ಚೆನ್ನೈ:ಅಪ್ರಾಪ್ತ ಶಾಲಾ ವಿದ್ಯಾರ್ಥಿನಿಯನ್ನು ಅಪಹರಿಸಿ ಅತ್ಯಾಚಾರ ಮಾಡಿದ ಆರೋಪದ ಮೇಲೆ ಸಿನಿಮಾ ಗ್ರೂಪ್​ ಡಾನ್ಸರ್​ ಸೇರಿದಂತೆ ಮೂವರನ್ನು ಚೆನ್ನೈ ಪೊಲೀಸರು ಬಂಧಿಸಿದ್ದಾರೆ.
ಒಂದೇ ಏರಿಯಾದಲ್ಲಿ ವಾಸವಿದ್ದ ಜಯಸೂರ್ಯ ಎಂಬಾತನ ಜತೆ ಅರುಂಬಕ್ಕಮ್ ಮೂಲದ 14 ವರ್ಷದ ವಿದ್ಯಾರ್ಥಿನಿಗೆ ಪರಿಚಯವಾಗಿತ್ತು. ನಾನು ಸಿನಿಮಾದಲ್ಲಿ ಗ್ರೂಪ್​ ಡಾನ್ಸರ್​ ಆಗಿದ್ದೇನೆ ಎಂದು ಹೇಳಿ ಹುಡುಗಿಯನ್ನು ಪರಿಚಯ ಮಾಡಿಕೊಂಡಿದ್ದ. ಅಲ್ಲದೆ, ಪ್ರೀತಿ ಮಾಡುತ್ತಿರುವುದಾಗಿ ನಂಬಿಸಿದ್ದ. ಪ್ರೀತಿಯ ಹೆಸರಲ್ಲಿ ವಿದ್ಯಾರ್ಥಿನಿಯನ್ನು ಖಾಸಗಿ ಹೋಟೆಲ್​ನ ಬಾಡಿಗೆ ಕೋಣೆಗೆ ಕರೆದೊಯ್ದು ಅತ್ಯಾಚಾರ ಮಾಡಿದ್ದಾನೆ.
ಇದೇ ಸಂದರ್ಭದಲ್ಲಿ ಮಗಳು ಕಾಣಿಸುತ್ತಿಲ್ಲ ಎಂದು ವಿದ್ಯಾರ್ಥಿನಿಯ ಪಾಲಕರು ಅರುಂಬಕ್ಕಮ್​ ಪೊಲೀಸ್​ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿ ಶೋಧ ಕಾರ್ಯ ಆರಂಭಿಸಿದಾಗ ಯುವಕರ ಗುಂಪೊಂದು ಹುಡುಗಿಯರನ್ನು ಹೋಟೆಲ್​ಗೆ ಕರೆತಂದು ಅವರ ಜೊತೆ ಸಮಯ ಕಳೆಯುವ ಹವ್ಯಾಸ ರೂಢಿಸಿಕೊಂಡಿದ್ದಾರೆ ಎಂಬ ರಹಸ್ಯ ಮಾಹಿತಿ ಪೊಲೀಸರಿಗೆ ದೊರೆಯುತ್ತದೆ.
ಈ ಸುಳಿವನ್ನು ಆಧರಿಸಿ ಹೋಟೆಲ್​ ಮೇಲೆ ದಾಳಿ ಮಾಡಿದಾಗ ಸಂತ್ರಸ್ತ ವಿದ್ಯಾರ್ಥಿನಿ ಪತ್ತೆಯಾಗಿದ್ದಾಳೆ. ಅದೇ ಕೋಣೆಯಲ್ಲಿದ್ದ ಮೂವರನ್ನು ಸಹ ಪೊಲೀಸರು ಬಂಧಿಸಿದ್ದಾರೆ. ಮೂವರ ವಿರುದ್ಧವೂ ಪೊಕ್ಸೊ ಕಾಯ್ದೆ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದ್ದು, ವಿಚಾರಣೆ ನಡೆಯುತ್ತಿದೆ.(ಏಜೆನ್ಸೀಸ್​)
ಸಮಂತಾ ಯಾಕೆ ಈ ರೀತಿ ಟ್ವೀಟ್​ ಮಾಡಿದ್ರು? ನೆಟ್ಟಿಗರ ತಲೆಗೆ ಹುಳ ಬಿಟ್ಟ ಸೌತ್​ ಬ್ಯೂಟಿಯ ಈ ಒಂದು ಟ್ವೀಟ್!​

ಪ್ರಭಾಸ್​ ನಟನೆಯ ಸಲಾರ್​ ಮೇಲೆ KGF-2 ಗೆಲುವಿನ ಒತ್ತಡ! ಸಾಹೋ ಅನುಭವ ಮರೆಯುವಂತಿಲ್ಲ

ಖ್ಯಾತ ಗಾಯಕಿ ಶಿಲ್ಪಿ ರಾಜ್​ ಅಶ್ಲೀಲ​ ವಿಡಿಯೋ ಲೀಕ್​: ಲೈವ್​​​ನಲ್ಲಿ ಕಣ್ಣೀರಿಟ್ಟು ಮನವಿ ಮಾಡಿದ ಗಾಯಕಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:6 − four =
Remember me
