ನವದೆಹಲಿ:ಪೂರ್ವ ಲಡಾಖ್​ ಗಡಿಯಲ್ಲಿ ಚೀನಾದ ಉಪಟಳ ಹೆಚ್ಚಾಗುತ್ತಿದೆ. ಗಡಿಯಲ್ಲಿ ತನ್ನ ಗಸ್ತು ಚಟುವಟಿಕೆಯನ್ನು ಹೆಚ್ಚಿಸಿರುವ ಚೀನಾ, ವಾರ್ಷಿಕ ಸಮರಾಭ್ಯಾಸ ಮಾಡುತ್ತಿರುವುದು ಕಳವಳಕಾರಿಯಾಗಿದೆ ಎಂದು ಪೂರ್ವ ಸೇನಾ ಕಮಾಂಡರ್​ ಲೆಫ್ಟಿನೆಂಟ್​ ಜನರಲ್​ ಮನೋಜ್​ ಪಾಂಡೆ ಹೇಳಿದ್ದಾರೆ.
ಚೀನಾ ಸಂಯೋಜಿತ ಜಂಟಿ ಸಮಾರಾಭ್ಯಸಗಳನ್ನು ನಡೆಸುತ್ತಿದೆ. ತಮ್ಮ ಸೇನಾ ಪಡೆಗಳ ಜತೆಗೆ ಅನೇಕ ಸಲಕರಣೆಗಳನ್ನು ಜತೆಗೆ ತರುತ್ತಿದ್ದಾರೆ. ಈ ವರ್ಷ ತಮ್ಮ ಉಪಟಳವನ್ನು ಹೆಚ್ಚಿಸಿರುವು ಚೀನಾ, ಅದನ್ನು ಹಾಗೇ ಮುಂದುವರಿಸಿಕೊಂಡು ಬರುತ್ತಿದ್ದಾರೆ ಎಂದು ಪಾಂಡೆ ತಿಳಿಸಿದರು.
ಕೆಲವು ಪ್ರದೇಶಗಳಲ್ಲಿ ಪೀಪಲ್​ ಲಿಬರೇಷನ್​ ಆರ್ಮಿಯ ಗಸ್ತು ಚಟುವಟಿಕೆ ಹೆಚ್ಚಾಗಿದೆ. ಆದರೆ, ಗಸ್ತಿನಲ್ಲಿ ಯಾವುದೇ ಗಮನಾರ್ಹ ಬದಲಾವಣೆಗಳನ್ನು ನಾವು ಗಮನಿಸಿಲ್ಲ. ಆಳವಾದ ಮತ್ತು ಪ್ರಮುಖವಾದ ಸ್ಥಳಗಳಲ್ಲಿ ವಾರ್ಷಿಕ ಸಮರಾಭ್ಯಾಸವನ್ನು ಚೀನಾ ಹೆಚ್ಚಿಸಿದೆ. ಕಳೆದು ಒಂದು ವರ್ಷದಿಂದ ಚೀನಾ-ಭಾರತ ಗಡಿಯಲ್ಲಿ ನಡೆಯುತ್ತಿರುವ ಬೆಳವಣಿಗೆ ನಮಗೆ ತುಂಬಾ ಕಳವಳಕಾರಿಯಾಗಿದೆ. ಪೂರ್ವ ಸೇನೆ ಕೂಡ ತನ್ನ ತಯಾರಿಯನ್ನು ಇನ್ನಷ್ಟು ವೃದ್ಧಿಸಿದ್ದು, ಯಾವುದೇ ಸಂದರ್ಭದಲ್ಲೂ ಸಮರ್ಥ ಪ್ರತಿಕ್ರಿಯೆ ನೀಡಲು ಸಿದ್ಧವಾಗಿದೆ ಎಂದು ಪಾಂಡೆ ಅವರು ಹೇಳಿದರು.
ವಾಸ್ತವ ಗಡಿ ರೇಖೆ (ಎಲ್​ಎಸಿ)ಯ ಬಳಿಯೂ ಚೀನಾ ತನ್ನ ಚಟುವಟಿಕೆಯನ್ನು ಹೆಚ್ಚು ಮಾಡಿದೆ. ಅಲ್ಲದೆ, ಅನೇಕ ಮೂಲಭೂತ ಸೌಕರ್ಯಗಳನ್ನು ನಿರ್ಮಾಣ ಮಾಡುತ್ತಿರುವುದು ಕೂಡ ಭಾರತ ಪಾಲಿಗೆ ಕೊಂಚ ಸಮಸ್ಯೆ ಆಗುವ ಲಕ್ಷಣಗಳು ಕಾಣುತ್ತಿವೆ. ಸದ್ಯ ಗಡಿಯಲ್ಲಿ ಕಣ್ಗಾವಲು ಪಡೆ ಗಸ್ತಿನಲ್ಲಿದ್ದು, ಸಂಭವನೀಯ ಯಾವುದೇ ಸಮಸ್ಯೆಯನ್ನು ಎದುರಿಸಲು ನಾವು ಸಾಕಷ್ಟು ಬಲವನ್ನು ಹೊಂದಿದ್ದೇವೆ ಎಂದು ಆರ್ಮಿ ಕಮಾಂಡರ್​ ತಿಳಿಸಿದರು.(ಏಜೆನ್ಸೀಸ್​)
ತೆಲುಗಿನ ಖ್ಯಾತ ಉದ್ಯಮಿ ನನ್ನ ತಂದೆ ಅಂದ ನಟಿ ಶ್ರೀಲೀಲಾಗೆ ಎದುರಾಯ್ತು ಸಂಕಷ್ಟ..!

ಗರ್ಭಿಣಿ ಆನೆ ಕೊಂದ ಪ್ರಕರಣ: ಒಂದೂವರೆ ವರ್ಷದ ಬಳಿಕ ಪೊಲೀಸರ ಮುಂದೆ ಶರಣಾದ ಆರೋಪಿ..!

ತೆಲುಗಿನ ಖ್ಯಾತ ನಿರೂಪಕಿ ಅನುಸೂಯ ಬಟ್ಟೆಯ ಬಗ್ಗೆ ಶಾಕಿಂಗ್​ ಹೇಳಿಕೆ ನೀಡಿದ ಹಿರಿಯ ನಟ ಶ್ರೀನಿವಾಸ್​ ರಾವ್​..!

ಇಂಜಿನಿಯರಿಂಗ್ ವಿದ್ಯಾರ್ಥಿಗಳು ಜೀವಶಾಸ್ತ್ರವನ್ನು ಓದಬೇಕು: ಈ ಶೈಕ್ಷಣಿಕ ವರ್ಷದಿಂದಲೇ ಜಾರಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × two =
Remember me
