಲೋಳೆ ಮತ್ತು ಬಿಳಿ ಲೋಳೆಯು ಸಹ ಇತ್ತು.
ಈ ವಿಸ್ಮಯವನ್ನು ನೋಡಿ ಹೋಟೆಲ್​ಗೆ ಬಂದಿದ್ದ ಗ್ರಾಹಕರು ಕೂಡ ಶಾಕ್​ ಆಗಿದ್ದಾರೆ. ಈ ವಿಚಾರ ತಿಳಿದ ಅನೇಕರು ಕೂಡ ವಿಚಿತ್ರ ಘಟನೆಯನ್ನು ನೋಡಲು ಹೋಟೆಲ್​ ಬಳಿ ಧಾವಿಸಿ ಬಂದರು. ಇದಕ್ಕೆ ಸಂಬಂಧಿಸಿದ ಫೋಟೋವೊಂದು ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಅದನ್ನು ನೋಡಿದವರು ಬಾಯಿ ಮೇಲೆ ಬೆರಳಿಟ್ಟುಕೊಳ್ಳುತ್ತಿದ್ದಾರೆ.(ಏಜೆನ್ಸೀಸ್​)
ಬೆಳ್ತಂಗಡಿಯಲ್ಲಿ ಗೋಡಂಬಿ ಆಕಾರದಲ್ಲಿ ಮೊಟ್ಟೆ ಇಡುತ್ತಿರುವ ಕೋಳಿ! ಮೊಟ್ಟೆ ನೋಡಿ ಬೆರಗಾದ ಮಂದಿ

ಶಾಸಕರ ಒಗ್ಗಟ್ಟಿಗೆ ಬಿಜೆಪಿ ನಾಯಕರ ಕಸರತ್ತು: ಸಚಿವರ ಬಗೆಗಿನ ಅಸಮಾಧಾನ, ಮನಸ್ತಾಪ ಸರಿಪಡಿಸಲು ಪ್ರಯತ್ನ..

ಆರ್​ಎಸ್​ಎಸ್ ಕುರಿತ ಟೀಕೆಗೆ ಪ್ರತಿಕ್ರಿಯೆ ಬೇಡ: ರಾಜ್ಯ ಬಿಜೆಪಿ ನಾಯಕರಿಗೆ ವರಿಷ್ಠರ ಸೂಚನೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen + 9 =
Remember me
