ಕೊಹಿಮಾ:ಶನಿವಾರ ರಾತ್ರಿ ನಾಗಾಲ್ಯಾಂಡ್​ನ ಮಾನ್​ ಜಿಲ್ಲೆಯ ಒಟಿಂಗ್​ನಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಅಧಿಕ ಮಂದಿ ಗ್ರಾಮಸ್ಥರು ಮೃತಪಟ್ಟಿರುವುದಾಗಿ ವರದಿಯಾಗಿದೆ. ಇದುವರೆಗೂ ಘಟನಾ ಸ್ಥಳದಲ್ಲಿ 6 ಶವಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದ್ದು, ಇನ್ನು ಹೆಚ್ಚಿನ ಶವಗಳು ಸಿಗಬಹುದೆಂದು ಅಂದಾಜಿಸಲಾಗಿದೆ.
ಈ ಘಟನೆಯ ಕುರಿತು ಪ್ರತಿಕ್ರಿಯಿಸಿರುವ ನಾಗಾಲ್ಯಾಂಡ್ ಮುಖ್ಯಮಂತ್ರಿ ನೆಫಿಯು ರಿಯೊ, ಇದು “ಅತ್ಯಂತ ಖಂಡನೀಯ” ಎಂದು ಹೇಳಿದ್ದಾರೆ. ನ್ಯಾಯವನ್ನು ಒದಗಿಸಲು “ಉನ್ನತ ಮಟ್ಟದ” ವಿಶೇಷ ತನಿಖಾ ತಂಡವು ” ಪ್ರಕರಣದ ತನಿಖೆಯನ್ನು ಮಾಡುತ್ತದೆ ಎಂದಿದ್ದಾರೆ. ಸಮಾಜದ ಎಲ್ಲ ವರ್ಗದವರೂ ಶಾಂತಿಯಿಂದ ಇರಬೇಕೆಂದು ಇದೇ ಸಂದರ್ಭದಲ್ಲಿ ಮನವಿ ಮಾಡಿದ್ದಾರೆ.
ಬಂಡುಕೋರರ ಬಗ್ಗೆ ದೊರೆತ ಸುಳಿವಿನ ಮೇರೆಗೆ ಭದ್ರತಾ ಪಡೆಗಳು ತಿರು-ಓಟಿಂಗ್ ರಸ್ತೆಯಲ್ಲಿ ದಾಳಿ ನಡೆಸಲು ಹೊಂಚು ಹಾಕಿದ್ದರು. ಆದರೆ ಗ್ರಾಮಸ್ಥರನ್ನು ದಂಗೆಕೋರರು ಎಂದು ತಪ್ಪಾಗಿ ಭಾವಿಸಿ ಈ ದುರ್ಘಟನೆ ಸಂಭವಿಸಿದೆ ಎಂದು ಮೂಲಗಳು ತಿಳಿಸಿವೆ.
The unfortunate incident leading to killing of civilians at Oting, Mon is highly condemnable.Condolences to the bereaved families & speedy recovery of those injured. High level SIT will investigate & justice delivered as per the law of the land.Appeal for peace from all sections
— Neiphiu Rio (@Neiphiu_Rio)December 5, 2021

ಘಟನೆಯ ನಂತರ ಕೋಪಗೊಂಡ ಸ್ಥಳೀಯರು ಕೆಲವು ವಾಹನಗಳಿಗೆ ಬೆಂಕಿ ಹಚ್ಚಿದ್ದರಿಂದ ಸ್ಥಳದಲ್ಲಿ ಉದ್ವಿಗ್ನತೆ ಉಂಟಾಗಿದೆ. ವಾಹನಗಳು ಭದ್ರತಾ ಪಡೆಗಳಿಗೆ ಸೇರಿದವು ಎಂದು ವರದಿಯಾಗಿದೆ. ಘಟನೆಯಲ್ಲಿ ಓರ್ವ ಭದ್ರತಾ ಪಡೆಯ ಯೋಧನು ಸಹ ಹುತಾತ್ಮರಾಗಿದ್ದಾರೆ.(ಏಜೆನ್ಸೀಸ್​)
ನನ್ಮೇಲೆ ರೇಪ್​ ಆಗಿದೆ ಎಂದು ತಾಯಿಯ ವಿರುದ್ಧವೇ 13 ವರ್ಷದ ಮಗನ ದೂರು: ತನಿಖೆಯಲ್ಲಿ ಸತ್ಯಾಂಶ ಬಯಲು

‘ಯಾಹೂ’ನಲ್ಲಿ ಈ ವರ್ಷ ಹೆಚ್ಚು ಹುಡುಕಲ್ಪಟ್ಟ ಭಾರತೀಯ ಸೆಲೆಬ್ರಿಟಿಗಳ ಪಟ್ಟಿಯಲ್ಲಿ ಪುನೀತ್ ಪಡೆದ ಸ್ಥಾನವಿದು…​ ​

ಯುವತಿಯ ದ್ವಿಚಕ್ರ ವಾಹನದ ನಂಬರ್​​ ಪ್ಲೇಟ್​ನಲ್ಲಿ ಸೆಕ್ಸ್ ಪದ! RTO ಎಡವಟ್ಟಿನಿಂದ ಮಾನಸಿಕ ಆಘಾತ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 1 =
Remember me
